ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿಯಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠೆ ಶಾಸ್ತ್ರೋಪ್ತವಾಗಿ ಜನವರಿ 22 ರಂದು ಸಂಪನ್ನಗೊಂಡಿದೆ. ಇದೀಗ ಮೊದಲ ಬಾರಿಗೆ ಅಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ಮೊದಲ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ.
ದೇಶದಾದ್ಯಂತ ಇಂದು ಮತ್ತು ನಾಳೆ ಹೋಳಿ ಹಬ್ಬವನ್ನು ಸಡಗರ ಮತ್ತು ವೈಭವದಿಂದ ಆಚರಿಸಲಾಗುತ್ತಿದೆ. ಇದೀಗ ಹೋಳಿ ಹಬ್ಬದ ವಿಶೇಷ ದಿನದಂದು ರಾಮನ ಭಕ್ತರು ಹೋಳಿ ಬಣ್ಣದ ಗುರುತಿನಲ್ಲೇ ರಾಮಮಂದಿರಕ್ಕೆ ಆಗಮಿಸಿ ಬಾಲರಾಮನ ದರ್ಶನ ಪಡೆಯುತ್ತಿದ್ದಾರೆ.
ಇನ್ನು ಹೋಳಿ ಹಬ್ಬದ ಪ್ರಯುಕ್ತ ರಾಮಲಲ್ಲಾ ಮೂರ್ತಿಯ ಕೆನ್ನೆ ಹಾಗೂ ಗಲ್ಲಾಕ್ಕೆ ಬಣ್ಣಗಳನ್ನು ಹಚ್ಚಲಾಗಿದೆ. ಇದೀಗ ಈ ಸುಂದರ ಫೋಟೋಗಳನ್ನು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಸದ್ಯ ಈ ಫೋಟೋಗಳು ಎಲ್ಲೆಡೆ ವೈರಲ್ ಆಗುತ್ತಿದೆ.
ಇದನ್ನೂ ಓದಿ : ಸೋನು ಗೌಡ ಮಗು ದತ್ತು ಪಡೆದ ಕೇಸ್ : ರಾಯಚೂರಿನಲ್ಲಿ ಪೊಲೀಸರಿಂದ ಸ್ಥಳ ಮಹಜರು..!
Post Views: 195