Download Our App

Follow us

Home » ರಾಜಕೀಯ » ನಾಳೆ ರಾಜ್ಯಸಭೆ ಚುನಾವಣೆ : ಇಂದು ಸಂಜೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದ ಸಿಎಂ ಸಿದ್ದರಾಮಯ್ಯ..!

ನಾಳೆ ರಾಜ್ಯಸಭೆ ಚುನಾವಣೆ : ಇಂದು ಸಂಜೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದ ಸಿಎಂ ಸಿದ್ದರಾಮಯ್ಯ..!

ಬೆಂಗಳೂರು : ಕರ್ನಾಟಕದ 4 ರಾಜ್ಯಸಭಾ ಸ್ಥಾನಗಳಿಗೆ ನಾಳೆ ಚುನಾವಣೆ ನಡೆಯಲಿದೆ. ನಾಳೆ ಬೆಳಗ್ಗೆ 10 ಗಂಟೆಗೆ ವಿಧಾನಸೌಧದಲ್ಲಿ ಮತದಾನ ಆರಂಭವಾಗಲಿದ್ದು, ಸಂಜೆ 4 ಗಂಟೆಯವರೆಗೂ ಹಕ್ಕು ಚಲಾವಣೆಗೆ ಅವಕಾಶವಿರಲಿದೆ. ಸಂಜೆ 4 ಗಂಟೆಯಿಂದ 5ಗಂಟೆಯವರೆಗೆ ಮತಗಳ ಎಣಿಕೆ ನಡೆಯಲಿದೆ.

ರಾಜ್ಯಸಭೆ ಚುನಾವಣೆ ಹಿನ್ನೆಲೆಯಿಂದಾಗಿ ಇಂದು ಸಂಜೆಯೇ ಕಾಂಗ್ರೆಸ್​ ಶಾಸಕಾಂಗ ಸಭೆ ನಡೆಸಲಿದೆ. ಮೂವರು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಅಂತಿಮ ಸರ್ಕಸ್​ ಮಾಡಲಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ನೇತೃತ್ವದಲ್ಲಿ ಮೀಟಿಂಗ್​​​ ನಡೆಯಲಿದ್ದು, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಕೂಡ ಭಾಗಿಯಾಗಲಿದ್ದಾರೆ.

ಎಲ್ಲಾ ಸಚಿವರು, ಶಾಸಕರು, ಸಂಸದರು, MLCಗಳಿಗೆ ಆಹ್ವಾನ ನೀಡಿದ್ದು, ಇಂದು ಸಂಜೆ 6 ಗಂಟೆಗೆ ಸಿಎಲ್‌ಪಿ ಮೀಟಿಂಗ್ ನಡೆಯಲಿದೆ. ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಸಾಧ್ಯತೆಯಿದ್ದು, ಹಾಗಾಗಿ ಶಾಸಕರನ್ನ ಹಿಡಿದಿಡಲು ಸಿಎಂ ಸಿದ್ದರಾಮಯ್ಯ CLP ಸಭೆ ಕರೆದಿದ್ದಾರೆ. ಇಂದು ಸದನ ಕಲಾಪ ಮುಗಿಯುತ್ತಲೇ ಎಲ್ಲರೂ ರೆಸಾರ್ಟ್‌ಗೆ ಶಿಫ್ಟ್ ಆಗಲಿದ್ದಾರೆ.

ಮೂವರು ಅಭ್ಯರ್ಥಿಗಳಿಗೆ ಮತಹಾಕಲು ಸಿಎಂ, ಡಿಸಿಎಂ, ಸುರ್ಜೆವಾಲ ಸೂಚನೆ ನೀಡಿದ್ದು, ಒಬ್ಬರಿಗೆ 45 ಮತದಂತೆ 135 ಶಾಸಕರನ್ನ ನಾಯಕರು ಮೂರು ಭಾಗ ಮಾಡಲಿದ್ದಾರೆ. ಅಷ್ಷೆ ಅಲ್ಲದೆ ಯಾರಿಗೆ ಯಾರು ಮತ ಹಾಕಬೇಕೆಂದು ನಾಯಕರು ಸೂಚನೆ ನೀಡಲಿದ್ದಾರೆ. ಮೂವರು ಅಭ್ಯರ್ಥಿಗಳಿಗೆ ಒಬ್ಬೊಬ್ಬ ಪಕ್ಷೇತರ ಶಾಸಕರ ಮತ ಹಾಕಿಸಲು ಪ್ಲಾನ್​ ಮಾಡಿದ್ದಾರೆ. ಹೀಗಾಗಿ ಸಭೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ : ಮಂಡ್ಯದಲ್ಲಿ ಬಿಜೆಪಿಯಿಂದಲೇ ನಿಲ್ಲುತ್ತೇನೆ, ಪಕ್ಷೇತರರಾಗಿ ಸ್ಪರ್ಧೆ ಮಾಡಲ್ಲ : ಸಂಸದೆ ಸುಮಲತಾ ಅಂಬರೀಶ್..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here