Download Our App

Follow us

Home » ಸಿನಿಮಾ » ಕ್ರೇಜಿಲೋಕದ ಕನಸುಗಾರ ರವಿಚಂದ್ರನ್ ಮತ್ತೆ ‘ಪ್ರೇಮಲೋಕ’ಕ್ಕೆ ಎಂಟ್ರಿ – ಮೇ 30ಕ್ಕೆ ಶೂಟಿಂಗ್ ಶುರು..!

ಕ್ರೇಜಿಲೋಕದ ಕನಸುಗಾರ ರವಿಚಂದ್ರನ್ ಮತ್ತೆ ‘ಪ್ರೇಮಲೋಕ’ಕ್ಕೆ ಎಂಟ್ರಿ – ಮೇ 30ಕ್ಕೆ ಶೂಟಿಂಗ್ ಶುರು..!

ಕ್ರೇಜಿ ಸ್ಟಾರ್‌ ರವಿಚಂದ್ರನ್‌ ಅವರಿಗೆ ಚಿತ್ರರಂಗದಲ್ಲಿ ಭಾರಿ ಜನಪ್ರಿಯತೆ ತಂದುಕೊಟ್ಟ ಸಿನಿಮಾ ಎಂದರೆ ಅದು ‘ಪ್ರೇಮಲೋಕ’. 1987ರಲ್ಲಿ ತೆರೆಕಂಡ ‘ಪ್ರೇಮಲೋಕ’ ಸಿನಿಮಾವನ್ನು ಸ್ವತಃ ರವಿಚಂದ್ರನ್ ನಿರ್ದೇಶನ ಮಾಡಿದ್ದರು. ಇಂದಿಗೂ ಆ ಸಿನಿಮಾದ ಹಾಡುಗಳು ಜನಜನಿತವಾಗಿರುವುದು ಅದರ ಜನಪ್ರಿಯತೆಗೆ ಸಾಕ್ಷಿ. ಇದೀಗ ‘ಪ್ರೇಮಲೋಕ 2’ ಸಿನಿಮಾ ಮಾಡುವುದಕ್ಕೆ ನಟ ರವಿಚಂದ್ರನ್ ಮುಂದಾಗಿದ್ದಾರೆ.

ಕನಸುಗಾರ, ಕ್ರೇಜಿಸ್ಟಾರ್, ಶೋಮ್ಯಾನ್, ಹಠವಾದಿ ಹೀಗೆ ಸ್ಯಾಂಡಲ್​ವುಡ್​ನಲ್ಲಿ ಹತ್ತಾರು ಹೆಸರುಗಳಿಂದ ಕೆರೆಸಿಕೊಳ್ಳೋ ಸ್ಟಾರ್ ಅಂದ್ರೆ ರವಿಚಂದ್ರನ್. ಹೌದು, ಸ್ಯಾಂಡಲ್​ವುಡ್ ಪ್ರೇಮಲೋಕದ ರಾಯಬಾರಿ ಅಂತ್ಲೇ ಕರೆಸಿಕೊಳ್ಳೋ ಹೀರೋ. ಸಿನಿಮಾಗಳ ವಿಚಾರದಲ್ಲಿ ರವಿಚಂದ್ರನ್ ಅಪ್ಪಟ ಮಾಂತ್ರಿಕ. ಹೂವು, ಹಣ್ಣು, ಹೆಣ್ಣನ್ನು ಮೋಹಕವಾಗಿ ತೋರಿಸೋ ಕ್ರೇಜಿಸ್ಟಾರ್ ಕನ್ನಡ ಚಿತ್ರರಂಗ ಕಂಡ ಅದ್ಬುತ ಟೆಕ್ನಿಷಿಯನ್. ಹೀಗಾಗಿ ರವಿಚಂದ್ರನ್ ಸಿನಿಮಾಗಳು ಅಂದ್ರೆ ಅವತ್ತಿನಿಂದ ಇವತ್ತಿನವರೆಗೆ ಕುತೂಹಲ ಸಿನಿರಸಿಕರಲ್ಲಿ ಇದ್ದೇ ಇದೆ.

ಇವತ್ತು ಕೂಡಾ ತನ್ನದೇ ಕಲ್ಪನಾ ಲೋಕದಲ್ಲಿ ಕಥೆಯನ್ನ ಹುಡುಕುತ್ತಾ, ಹಗಲುಗನಸು ಕಾಣ್ತಾ ಸಿನಿಮಾವನ್ನ ಮಾಡ್ತಾನೇ ಇರೋ ರವಿಚಂದ್ರನ್ ಮತ್ತೊಂದು ಪ್ರೇಮಲೋಕ ಸೃಷ್ಟಿಸೋಕೆ ರೆಡಿಯಾಗಿದ್ದಾರೆ. ಹೌದು ಕ್ರೇಜಿಸ್ಟಾರ್ ರವಿಚಂದ್ರನ್ ಅಂದಾಕ್ಷಣ ಥಟ್ಟನೆ ನೆನಪಾಗುವ ಸಿನಿಮಾ ಪ್ರೇಮಲೋಕ. ಈ ಸಿನಿಮಾ ಸೃಷ್ಟಿದ ದಾಖಲೆಗಳು ಒಂದಲ್ಲ, ಎರಡಲ್ಲ. ಈ ಹೊತ್ತಿಗೂ ಎವರ್ ಗ್ರೀನ್ ಸಿನಿಮಾಗಳ ಸಾಲಿನಲ್ಲಿ ಪ್ರೇಮಲೋಕ ಯಾವತ್ತಿಗೂ ಕಾಣಿಸಿಕೊಳ್ಳತ್ತೆ. ಇದೀಗ ರವಿಚಂದ್ರನ್ ಅವರು ಈ ಸಿನಿಮಾದ ಪಾರ್ಟ್ 2 ಮಾಡುವ ಸೂಚನೆ ಕೊಟ್ಟಿದ್ದಾರೆ.

ಹಂಪಿ ಉತ್ಸವದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ರವಿಚಂದ್ರನ್, ತಮ್ಮ ‘ಪ್ರೇಮಲೋಕ 2’ ಚಿತ್ರದ ಕನಸನ್ನು ಅಭಿಮಾನಿಗಳ ಮುಂದೆ ಹಂಚಿಕೊಂಡಿದ್ದಾರೆ. ಮೇ 30ರಿಂದ ಶೂಟಿಂಗ್ ಕೂಡ ಶುರುವಾಗಲಿದೆ ಎಂದು ಹೇಳಿದ್ದಾರೆ. ಜೊತೆಗೆ ಈ ಸಿನಿಮಾದಲ್ಲಿ ಬರೋಬ್ಬರಿ 25 ಹಾಡುಗಳು ಇರಲಿವೆ ಎಂದು ಹೇಳಿಕೆಯನ್ನೂ ನೀಡಿದ್ದಾರೆ. ಹೌದು, ಪ್ರೇಮಲೋಕ ಸಿನಿಮಾದ ಅಷ್ಟೂ ಹಾಡುಗಳು ಹಿಟ್ ಆಗಿದ್ದವು. ಈ ಹೊತ್ತಿಗೂ ಈ ಹಾಡುಗಳು ಟ್ರೆಂಡಿಂಗ್ ನಲ್ಲಿವೆ. ರವಿಚಂದ್ರನ್ ಅಂಥದ್ದೇ ಮತ್ತಷ್ಟು ಹಾಡುಗಳನ್ನು ಪ್ರೇಮಲೋಕ 2 ಚಿತ್ರಕ್ಕೆ ಅಳವಡಿಸಲಿದ್ದಾರಂತೆ. ಈ ಹಾಡುಗಳು ಕಥೆಯ ರೂಪದಲ್ಲೂ ಬರಲಿವೆ ಅನ್ನುವುದು ತುಂಬಾ ವಿಶೇಷ.

ಇನ್ನು ರವಿಚಂದ್ರನ್ ‘ಪ್ರೇಮಲೋಕ 2’ ಸಿನಿಮಾದ ಸ್ಕ್ರಿಪ್ಟ್ನಲ್ಲಿ ಸತತ ಒಂದು ವರ್ಷದ ಬ್ಯುಸಿಯಲಿದ್ದಾರಂತೆ. ಕೆಲ ಮೂಲಗಳ ಪ್ರಕಾರ ಪ್ರೇಮಲೋಕ ಪಾರ್ಟ್ 2ಗೆ ರವಿಮಾಮನ ಪುತ್ರ ಮನೋರಂಜನ್ ಹೀರೋ ಆಗಿ ನಟಿಸಲಿದ್ದಾರಂತೆ. ಅಂದ್ಹಾಗೆ ಕ್ರೇಜಿಸ್ಟಾರ್ ಮತ್ತೆ ಪ್ರೇಮಲೋಕಕ್ಕೆ ಜಾರಿದ್ದಾರೆ. ಮತ್ತೆ ಪ್ರೇಮಲೋಕ ಕಟ್ಟಿಕೊಡ್ತೀನಿ ಅಂತಾ ಶಪಥ ಮಾಡಿದ್ದಾರೆ. ಹಂಪಿ ಉತ್ಸವದಲ್ಲಿ ತಮ್ಮ ಮುಂದಿನ ಕನಸುಗಾರ ರವಿಚಂದ್ರನ್ ತಮ್ಮ ಕನಸಿನ ಪ್ರಾಜೆಕ್ಟ್​ನ್ನು  ಪ್ರೇಕ್ಷಕರ ಮುಂದೆ ಬಿಚ್ಚಿಟ್ಟಿದ್ದಾರೆ.

ಕನ್ನಡದ ಮಾಸ್ಟರ್ ಪೀಸ್ ಸಿನಿಮಾಗಳಲ್ಲಿ ಪ್ರೇಮಲೋಕ ಕೂಡ ಒಂದು. ಅಂತಹದ್ದೇ ಮತ್ತೊಂದು ಪ್ರೇಮಲೋಕ ಸೃಷ್ಟಿಸ್ತಿರುವ ರವಿ ಅದಕ್ಕಾಗಿ ಕಳೆದೊಂದು ವರ್ಷದಿಂದ ದುಡಿತ್ತಿದ್ದಾರೆ. ಶೀಘ್ರದಲ್ಲೇ ಆ ಪ್ರಾಜೆಕ್ಟ್ ಅನೌನ್ಸ್ ಮಾಡೋದ್ರ ಬಗ್ಗೆಯೂ ಸುಳಿವು ಬಿಟ್ಟುಕೊಟ್ಟಿದ್ದಾರೆ. ಒಟ್ಟಾರೆಯಾಗಿ ಕನ್ನಡ ಸಿನಿರಸಿಕರಿಗೆ ಪ್ರೇಮಲೋಕ ಪಾರ್ಟ್ 2 ಮೂಲಕ ಕ್ರೇಜಿಸ್ಟಾರ್ ಕ್ರೇಜ್ ಕ್ರಿಯೇಟ್ ಮಾಡಲಿದ್ದಾರೆ.

ಇದನ್ನೂ ಓದಿ : ಡಿಸಿಎಂ ಡಿ.ಕೆ.ಶಿವಕುಮಾರ್​​​ಗೆ ಬಿಗ್ ರಿಲೀಫ್ – ED ಕೇಸ್​ ವಜಾಗೊಳಿಸಿದ ಸುಪ್ರೀಂಕೋರ್ಟ್..!​

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here