Download Our App

Follow us

Home » ಅಪರಾಧ » ರೇವ್​​ ಪಾರ್ಟಿ ಪ್ರಕರಣ : ಸಿಸಿಬಿ ಮುಂದೆ ವಿಚಾರಣೆಗೆ ಹಾಜರಾಗಲು ಕಾಲವಕಾಶ ಕೇಳಿದ ನಟಿ ಹೇಮಾ..!

ರೇವ್​​ ಪಾರ್ಟಿ ಪ್ರಕರಣ : ಸಿಸಿಬಿ ಮುಂದೆ ವಿಚಾರಣೆಗೆ ಹಾಜರಾಗಲು ಕಾಲವಕಾಶ ಕೇಳಿದ ನಟಿ ಹೇಮಾ..!

ಬೆಂಗಳೂರು : ಬೆಂಗಳೂರಿನ ಜಿ.ಆರ್​.ಫಾರ್ಮ್​ ಹೌಸ್​​​ನಲ್ಲಿ ನಡೆದಿದ್ದ ರೇವ್​ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ನಟಿ ಹೇಮಾ ಸೇರಿ 8 ಜನರಿಗೆ ಮೇ 27 ರಂದು ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್​​ ನೀಡಿತ್ತು. ಆದರೆ ಇದೀಗ  ನಟ ಹೇಮಾ ಮತ್ತೆ ನಾಟಕ ಶುರು ಮಾಡಿಕೊಂಡಿದ್ದಾರೆ.

ರೇವ್​​ ಪಾರ್ಟಿಯಲ್ಲಿ ಭಾಗಿಯಾಗಿದ್ದ 103 ಜನರ ರಕ್ತದ ಮಾದರಿಯನ್ನು ಸಂಗ್ರಹಿಸಿ ಟೆಸ್ಟ್​​ ಮಾಡಲಾಗಿತ್ತು. ಅವರಲ್ಲಿ ಕೆಲವು ಮಂದಿ ಡ್ರಗ್ಸ್​​ ಸೇವಿಸಿರುವುದು ದೃಢವಾಗಿದ್ದು, ಹೇಮಾ ಬ್ಲಡ್​​ ರಿಪೋರ್ಟ್​ನಲ್ಲಿ ಡ್ರಗ್ಸ್ ಅಂಶ ಇರುವುದು ​​ಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ ಸಿಸಿಬಿ ನಟಿ ಹೇಮಾ ಸೇರಿ 8 ಮೇ 27 ರಂದು ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್​​ ನೀಡಿತ್ತು.

ಇದೀಗ ಮತ್ತೆ ಡ್ರಾಮ ಶುರು ಮಾಡಿರುವ ತೆಲುಗು ನಟಿ  ಹೇಮಾ ಸಿಸಿಬಿ ಮುಂದೆ ವಿಚಾರಣೆಗೆ ಹಾಜರಾಗಲು ಕಳ್ಳಾಟ ಮಾಡುತ್ತಿದ್ದು, ವೈರಲ್ ಫೀವರ್ ಕಾರಣ ನೀಡಿ ಒಂದು ವಾರ ಕಾಲವಕಾಶ ಕೇಳಿದ್ದಾರೆ. ಆದರೆ ಮನವಿ ಪರಿಗಣಿಸದ ಸಿಸಿಬಿ ಮತ್ತೊಂದು ನೋಟಿಸ್​​ ನೀಡಲು ತಯಾರಿ ನಡೆಸುತ್ತಿದೆ.

ಇದಕ್ಕೂ ಮುನ್ನ ನಟಿ ಹೇಮಾ ರೇವ್​ ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದಂತೆ, ಈ ಪಾರ್ಟಿಯಲ್ಲಿ ಇರಲಿಲ್ಲ ಎಂದು ವಿಡಿಯೋ ಮೂಲಕ ಸ್ಪಷ್ಟಪಡಿಸಿದ್ದರು. ಅದರ ಬೆನ್ನಲ್ಲೇ ಅಸಲಿ ವಿಷಯ ಗೊತ್ತಾಗಿತ್ತು. ರೇವ್​ ಪಾರ್ಟಿ ನಡೆದ ಬೆಂಗಳೂರಿನ ರೆಸಾರ್ಟ್​ನಿಂದಲೇ ವಿಡಿಯೋ ಮಾಡಿ ‘ನಾನು ಹೈದರಾಬಾದ್​​ನಲ್ಲಿ ಇದ್ದೀನಿ’ ಎಂದು ಹೇಮಾ ಸುಳ್ಳು ಹೇಳಿ ಮಂಕು ಬೂದಿ ಎರೆಚಿದ್ದರು.

ಇದನ್ನೂ ಓದಿ : ಕುಡಿದು ಅಡ್ಡಾದಿಡ್ಡಿ ಬೈಕ್ ಚಲಾಯಿಸಿದ ಆಸ್ಪತ್ರೆ ಸಿಬ್ಬಂದಿ : ಹಿಗ್ಗಾಮುಗ್ಗಾ ಥಳಿಸಿದ ಸಾರ್ವಜನಿಕರು..!

 

Leave a Comment

DG Ad

RELATED LATEST NEWS

Top Headlines

MLA ಮುನಿರತ್ನ ವಿರುದ್ಧ ರೇಪ್ ಆರೋಪದ ಬೆನ್ನಲ್ಲೇ ಮಾಜಿ ಕಾರ್ಪೊರೇಟರ್ ಪತಿಯ ಹನಿಟ್ರ್ಯಾಪ್ ವಿಡಿಯೋ ವೈರಲ್..!

ಬೆಂಗಳೂರು : ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಬಿಜೆಪಿ ಶಾಸಕ ಮುನಿರತ್ನ ಸೇರಿ ಏಳು ಮಂದಿಯ ವಿರುದ್ಧ ರಾಮನಗರ ಜಿಲ್ಲಾ ವ್ಯಾಪ್ತಿಯ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ

Live Cricket

Add Your Heading Text Here