Download Our App

Follow us

Home » ಅಪರಾಧ » ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ : ಶಂಕಿತ ವ್ಯಕ್ತಿಯ ಚಲನವಲನ ಸಿಸಿಟಿವಿಯಲ್ಲಿ ಸೆರೆ..!

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ : ಶಂಕಿತ ವ್ಯಕ್ತಿಯ ಚಲನವಲನ ಸಿಸಿಟಿವಿಯಲ್ಲಿ ಸೆರೆ..!

ಬೆಂಗಳೂರು : ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಸಿಸಿಟಿವಿ ದೃಶ್ಯದಲ್ಲಿ ಶಂಕಿತನ ಸುಳಿವು ಪತ್ತೆಯಾಗಿದೆ. ಶಂಕಿತ ವ್ಯಕ್ತಿ ತಲೆ ಮೇಲೆ ವೈಟ್ ಕ್ಯಾಪ್​​​ ಹಾಕಿಕೊಂಡು, ಮುಖಕ್ಕೆ ಮಾಸ್ಕ್, ಕಣ್ಣಿಗೆ ಕೂಲಿಂಗ್ ಗ್ಲಾಸ್, ಬೆನ್ನ ಮೇಲೆ ಬ್ಯಾಗ್​ ಹೊತ್ತು ಬಂದಿದ್ದ.

ಕೈಗೆ ಕಟ್ಟಿಕೊಂಡಿರೋ ವಾಚ್​ನಲ್ಲಿ ಟೈಂ ನೋಡ್ತಾ ಹೋಗ್ತಿದ್ದ, ಟೈಂ ನೋಡುತ್ತಾ ಶಂಕಿತ ಬೇಗ ಬೇಗ ಹೆಜ್ಜೆ ಹಾಕಿದ್ದಾನೆ. ಒಂದು ಕೈನಲ್ಲಿ ಮೊಬೈಲ್​​ ಹಿಡಿದಿದ್ದು, ವಾಪಸ್​ ಹೋಗುವಾಗ ಶಂಕಿತ ವ್ಯಕ್ತಿ ಗಾಬರಿಯಿಂದ ಹೋಗ್ತಿರುವ ಸಿಸಿಟಿವಿ ದೃಶ್ಯ ಲಭ್ಯವಾಗಿದೆ.

ಶಂಕಿತ ಆರೋಪಿ ಬೆಳಗ್ಗೆ 11.50 ಸುಮಾರಿಗೆ ಎಂಟ್ರಿ ಕೊಟ್ಟಿದ್ದು, ಹ್ಯಾಂಡ್​ ವಾಶ್​ ಜಾಗದಲ್ಲಿ ಹೋಗಿ ಕೈತೊಳೆದುಕೊಂಡಿದ್ದ. ಆನಂತರ ರವೆ ಇಡ್ಲಿಗೆ ಟೋಕನ್​​ ಪಡೆದುಕೊಂಡಿದ್ದ ವ್ಯಕ್ತಿ ಮತ್ತೆ ಹ್ಯಾಂಡ್​ ವಾಶ್​ ಜಾಗಕ್ಕೆ ಹೋಗಿ ವಾಪಸ್​ ಆಗಿದ್ದಾನೆ. ಹೀಗಾಗಿ ಇದೇ ವ್ಯಕ್ತಿ ಸ್ಫೋಟಕ ವಸ್ತುಗಳನ್ನು ಇಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಇದೀಗ CCTV ಕ್ಯಾಮೆರಾ ದೃಶ್ಯ ಆಧರಿಸಿ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ : ರಾಮೇಶ್ವರಂ ಕೆಫೆಯಲ್ಲಿನ ಸ್ಫೋಟದ ಬಗ್ಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಿಷ್ಟು..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here