Download Our App

Follow us

Home » ಜಿಲ್ಲೆ » ರಾಯಚೂರು : ಅಕ್ರಮವಾಗಿ ಮರಳು ಸಾಗಿಸ್ತಿದ್ದ ಟ್ರ್ಯಾಕ್ಟರನ್ನು ಸೀಜ್ ಮಾಡಲು ಹೋದಾಗ ಅನಾಹುತ – ಪೊಲೀಸ್ ಜೀಪ್ ಪಲ್ಟಿ..!

ರಾಯಚೂರು : ಅಕ್ರಮವಾಗಿ ಮರಳು ಸಾಗಿಸ್ತಿದ್ದ ಟ್ರ್ಯಾಕ್ಟರನ್ನು ಸೀಜ್ ಮಾಡಲು ಹೋದಾಗ ಅನಾಹುತ – ಪೊಲೀಸ್ ಜೀಪ್ ಪಲ್ಟಿ..!

ರಾಯಚೂರು : ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ವಾಹನ ಸೀಜ್ ಮಾಡಲು ಹೋಗುವಾಗ ಪೊಲೀಸ್ ಜೀಪ್ ಪಲ್ಟಿಯಾದ ಘಟನೆ ಜಿಲ್ಲೆಯ ‌ಸಿಂಧನೂರು ತಾಲೂಕಿ‌ನ ರೈತನಗರ ಕ್ಯಾಂಪ್ ಬಳಿ ನಡೆದಿದೆ.

ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್​ನ್ನು ಓವರ್ ಟೇಕ್ ಮಾಡಲು ಹೋದಾಗ ಟ್ರ್ಯಾಕ್ಟರ್​ನ ಟ್ರಾಲಿ ತಗುಲಿ ಪೊಲೀಸ್ ಜೀಪ್ ಕಾಲುವೆಗೆ ಪಲ್ಟಿಯಾಗಿದೆ. ಅಪಘಾತದಲ್ಲಿ ಹೋಂ ಗಾರ್ಡ್ ಶಕ್ಷಾವಲಿ (33), ಪೇದೆ ಕರಿಯಪ್ಪ (35) ಎಂಬುವವರಿಗೆ ಗಾಯವಾಗಿದೆ. 

ಗಾಯಾಳುಗಳನ್ನ ಸಿಂಧನೂರು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸಿಂಧನೂರು ಟ್ರಾಫಿಕ್ ‌ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊನೆಗೆ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ವಾಹನವನ್ನು ಸೀಜ್ ಮಾಡಲಾಗಿದೆ. ಜಖಂಗೊಂಡ ಪೊಲೀಸ್ ವಾಹನವನ್ನ ಜೆಸಿಬಿ ಮೂಲಕ ಇಲಾಖೆ ಅಧಿಕಾರಿಗಳು ಹೊರ ತೆಗೆದಿದ್ದಾರೆ. 

ಇದನ್ನೂ ಓದಿ : ಚಿಕ್ಕೋಡಿಯಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 16 ಲಕ್ಷ ಹಣ ವಶಕ್ಕೆ..!

Leave a Comment

DG Ad

RELATED LATEST NEWS

Top Headlines

ಗಂಡು ಮಗುವಿಗೆ ಜನ್ಮ ನೀಡಿದ ಕಿರುತೆರೆ ನಟಿ ಕವಿತಾ ಗೌಡ – ಮಗನ ಕಾಲಿನ ವಿಡಿಯೋ ಹಂಚಿಕೊಂಡ ಚಂದನ್..!

ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಕನ್ನಡದ ಕಿರುತೆರೆ ನಟಿ ಕವಿತಾ ಗೌಡ ಹಾಗೂ ಚಂದನ್ ಕುಮಾರ್​ಗೆ ಗಂಡು ಮಗು ಜನಿಸಿದೆ. ಇದೀಗ ಮಗುವಿನ ಕಾಲಿನ ಒಂದು ವಿಡಿಯೋ ಶೇರ್

Live Cricket

Add Your Heading Text Here