ಒಡಿಶಾ : ಜಗತ್ ಪ್ರಸಿದ್ಧ ಪುರಿ ಜಗನ್ನಾಥ ಕ್ಷೇತ್ರದ ರತ್ನ ಭಂಡಾರವನ್ನು 46 ವರ್ಷಗಳ ಬಳಿಕ ಓಪನ್ ಮಾಡಲಾಗ್ತಿದೆ. ಒಡಿಶಾದ ಪುರಿ ರತ್ನ ಭಂಡಾರಕ್ಕೆ ದೊಡ್ಡ ಇತಿಹಾಸವೇ ಇದೆ. ರತ್ನಾಭರಣಗಳಿರುವ 15 ಪೆಟ್ಟಿಗೆಗಳು ಈ ಭಂಡಾರದಲ್ಲಿವೆ. 9 ಅಡಿ ಅಗಲ, 3 ಅಡಿ ಎತ್ತರದ ಪೆಟ್ಟಿಗಗಳಲ್ಲಿ ಆಭರಣ ಇಡಲಾಗಿದೆ.
1978ರಲ್ಲಿ ಪುರಿ ಜಗನ್ನಾಥ ದೇಗುಲದ ರತ್ನ ಭಂಡಾರ ಓಪನ್ ಆಗಿತ್ತು. 128 ಕೆಜಿ ತೂಕದ ಚಿನ್ನ, 221 ಕೆಜಿ ತೂಕದ ಬೆಳ್ಳಿ ಆಭರಣ ಸಿಕ್ಕಿದ್ದವು. ಇದೀಗ ಮತ್ತೆ ಭಂಡಾರ ಓಪನ್ ಮಾಡಿ ಲೆಕ್ಕ ಹಾಕಲಾಗುತ್ತದೆ. ದೈವ ಸನ್ನಿಧಿಯ ಭಂಡಾರವನ್ನು ಹೈಕೋರ್ಟ್ ನಿವೃತ್ತ ಜಡ್ಜ್ ವಿಶ್ವನಾಥ್ ರಥ್ ಅವರ ನೇತೃತ್ವದ 16 ಮಂದಿಯ ಕಮಿಟಿ ಓಪನ್ ಮಾಡಲಿದೆ. ದೇಗುಲದ ಜಗನ್ಮೋಹನ ಪ್ರದೇಶದಲ್ಲಿ ಈ ಭಂಡಾರ ಇದೆ. 5 ಚೇಂಬರ್ಗಳನ್ನು ಹೊಂದಿದೆ. 1978ರ ಬಳಿಕ ಹಲವು ಬಾರಿ ಕೀ ಸಿಗದ ಕಾರಣಕ್ಕೆ ಈ ಭಂಡಾರವನ್ನು ಓಪನ್ ಮಾಡಿರಲಿಲ್ಲ.
2018ರಲ್ಲಿ ಹೈಕೋರ್ಟ್ ಆದೇಶದ ಮೇಲೆ ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳ ಕಮಿಟಿ ರತ್ನ ಭಂಡಾರ ಪ್ರವೇಶಕ್ಕೆ ಮುಂದಾಗಿತ್ತು. ಒಳಗಿನ ಚೇಂಬರ್ನ ಕೀ ಸಿಗದೇ ಒಳ ಹೋಗಲು ಆಗಿರಲಿಲ್ಲ. ಒಳ ಭಂಡಾರಕ್ಕೆ 3 ಕೀಗಳಿವೆ. ಪುರಿಯ ಗಜ ಪತಿ(ದೊರೆ), ದೇಗುಲ ಆಡಳಿತ ಮಂಡಳಿ ಮತ್ತು ದೇಗುಲ ಸೇವಕರ ಬಳಿ ಒಂದೊಂದು ಕೀ ಇತ್ತು. ದೊರೆ 1963ರಲ್ಲಿ ಕೇಸ್ ಸೊತಾಗ ಡಿಸಿಗೆ ಕೀ ಹಸ್ತಾಂತರ ಮಾಡಿದ್ರು. ಈ ರತ್ನ ಭಡಾರವನ್ನು ವಿಷಪೂರಿತ ಹಾವುಗಳು ಕಾವಲು ಕಾಯುತ್ತಿರುವ ಮಾಹಿತಿ ಇದೆ. ಹೀಗಾಗಿ ಭಂಡಾರ ತೆರೆಯುವ ವೇಳೆ ನಿಪುಣ ಹಾವಾಡಿಗರು, ಡಾಕ್ಟರ್ಗಳ ತಂಡ, ಆಂಬ್ಯುಲೆನ್ಸ್ ವ್ಯವಸ್ಥೆ ಕೂಡಾ ಮಾಡಲಾಗಿದೆ.
ಇದನ್ನೂ ಓದಿ : ಇನ್ಮುಂದೆ 8 ವರ್ಷ ಮೀರಿದ್ರೆ 1ನೇ ತರಗತಿ ಪ್ರವೇಶವಿಲ್ಲ – ಗರಿಷ್ಠ ವಯೋಮಿತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ..!