ಬೆಂಗಳೂರು : ರಾಜ್ಯ ವಿಧಾನಮಂಡಲ ಅಧಿವೇಶನ ನಿನ್ನೆ ಆರಂಭವಾಗಿದ್ದು, ಇಂದು ಅಧಿವೇಶನದಲ್ಲಿ ಕಾಂಗ್ರೆಸ್-ಬಿಜೆಪಿ ವಾಕ್ಸಮರ ಶುರುವಾಗಿದೆ. ಕಾನೂನು ಸುವ್ಯವಸ್ಥೆ ಮೇಲೆ ಆರ್.ಅಶೋಕ್ ಚರ್ಚೆಗೆ ಪ್ರಸ್ತಾಪಿಸಿದ್ದಾರೆ.
ರಾಜ್ಯದಲ್ಲಿ ಸರ್ಕಾರ ಇದೆಯೋ.. ಸತ್ತಿದೆಯೋ..? ಅತ್ಯಾಚಾರ, ಕೊಲೆ ರಾಜ್ಯದಲ್ಲಿ ಹೆಚ್ಚಾಗ್ತಾ ಇವೆ, ಹಲ್ಲೆ, ದರೋಡೆಗಳನ್ನು ಮಟ್ಟ ಹಾಕ್ತಾ ಇಲ್ಲ.
ಕಾನೂನು ಸುವ್ಯವಸ್ಥೆ ಮೇಲೆ ಚರ್ಚೆಗೆ ಅವಕಾಶ ಕೊಡಿ ಎಂದು ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಪಟ್ಟು ಹಿಡಿದಿದ್ದಾರೆ. ಈ ವೇಳೆ ಅಶೋಕ್ಗೆ ಆರಗ ಜ್ಞಾನೇಂದ್ರ ಹಾಗೂ ಸುನಿಲ್ಕುಮಾರ್ ಸಾಥ್ ನೀಡಿದ್ದಾರೆ.
ವಿಪಕ್ಷ ನಾಯಕರ ಪ್ರಸ್ತಾಪಕ್ಕೆ ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದು, ನಿಮ್ಮ ಕಾಲದಲ್ಲಿ ಮಚ್ಚು-ಲಾಂಗ್ ಸದ್ದು ಮಾಡಿರಲಿಲ್ವಾ..? ಬಿಜೆಪಿ ಕಾಲದಲ್ಲೇ ಕೊಲೆಗಳೇ ನಡೆದಿರಲಿಲ್ವಾ..? ಬೆಂಗಳೂರಲ್ಲಿ ಎಷ್ಟು ಕೊಲೆ ಆದ್ವು.. ರಾಜ್ಯದಲ್ಲಿ ಎಷ್ಟು ಹತ್ಯೆ ಆದವು..? ಎಲ್ಲವನ್ನೂ ಚರ್ಚಿಸೋಣ ಎಂದು ಗೃಹ ಸಚಿವ ಪರಮೇಶ್ವರ್ ತಿರುಗೇಟು ನೀಡಿದ್ದಾರೆ.
ನಂತರ ಅಕ್ರಮ ಮದ್ಯ ಮಾರಾಟದ ಬಗ್ಗೆ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು ಪ್ರಸ್ತಾಪಿಸಿದ್ದಾರೆ. ಇವತ್ತು ಮನೆ-ಮನೆಯಲ್ಲೂ ಎಣ್ಣೆ ಮಾರ್ತಿದ್ದಾರೆ, ಅಕ್ರಮ ಮದ್ಯ ಮಾರಾಟದಿಂದ ಯುವಕರ ಜೀವ ಬಲಿಯಾಗ್ತಿವೆ. ಮನೆ-ಮನೆಯಲ್ಲಿ ಮಾರೋ ಮದ್ಯಕ್ಕೆ ಕಡಿವಾಣ ಹಾಕಿ, ಮನೆಗಳಲ್ಲಿ ಮದ್ಯ ಮಾರಲು ಕೊಡುವ ಬಾರ್ಗಳ ಮೇಲೆ ಕ್ರಮ ತಗೊಳ್ಳಿ. ರಾಜ್ಯದಲ್ಲಿ ಅಬಕಾರಿ ಅಧಿಕಾರಿಗಳು ಏನ್ ಮಾಡ್ತಿದ್ದಾರೆ…? ಎಂದು ಪ್ರಶ್ನಿಸಿದ್ದಾರೆ.
ಈ ವೇಳೆ ಆರ್.ಅಶೋಕ್, ಆರಗ ಜ್ಞಾನೇಂದ್ರ ಸೇರಿ ಹಲವರ ಸಾಥ್ ನೀಡಿದ್ದು, ಕಠಿಣ ಕಾನೂನು ತರುವ ಸಂಬಂಧ ಶೀಘ್ರ ತೀರ್ಮಾನ ಮಾಡ್ತೇವೆ ಎಂದು
ಪ್ರಶ್ನೋತ್ತರ ವೇಳೆ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಉತ್ತರ ನೀಡಿದ್ದಾರೆ.
ಇದನ್ನೂ ಓದಿ : ದೇವೇಗೌಡರ ನಿವಾಸದಲ್ಲಿ ಇಂದು ಮಹತ್ವದ ಸಭೆ..!