ಕೆಜಿಎಫ್, ಕೆಜಿಎಫ್ 2 ಸಿನಿಮಾಗಳ ಯಶಸ್ಸಿನ ಬಳಿಕ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಅವರ ಮುಂಬರುವ ಟಾಕ್ಸಿಕ್ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಎದುರು ನೋಡುತ್ತಿದ್ದಾರೆ. ಮಲಯಾಳಂನ ಗೀತು ಮೋಹನ್ ದಾಸ್ ನಿರ್ದೇಶನದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾಗೆ ಆ.8ರಂದು ಸರಳವಾಗಿ ಮುಹೂರ್ತ ಕಾರ್ಯಕ್ರಮ ನಡೆದಿತ್ತು. ಇದೀಗ ‘ಟಾಕ್ಸಿಕ್’ ಸಿನಿಮಾದ ಶೂಟಿಂಗ್ ಅಬ್ಬರದಿಂದ ಸಾಗುತ್ತಿದೆ.
ಮಾಹಿತಿ ಪ್ರಕಾರ ಯಶ್ ಸದ್ಯ ಮುಂಬೈನಲ್ಲಿ ಟಾಕ್ಸಿಕ್ ಚಿತ್ರದ ಪ್ರಮುಖ ಸಾಹಸ ದೃಶ್ಯಗಳನ್ನು ಚಿತ್ರೀಕರಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಹಾಲಿವುಡ್ನ ಖ್ಯಾತ ಸಾಹಸ ನಿರ್ದೇಶಕ ಜೆಜೆ ಪೆರ್ರಿ ‘ಟಾಕ್ಸಿಕ್’ ತಂಡವನ್ನು ಸೇರಿಕೊಂಡಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಈ ಸಿನಿಮಾದಲ್ಲಿ ಆ್ಯಕ್ಷನ್ ಎಲಿಮೆಂಟ್‌ಗೆ ಹೆಚ್ಚಿನ ಮಹತ್ವ ಕೊಡಲಾಗಿದ್ದು, ಜೆಜೆ ಪರ್ರಿ ಕೊರಿಯೋಗ್ರಾಫಿಯಲ್ಲಿ ಯಶ್ ಆ್ಯಕ್ಷನ್ ಸೀಕ್ವೆನ್ಸ್ ಮೂಡಿ ಬರಲಿದೆ.
ಸ್ಟಂಟ್ ಡೈರೆಕ್ಟರ್ ಜೆಜೆ ಪರ್ರಿ ಅವರು ಮುಂಬೈಗೆ ಬಂದಿಳಿಯುತ್ತಿದ್ದಂತೆ ಯಶ್ ಬಗ್ಗೆ ಮಾತನಾಡಿದ್ದಾರೆ. ಈ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ. ‘ನನಗೆ ತುಂಬಾ ಖುಷಿಯಾಗುತ್ತಿದೆ, ಯಶ್ ಅವರು ಅದ್ಭುತ ನಟ, ಅವರು ನನ್ನ ಅಣ್ಣ ಮತ್ತು ನನಗೆ ಅವ್ರನ್ನ ಗೆಳೆಯ ಅಂತ ಕರೆಯೋದ್ಕೆ ಹೆಮ್ಮೆ ಆಗ್ತಿದೆ. ಟಾಕ್ಸಿಕ್ ಟೀಮ್ ಜೊತೆ ವರ್ಕ್ ಮಾಡೋದಕ್ಕೆ ತುಂಬಾ ಖುಷಿಯಾಗುತ್ತಿದೆ, ಥಾಂಕ್ಸ್ ಬ್ರದರ್’ ಎಂದಿದ್ದಾರೆ.
ಆ್ಯಕ್ಷನ್ ಡೈರೆಕ್ಟರ್ ಜೆ.ಜೆ. ಪೆರ್ರಿ ಹಾಲಿವುಡ್ನ ಜಾನ್ ವಿಕ್, ಫಾಸ್ಟ್ & ಫ್ಯೂರಿಯಸ್ ಮತ್ತು ವಾರಿಯರ್ ನಂತಹ ಬ್ಲಾಕ್ಬಸ್ಟರ್ ಸಿನಿಮಾಗಳಲ್ಲಿ ಆ್ಯಕ್ಷನ್ ನಿರ್ದೇಶನದಿಂದ ಹೆಸರುವಾಸಿಯಾಗಿದ್ದಾರೆ.
80ರ ದಶಕದ ಸಿನಿಮಾಗಳಲ್ಲಿ ಸ್ಟಂಟ್ ಡಬಲ್ ಆಗಿ, ಸ್ಟಂಟ್ ಮ್ಯಾನ್ ಆಗಿ ಜೆಜೆ ಪೆರ್ರಿ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ. ಅವರ ಕಟ್ಟುಮಸ್ತಾದ ದೇಹ, ಸ್ಟಂಟ್ ಮಾಡುವ ಪ್ರತಿಭೆಯಿಂದಾಗಿ ಹಲವು ಭಾಷೆಗಳಲ್ಲಿ ಅವರಿಗೆ ಬೇಡಿಕೆ ಇದೆ.
ಇನ್ನು ಟಾಕ್ಸಿಕ್ ಚಿತ್ರದ ಕಥಾ ಹಿನ್ನೆಲೆ ಗೋವಾ ಮೂಲದ ಡ್ರಗ್ ಕಾರ್ಟೆಲ್ ಸುತ್ತ ಸುತ್ತುತ್ತದೆ ಎಂದು ಹೇಳಲಾಗಿದೆ. ಟಾಕ್ಸಿಕ್ ಚಿತ್ರದಲ್ಲಿ ಬಹುದೊಡ್ಡ ತಾರಗಣವಿದ್ದು, ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ಶ್ರುತಿ ಹಾಸನ್ ಸೇರಿದಂತೆ ಇತರರು ಬಣ್ಣಹಚ್ಚಿದ್ದಾರೆ.
ಇದನ್ನೂ ಓದಿ : ಈ ಸರ್ಕಾರ ತೆಗೆವವರೆಗೆ ನಾನು ಕೊನೆಯುಸಿರೆಳೆಯಲ್ಲ – ಹೆಚ್ಡಿ ದೇವೇಗೌಡ..!
Post Views: 144