Download Our App

Follow us

Home » ರಾಷ್ಟ್ರೀಯ » ಇಂಗ್ಲೆಂಡ್​ನಿಂದ ಭಾರತಕ್ಕೆ 100 ಟನ್ ಚಿನ್ನ ವಾಪಸ್ ತಂದ ಆರ್​ಬಿಐ..!

ಇಂಗ್ಲೆಂಡ್​ನಿಂದ ಭಾರತಕ್ಕೆ 100 ಟನ್ ಚಿನ್ನ ವಾಪಸ್ ತಂದ ಆರ್​ಬಿಐ..!

ನವದೆಹಲಿ : ಆರ್​ಬಿಐ ಇಂಗ್ಲೆಂಡ್‌ನಲ್ಲಿದ್ದ ತನ್ನ 100 ಟನ್‌ ಚಿನ್ನವನ್ನು ದೇಶಿಯ ಖಜಾನೆಗೆ ವಾಪಸ್ ತರಿಸಿದೆ. ಇದೇ ಮೊದಲ ಬಾರಿಗೆ 100 ಟನ್ ಚಿನ್ನವನ್ನು ಇಂಗ್ಲೆಂಡ್‌​ನಿಂದ ವಾಪಸ್ ತರಲಾಗಿದೆ. ಈ ವರ್ಷದ ಮಾರ್ಚ್ ಅಂತ್ಯಕ್ಕೆ ಆರ್‌ಬಿಐ ಬಳಿ 822 ಟನ್ ಚಿನ್ನ ಸಂಗ್ರಹ ಆಗಿದೆ. ಇದರ ಪೈಕಿ 413 ಟನ್ ಚಿನ್ನ ವಿದೇಶಿ ಖಜಾನೆಗಳಲ್ಲೇ ಇತ್ತು. ಮುಂದಿನ ದಿನಗಳಲ್ಲೂ ಇದೇ ರೀತಿ ಮತ್ತಷ್ಟು ಚಿನ್ನ ಭಾರತಕ್ಕೆ ತರಲು ನಿರ್ಧಾರ ಮಾಡಲಾಗಿದೆ.

1991ರ ನಂತರ ಇದೇ ಮೊದಲ ಬಾರಿಗೆ ಭಾರೀ ಪ್ರಮಾಣದ ಚಿನ್ನ ಭಾರತಕ್ಕೆ ತರಲಾಗಿದೆ. ಆರ್‌ಬಿಐ ಕಳೆದ ಕೆಲವು ವರ್ಷಗಳಿಂದ ಚಿನ್ನವನ್ನು ಖರೀದಿಸುತ್ತಿದ್ದು, ಕಳೆದ ಹಣಕಾಸು ವರ್ಷದಲ್ಲಿ 27.5 ಟನ್ ಚಿನ್ನವನ್ನು ಖರೀದಿಸಿತ್ತು. ಆ ಮೂಲಕ ಜಾಗತಿಕ ಮಟ್ಟದಲ್ಲಿ ಆರ್‌ಬಿಐ ಚಿನ್ನ ಸಂಗ್ರಹಣೆಯನ್ನು ಹೆಚ್ಚಿಸಿದೆ. ಈ ಚಿನ್ನವನ್ನು ಕೆಲವೊಂದು ವ್ಯವಸ್ಥಾಪನಾ ಕಾರಣ ಮತ್ತು ವೈವಿಧ್ಯಮಯ ಸಂಗ್ರಹಣೆ ಉದ್ದೇಶದಿಂದ ದೇಶಿಯ ಖಜಾನೆಗಳಿಗೆ ತರಲಾಗುತ್ತಿದೆ.

ಈಗ ಆರ್​ಬಿಐ ಖರೀದಿಸಿದ ಚಿನ್ನವನ್ನು ತುರ್ತು ಸಂದರ್ಭಗಳಲ್ಲಿ, ದೇಶದ ಆರ್ಥಿಕ ಸ್ಥಿತಿ ಕುಸಿದಾಗ ಬಳಕೆ ಮಾಡಲಾಗುತ್ತದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಾಗ, ರೂಪಾಯಿ ಮೌಲ್ಯ ಕುಸಿಯದಂತೆ ಚಿನ್ನದ ಬಳಕೆ ಮಾಡಲಾಗುತ್ತದೆ. ಇಂಗ್ಲೆಂಡ್‌ನ ಬ್ಯಾಂಕ್ ಆಫ್ ಇಂಗ್ಲೆಂಡ್ ಬೇರೆ ಬೇರೆ ದೇಶಗಳಿಗೆ ಚಿನ್ನ ಸಂಗ್ರಹಿಸಿಡುವ ಖಜಾನೆಯಾಗಿದೆ. ಭಾರತದ ಆರ್‌ಬಿಐ, ತನ್ನ ಚಿನ್ನ ಸಂಗ್ರಹದ ಸ್ಥಳದ ಬದಲಾವಣೆ ಬಗ್ಗೆ ಹೊಸ ತೀರ್ಮಾನ ಕೈಗೊಳ್ಳಲಿದೆ.

1991ರಲ್ಲಿ ಚಂದ್ರಶೇಖರ್ ಸರ್ಕಾರ ದೇಶ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾಗ ಚಿನ್ನ ಅಡವಿಟ್ಟು ದೇಶ ಮುನ್ನಡೆಸಿತ್ತು. 15 ವರ್ಷದ ಹಿಂದೆ ಆರ್‌ಬಿಐ ಐಎಂಎಫ್​ನಿಂದ 200 ಟನ್ ಚಿನ್ನ ಖರೀದಿಸಿತ್ತು. ಇಂಗ್ಲೆಂಡ್‌ನಿಂದ ತಂದ ಚಿನ್ನವನ್ನು ಮುಂಬೈನ ಮಿಂಟ್ ರಸ್ತೆಯ ಆರ್‌ಬಿಐ ಖಜಾನೆ, ನಾಗಪುರದ ಖಜಾನೆಗಳಲ್ಲಿ ಸಂಗ್ರಹ ಮಾಡಿತ್ತು. ಸದ್ಯ ಆರ್​ಬಿಐ ಖಜಾನೆಗೆ 100 ಟನ್‌ ಚಿನ್ನ ಬಂದಿದ್ದು ಖುಷಿಯ ವಿಚಾರವಾಗಿದೆ.

ಇದನ್ನೂ ಓದಿ : 2024ರ ಸಂಸತ್​​ ಮಹಾ ಸಮರಕ್ಕೆ ಇಂದು ತೆರೆ – 57 ಕ್ಷೇತ್ರಗಳಲ್ಲಿಂದು ಕೊನೆಯ ಹಂತದ ವೋಟಿಂಗ್​..!

 

 

 

Leave a Comment

DG Ad

RELATED LATEST NEWS

Top Headlines

ಬಿಗ್ ಬಾಸ್ ವೇದಿಕೆಯಲ್ಲಿ ಸಲ್ಮಾನ್ ಖಾನ್‌ಗೆ ಮದುವೆ ಪ್ರಪೋಸಲ್ ಇಟ್ಟ ನಟಿ..!

ಬಿಗ್ ಬಾಸ್, ಅತ್ಯಂತ ಜನಪ್ರಿಯ ಕಾರ್ಯಕ್ರಮ. ಹಿಂದಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಅನ್ನು ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನಡೆಸಿಕೊಡುತ್ತಿದ್ದಾರೆ. ಇದೀಗ ಬಿಗ್ ಬಾಸ್ ವೇದಿಕೆಯಲ್ಲಿ

Live Cricket

Add Your Heading Text Here