Download Our App

Follow us

Home » ಸಿನಿಮಾ » ನಾನು ಮಾಡ್ದೇ ಇರೋ ತಪ್ಪಿಗೆ ಭಿಕ್ಷುಕಿಯಂತೆ ತಿರುಗಾಡ್ತಿದ್ದೇನೆ – ಭಾರತದಿಂದ ಓಡಿ ಹೋದ ರಾಖಿ ಸಾವಂತ್ ಕಣ್ಣೀರು..!

ನಾನು ಮಾಡ್ದೇ ಇರೋ ತಪ್ಪಿಗೆ ಭಿಕ್ಷುಕಿಯಂತೆ ತಿರುಗಾಡ್ತಿದ್ದೇನೆ – ಭಾರತದಿಂದ ಓಡಿ ಹೋದ ರಾಖಿ ಸಾವಂತ್ ಕಣ್ಣೀರು..!

ಬಾಲಿವುಡ್​ ನಟಿ, ಡ್ರಾಮಾ ಕ್ವೀನ್​ ರಾಖಿ ಸಾವಂತ್​ ಬಂಧನದ ಭೀತಿ ಎದುರಿಸುತ್ತಿದ್ದು, ಸದ್ಯ ಅವರು ಭಾರತದಿಂದ ಓಡಿ ಹೋಗಿ ದುಬೈನಲ್ಲಿ ನೆಲೆಸಿದ್ದಾರೆ. ಭಾರತದಲ್ಲಿ ಕಾಣಿಸಿಕೊಂಡರೆ ಅವರನ್ನು ಅರೆಸ್ಟ್ ಮಾಡುವ ಸಾಧ್ಯತೆ ಇದೆ ಎನ್ನೋ ಕಾರಣಕ್ಕೆ ಓಡಿಹೋಗಿದ್ದಾರೆ.

ಪತಿ ಆದಿಲ್ ಅವರ ಖಾಸಗಿ ವಿಡಿಯೋವನ್ನು ರಾಖಿ ವೈರಲ್ ಮಾಡಿದ್ದರು. ಈ ಪ್ರಕರಣದಲ್ಲಿ ಮುಂಬೈ ಸೆಷನ್ಸ್ ಕೋರ್ಟ್ ರಾಖಿ ಅವರಿಗೆ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಹೀಗಾಗಿ ಯಾವ ಕ್ಷಣದಲ್ಲಾದರೂ ರಾಖಿ ಬಂಧನಕ್ಕೆ ಒಳಗಾಗುತ್ತಾರಾ ಎಂಬ ಚರ್ಚೆಗಳು ಎದ್ದಿವೆ. ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ರಾಖಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ. ಹೈಕೋರ್ಟ್​ ಆದೇಶದ ಪ್ರಕಾರ ರಾಖಿ ಸಾವಂತ್ ಸರೆಂಡರ್​ ಆಗಬೇಕಿದೆ.

ಇದೀಗ ಮೀಡಿಯಾ ಮುಂದೆ ಬಂದು ಕಣ್ಣೀರು ಹಾಕಿರುವ ರಾಖಿ ಸಾವಂತ್​, ಶಾರುಖ್​ ಖಾನ್​, ಸಲ್ಮಾನ್​ ಖಾನ್ ಸೇರಿದಂತೆ ಸ್ಟಾರ್​ ನಟರು ಒಂದು ಕ್ಷಣದಲ್ಲಿ ನನಗೆ ಬೇಲ್​ ಕೊಡಿಸುತ್ತಾರೆ. ಅದೇನೂ ದೊಡ್ಡ ವಿಷಯವಲ್ಲ. ಆದರೆ ನಾನು ನನ್ನದಲ್ಲದ ತಪ್ಪಿಗೆ ಭಿಕ್ಷುಕಿಯಂತೆ ತಿರುಗಾಡುವ ಸ್ಥಿತಿ ಉಂಟಾಗಿದೆ. ನಾನು ಯಾರ ಸಹಾಯವೂ ಕೇಳುವುದಿಲ್ಲ. ಭಿಕ್ಷೆ ಬೇಡುವ ರೀತಿಯಲ್ಲಿ ಯಾರ ನೆರವನ್ನೂ ಪಡೆಯುವುದು ಇಷ್ಟವಿಲ್ಲ. ಭಾರತದ ಕೋರ್ಟ್​ ಮೇಲೆ ನನಗೆ ನಂಬಿಕೆ ಇದೆ. ಏಕೆಂದರೆ ನಾನು ಯಾವ ತಪ್ಪನ್ನೂ ಮಾಡಲಿಲ್ಲ. ನನಗೆ ಶಿಕ್ಷೆ ಆಗುವುದಿಲ್ಲ. ಆದರೆ ಸದ್ಯದ ಸ್ಥಿತಿಯಲ್ಲಿ ಕೋರ್ಟ್​ ಆದೇಶದಿಂದಾಗಿ ಅಲೆಯುವಂತಾಗಿದೆ, ಅಕ್ಷರಶಃ ನನ್ನ ಪಾಡು ಭಿಕ್ಷುಕಿಯಂತೆ ಆಗಿದೆ ಎಂದು ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ : ‘ಟಾಕ್ಸಿಕ್’ನಲ್ಲಿ ಯಶ್ ಜೊತೆ ಹಾಲಿವುಡ್​​ನ ಖ್ಯಾತ ಆ್ಯಕ್ಷನ್ ಡೈರೆಕ್ಟರ್ – ರಾಕಿಭಾಯ್​ ಬಗ್ಗೆ ಜೆಜೆ ಪೆರ್ರಿ ಹೇಳಿದ್ದೇನು?

Leave a Comment

DG Ad

RELATED LATEST NEWS

Top Headlines

ಶಾಸಕ ಮುನಿರತ್ನ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ಇನ್ಸ್​ಪೆಕ್ಟರ್​ ಅಯ್ಯಣ್ಣ ರೆಡ್ಡಿ ಅರೆಸ್ಟ್..!

ಬೆಂಗಳೂರು : ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಆರೋಪ ಪ್ರಕರಣ ಸಂಬಂಧ ಇನ್ಸ್ಪೆಕ್ಟರ್ ಅಯ್ಯಣ್ಣ ರೆಡ್ಡಿ ಅವರನ್ನು ಅರೆಸ್ಟ್ ಮಾಡಲಾಗಿದೆ. ಶಾಸಕ ಮುನಿರತ್ನ ಮಾಡಿರೋ ಹನಿಟ್ರ್ಯಾಪ್​​ಗೆ ಇನ್ಸ್ಪೆಕ್ಟರ್

Live Cricket

Add Your Heading Text Here