Download Our App

Follow us

Home » ರಾಜ್ಯ » ಇಂದು ರಾಜ್ಯಸಭೆ ಚುನಾವಣೆ : 4 ಸೀಟ್​ಗೆ ಐವರು ಅಭ್ಯರ್ಥಿಗಳ ಫೈಟ್​..!

ಇಂದು ರಾಜ್ಯಸಭೆ ಚುನಾವಣೆ : 4 ಸೀಟ್​ಗೆ ಐವರು ಅಭ್ಯರ್ಥಿಗಳ ಫೈಟ್​..!

ಬೆಂಗಳೂರು : ಕುತೂಹಲ ಕೆರಳಿಸಿರುವ ರಾಜ್ಯಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಇಂದು ರಾಜ್ಯಸಭೆ ಕಾದಾಟದಲ್ಲಿ 4 ಸೀಟ್​ಗೆ ಐವರು ಅಭ್ಯರ್ಥಿಗಳ ಫೈಟ್​ ನಡೆಯಲಿದೆ. ನಾಲ್ಕು ಸ್ಥಾನದ ಪೈಕಿ ಕಾಂಗ್ರೆಸ್‌ಗೆ 3, ಬಿಜೆಪಿಗೆ 1 ಸ್ಥಾನ ಫಿಕ್ಸ್​ ಆಗಲಿದೆ.

ಕಾಂಗ್ರೆಸ್​ನಿಂದ ಅಜಯ್ ಮಾಕೇನ್​​​​​, ಸಯ್ಯದ್ ನಾಸೀರ್​ ಹುಸೇನ್​​, ಜಿ.ಸಿ.ಚಂದ್ರಶೇಖರ್​​​ ರಾಜ್ಯಸಭೆ ಕಣದಲ್ಲಿದ್ದಾರೆ.ಬಿಜೆಪಿಯಿಂದ ನಾರಾಯಣಸಾ ಭಾಂಡಗೆ ಸ್ಪರ್ಧೆಗಿಳಿದಿದ್ದು, ಜೆಡಿಎಸ್‌ನಿಂದ ಕುಪೇಂದ್ರ ರೆಡ್ಡಿ ಕಣದಲ್ಲಿದ್ದಾರೆ. ಬೆಳಗ್ಗೆ 9 ಗಂಟೆಯಿಂದಲೇ ವೋಟಿಂಗ್​​​​ ಆರಂಭವಾಗಲಿದ್ದು, ಸಂಜೆ 5 ಗಂಟೆ ಅಥವಾ 6 ಗಂಟೆಗೆಲ್ಲಾ ರಿಸಲ್ಟ್ ಹೊರ ಬರುತ್ತೆ.
ಶಾಸಕರು ರಾಜ್ಯಸಭೆ ಸದಸ್ಯರನ್ನು ಆಯ್ಕೆ ಮಾಡಲಿದ್ದು, ತಲಾ ಒಬ್ಬ ಅಭ್ಯರ್ಥಿ ಗೆಲುವಿಗೆ 45 ಮತಗಳ ಅಗತ್ಯವಿದೆ. ಕಾಂಗ್ರೆಸ್‌ಗೆ 134+3 ಒಟ್ಟು 137 ಸದಸ್ಯರ ಬೆಂಬಲವಿದೆ. ಕಾಂಗ್ರೆಸ್ ಮೂರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ, ಹಾಗಾಗಿ ಒಟ್ಟು ಮೂವರು ಅಭ್ಯರ್ಥಿಗಳಿಗೆ 135 ಮತ ಅಗತ್ಯವಿದೆ. ಬಿಜೆಪಿ 66, ಜೆಡಿಎಸ್​ 19 ಮತ ಸೇರಿದ್ರೆ 85 ಮತಗಳಾಗಲಿವೆ.
ಬಿಜೆಪಿ ಅಭ್ಯರ್ಥಿಗೆ 45 ಮತಗಳು ಚಲಾವಣೆಯಾದರೆ 21 ಮತ ಉಳಿಯುತ್ತೆ, ಉಳಿಕೆ 21 ಮತಗಳನ್ನು ಜೆಡಿಎಸ್ ಅಭ್ಯರ್ಥಿಗೆ ವರ್ಗಾಯಿಸುವ ತಂತ್ರ ನಡೆಯಲಿದೆ.
ಬಿಜೆಪಿ ಹೆಚ್ಚುವರಿ ಮತ 21, ಜೆಡಿಎಸ್​ನ 19 ಮತ ಸೇರಿದ್ರೆ 40 ಮತಗಳಾಗಲಿವೆ. ಕುಪೇಂದ್ರ ರೆಡ್ಡಿ ಗೆಲ್ಲಲು ಇನ್ನೂ ಐದು ಮತಗಳ ಅಗತ್ಯ ಇದೆ. ಪಕ್ಷೇತರ ಶಾಸಕರಾದ ಲತಾ ಮಲ್ಲಿಕಾರ್ಜುನ್, ಪುಟ್ಟಸ್ವಾಮಿಗೌಡ, ದರ್ಶನ್ ಪುಟ್ಟಣ್ಣಯ್ಯ ಮತಗಳೇ ನಿರ್ಣಾಯಕವಾಗಲಿದೆ. KRPPಯ ಜನಾರ್ದನರೆಡ್ಡಿ ಕಾಂಗ್ರೆಸ್​ ಪರ ಮತ ಹಾಕೋದು ಫಿಕ್ಸ್​ ಆಗಿದ್ದು, ಪಕ್ಷೇತರರ ಮತ ಚದುರಿದರೆ ಮಾತ್ರ ಕಾಂಗ್ರೆಸ್​ ಗೆಲುವಿಗೆ ಅಡ್ಡಿಯಾಗಲಿದೆ.

ಇದನ್ನೂ ಓದಿ : ‘ಹೈಡ್​ ಆ್ಯಂಡ್​ ಸೀಕ್​’ ಸಿನಿಮಾದ ಮೋಷನ್‌ ಪೋಸ್ಟರ್‌ ರಿಲೀಸ್..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here