Download Our App

Follow us

Home » ಸಿನಿಮಾ » ಮನೆ ಮುಂದೆ ಆಟೋ ಓಡಿಸಿದ ರಾಧಿಕಾ ಕುಮಾರಸ್ವಾಮಿ – ಥ್ರಿಲ್ಲಿಂಗ್​​ ರೈಡ್​ನ ಸಸ್ಪೆನ್ಸ್​​ ಏನ್​​ ಗೊತ್ತಾ?

ಮನೆ ಮುಂದೆ ಆಟೋ ಓಡಿಸಿದ ರಾಧಿಕಾ ಕುಮಾರಸ್ವಾಮಿ – ಥ್ರಿಲ್ಲಿಂಗ್​​ ರೈಡ್​ನ ಸಸ್ಪೆನ್ಸ್​​ ಏನ್​​ ಗೊತ್ತಾ?

ಕನ್ನಡ ಚಿತ್ರರಂಗದಲ್ಲಿ ಜನಪ್ರಿಯ ನಟಿಯಾಗಿ, ನಿರ್ಮಾಪಕಿಯಾಗಿ, ವಿತರಕಿಯಾಗಿ ಖ್ಯಾತಿ ಪಡೆದಿರುವ ರಾಧಿಕ ಕುಮಾರಸ್ವಾಮಿ, ನಟನೆಯ ‘ಭೈರಾದೇವಿ’ ಸಿನಿಮಾ ಬಿಡುಗಡೆಗೆ ತಯಾರಿ ನಡೀತಿದೆ. ರಾಧಿಕಾ ಕುಮಾರಸ್ವಾಮಿ ನಟನೆಯ ಭೈರಾದೇವಿ ಚಿತ್ರವು ಅ.3ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರದ ಸಲುವಾಗಿ ರಾಧಿಕಾ ಅವರು ಬರೋಬ್ಬರಿ ಎರಡು ವರ್ಷಗಳಷ್ಟು ಸಮಯವನ್ನು ಮೀಸಲಿಟ್ಟಿದ್ದರು.

ಹೌದು, ಒಂದ್ಕಾಲದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದ ರಾಧಿಕಾ ಕುಮಾರಸ್ವಾಮಿ ಈಗ ಮಗಳ ಲಾಲನೆ ಪಾಲನೆಯಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಹಾಗಾಗಿ ಸಿನಿಮಾಗಳಲ್ಲಿ ನಟಿಸುವುದು ಕಮ್ಮಿ ಆಗಿದೆ. ಇದೀಗ ಸ್ಯಾಂಡಲ್‌ವುಡ್ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಅವರು ಭೈರಾದೇವಿ ಸಿನಿಮಾದ ಮೂಲಕ ಕಾಳಿಯಾಗಿ ಎಂಟ್ರಿಕೊಡುತ್ತಿದ್ದಾರೆ.

ಈಗಾಗಲೇ ರಾಧಿಕಾ ಕುಮಾರಸ್ವಾಮಿ ನಟನೆಯ ‘ಭೈರಾದೇವಿ’ ಸಿನಿಮಾ ಬಿಡುಗಡೆಗೆ ತಯಾರಿ ನಡೀತಿದೆ. ಬಹಳ ಹಿಂದೆ ಶುರುವಾಗಿದ್ದ ಸಿನಿಮಾ ಕಾರಣಾಂತರಗಳಿಂದ ತೆರೆಗೆ ಬರುವುದು ತಡವಾಗಿತ್ತು. ಇದೀಗ ಸಿನಿಮಾ ಪ್ರಚಾರ ಆರಂಭವಾಗಿದೆ.

ಇನ್ನು, ಸಿನಿಮಾದ ಪ್ರಚಾರವಂತೂ ಜೋರಾಗೆ ನಡೆಯುತ್ತಿದೆ. ಇದರ ನಡುವೆ ಸಂದರ್ಶನಗಳ ಹೊರತಾಗಿಯೂ ಹಲವು ದಾರಿಗಳನ್ನು ಕಂಡುಕೊಂಡಿರುವ ನಟಿ ರಾಧಿಕಾ ಕುಮಾರಸ್ವಾಮಿ ಅವರು ಇತ್ತೀಚೆಗಷ್ಟೇ ಅವರು ತಮ್ಮ ಮನೆಯ ಮುಂದೆ ಆಟೋ ಒಂದನ್ನು ಓಡಿಸಿ ಭೈರಾದೇವಿ ಪ್ರಮೋಶನ್ ಮಾಡಿದ್ದಾರೆ. ರಾಧಿಕಾ ಆಟೋ ಓಡಿಸುವ ವೀಡಿಯೋ ಸಹಜವಾಗಿಯೇ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಇನ್ನು ರಾಧಿಕಾ ಅವರು ಆಟೋ ಓಡಿಸುವುದನ್ನು ನೋಡಿದ ನೆಟ್ಟಿಗರಂತೂ ದಂಗಾಗಿದ್ದಾರೆ.

ಇದನ್ನೂ ಓದಿ : ಹೊಸ ಅತಿಥಿ ಸ್ವಾಗತಕ್ಕೆ ಅಂಬಿ ಕುಟುಂಬ ಸಿದ್ಧ – ಲೀಕ್ ಆಯ್ತು ಅವಿವಾ ಬಿದ್ದಪ್ಪ ಸೀಮಂತ ಶಾಸ್ತ್ರದ ಫೋಟೋ..!

Leave a Comment

DG Ad

RELATED LATEST NEWS

Top Headlines

ವಿಕ್ಕಿ ಯಾವಾಗಲೂ ಹೇಗಿರ್ತಾರೆ ಗೊತ್ತಾ? – ದಾಂಪತ್ಯದ ಸೀಕ್ರೆಟ್ ರಿವೀಲ್ ಮಾಡಿದ ಕತ್ರಿನಾ ಕೈಫ್..!

ಮುಂಬೈ : ಬಾಲಿವುಡ್​ನ​ ಕ್ಯೂಟ್​ ಕಪಲ್​ಗಳಲ್ಲಿ ಕತ್ರಿನಾ ಕೈಫ್​​ ಮತ್ತು ವಿಕ್ಕಿ ಕೌಶಲ್​ ಕೂಡ ಒಬ್ಬರು. 2021ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಮುದ್ದಾದ ಜೋಡಿಯನ್ನು ಬಿಗ್

Live Cricket

Add Your Heading Text Here