Download Our App

Follow us

Home » ಅಪರಾಧ » ಫಾರ್ಮ್​​ ಹೌಸ್​ನಲ್ಲಿ ರೇವ್​ ಪಾರ್ಟಿ ಪ್ರಕರಣ – ನಶೆಯಲ್ಲಿ ತೇಲಾಡಿದವರಿಗೆ ಸಂಕಷ್ಟ ಫಿಕ್ಸ್..!​

ಫಾರ್ಮ್​​ ಹೌಸ್​ನಲ್ಲಿ ರೇವ್​ ಪಾರ್ಟಿ ಪ್ರಕರಣ – ನಶೆಯಲ್ಲಿ ತೇಲಾಡಿದವರಿಗೆ ಸಂಕಷ್ಟ ಫಿಕ್ಸ್..!​

ಬೆಂಗಳೂರು : ನಗರದ ಹೊರವಲಯದ ಫಾರ್ಮ್ ಹೌಸ್​ನಲ್ಲಿ ರೇವ್ ಪಾರ್ಟಿ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಶೆಯಲ್ಲಿ ತೇಲಾಡಿದವರಿಗೆ ಸಂಕಷ್ಟ ಶುರುವಾಗಿದೆ. ಇಡೀ ರಾತ್ರಿ ಮೋಜು-ಮಸ್ತಿ ಮಾಡಿದವರಿಗೆ ಸಿಸಿಬಿ ಪೊಲೀಸರು ನೋಟಿಸ್​ ನೀಡಲು ತಯಾರಿ ನಡೆಸುತ್ತಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿಯ  ಜಿಅರ್ ಫಾರ್ಮ್ ಹೌಸ್​​ನಲ್ಲಿ ಪಾರ್ಟಿ ನಡೆಯುತ್ತಿರುವ ಖಚಿತ ಮಾಹಿತಿ ಮೇರೆಗೆ ಸಿಸಿಬಿ ದಾಳಿ ನಡೆಸಿದಾಗ ಆಂಧ್ರ ಪ್ರದೇಶ ಮತ್ತು ಬೆಂಗಳೂರು ಮೂಲದ ಸುಮಾರು 100 ಕ್ಕೂ ಹೆಚ್ಚು ಜನ ಇದರಲ್ಲಿ ಭಾಗಿಯಾಗಿದ್ದು ಗೊತ್ತಾಗಿದೆ. ಅವರಲ್ಲಿ ತೆಲುಗು ನಟಿ ಹೇಮಾ ಸೇರಿದಂತೆ ಕೆಲ ಬೇರೆ ನಟಿಯರೂ ಇದ್ದರು ಎಂಬ ಮಾಹಿತಿ ಲಭ್ಯವಾಗಿತ್ತು. ಇದರೊಂದಿಗೆ ಪಾರ್ಟಿಯಲ್ಲಿ 45 ಗ್ರಾಂ ಡ್ರಗ್ಸ್, ಎಂಡಿಎಂಎ, ಕೋಕೆನ್ ಸೇರಿ ಹಲವು ಮಾದರಿಯ ಮಾದಕ ವಸ್ತುಗಳು ಪತ್ತೆಯಾಗಿದ್ದು, ಫಾರ್ಮ್​​ ಹೌಸ್​ನ ಇಂಚಿಂಚೂ ಜಾಲಾಡಿದ ಸಿಸಿಬಿ ಟೀಂ ಡ್ರಗ್​ ಪೆಡ್ಲರ್, ಪಾರ್ಟಿ ಆಯೋಜಕ ವಾಸು​ ಸೇರಿದಂತೆ ಐವರನ್ನು ಬಂಧಿಸಿ ಉಳಿದವರನ್ನು ಬಿಟ್ಟು ಕಳಿಸಿತ್ತು.

ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ, CCB ಪೊಲೀಸರು ಪಾರ್ಟಿಯಲ್ಲಿ ಭಾಗಿಯಾಗಿದ್ದ, 101 ಮಂದಿಯ ಬ್ಲಡ್ ಸ್ಯಾಂಪಲ್ ಪಡೆದಿದ್ದಾರೆ. ಬ್ಲಡ್​ ರಿಪೋರ್ಟ್​ ಬಂದ ನಂತರ ಡ್ರಗ್ಸ್​ ಅಂಶ ಕಂಡು ಬಂದವರಿಗೆ ನೋಟಿಸ್​ ನೀಡಲು ತಯಾರಿ ನಡೆಸುತ್ತಿದ್ದಾರೆ. ಬ್ಲಡ್ ಸ್ಯಾಂಪಲ್ ರಿಪೋರ್ಟ್​ಗಾಗಿ ಸಿಸಿಬಿ ಪೊಲೀಸರು ಕಾಯುತ್ತಿದ್ದು, ಡ್ರಗ್ಸ್ ತೆಗೆದುಕೊಂಡಿರೋದು ಕನ್ಫರ್ಮ್​​ ಆದ್ರೆ ಕ್ರಮ ಕೈಗೊಳ್ಳುವ ತಯಾರಿ ನಡೆಸುತ್ತಿದೆ.

ಇನ್ನು ಪಾರ್ಟಿ ಆಯೋಜಕ ವಾಸು, ಅರುಣ್, ಸಿದ್ದಿಕ್, ರಣ್ ಧೀರ್ ಮತ್ತು ರಾಜ್ ಭಾವನನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಪಾರ್ಟಿಗೆ ಡ್ರಗ್ಸ್ ತಂದಿದ್ದು ಎಲ್ಲಿಂದ..? ಕಿಂಗ್​ ಪಿನ್​​ ಯಾರು..? ಈ ಎಲ್ಲಾ ಮಾಹಿತಿಗಳನ್ನು ಸಿಸಿಬಿ ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ.

ಇದನ್ನೂ ಓದಿ : ರಾಜ್ಯದಲ್ಲಿ ಇನ್ನೂ ಒಂದು ವಾರ ವರುಣನ ಅಬ್ಬರ – ಭಾರೀ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ..!

Leave a Comment

DG Ad

RELATED LATEST NEWS

Top Headlines

ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ : ಪುರುಷರ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟ ನವದೀಪ್ ಸಿಂಗ್..!

ಪ್ಯಾರಿಸ್ : ಪ್ಯಾರಾಲಿಂಪಿಕ್ಸ್​ನಲ್ಲಿ ಶನಿವಾರ ನಡೆದ ಪುರುಷರ ಜಾವೆಲಿನ್ ಥ್ರೋ ಎಫ್​41 ಸ್ಪರ್ಧೆಯಲ್ಲಿ ಭಾರತದ ಜಾವೆಲಿನ್ ಎಸೆತಗಾರ ನವದೀಪ್ ಸಿಂಗ್ ಚಿನ್ನದ ಪದಕ ಗೆದ್ದಿದ್ದಾರೆ. 47.32 ಮೀಟರ್‌ ದೂರಕ್ಕೆ

Live Cricket

Add Your Heading Text Here