ಯಾದಗಿರಿ : PSI ಪರಶುರಾಮ್ ಸಾವಿನ ಕೇಸ್ನಲ್ಲಿ CID ತಂಡ ತನಿಖೆ ಚುರುಕುಗೊಳಿಸಿದೆ. ನಿನ್ನೆ ಬೆಳಗ್ಗೆಯಿಂದ ಯಾದಗಿರಿಯಲ್ಲಿ ಬೀಡುಬಿಟ್ಟಿರುವ CID ಟೀಂ ಕೇಸ್ ಫೈಲ್ ಪಡೆದು ತನಿಖೆ ನಡೆಸುತ್ತಿದೆ. ಶಾಸಕ ಚನ್ನಾರೆಡ್ಡಿ, ಪುತ್ರ ಪಂಪನಗೌಡ ವಿರುದ್ಧ ಕೇಸ್ ದಾಖಲಾಗಿದ್ದು, FIR ಪಂಚನಾಮೆ ವರದಿ ಪಡೆದಿರುವ ಅಧಿಕಾರಿಗಳು DYSP ಕಚೇರಿಯಲ್ಲಿ ಮಾಹಿತಿ ಸಂಗ್ರಹಿಸಿ ತನಿಖೆಯನ್ನ ಚುರುಕುಗೊಳಿಸಿದ್ದಾರೆ.
CID ಡಿವೈಎಸ್ಪಿ ಪುನೀತ್ ನೇತೃತ್ವದ ತಂಡದಿಂದ ತನಿಖೆ ನಡೆಯುತ್ತಿದ್ದು, CPI ಸುನಿಲ್ ಮೂಲಿಮನಿ, ಗ್ರಾಮೀಣ ಠಾಣೆ PSI ಹಣಮಂತ ಬಂಕಲಗಿ ತನಿಖಾ ತಂಡಕ್ಕೆ ಸಾಥ್ ನೀಡಿದ್ದಾರೆ. CID ಟೀಂ ಯಾದಗಿರಿಗೆ ತೆರಳುತ್ತಿದ್ದಂತೆ MLA ಚನ್ನಾರೆಡ್ಡಿ ಹಾಗೂ ಅವ್ರ ಮಗ ಎಸ್ಕೇಪ್ ಆದ್ರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದ್ದು, ಶಾಸಕ ಹಾಗೂ ಅವರ ಪುತ್ರ ಹೈದ್ರಾಬಾದ್ನಿಂದ ದೆಹಲಿಗೆ ಹೋಗಿದ್ದಾರೆ ಎಂದು ಶಂಕಿಸಲಾಗಿದೆ. AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಳಿ ಹೋಗಿ ಪ್ರಕರಣದ ಬಗ್ಗೆ ಮಾತುಕತೆ ಮಾಡಲಿದ್ದಾರೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ಸಿಕ್ಕಿದೆ.
ಏನಿದು ಪ್ರಕರಣ? ಒಂದು ವರ್ಷದ ಹಿಂದೆ ಯಾದಗಿರಿ ನಗರದ ಪಿಎಸ್‌ಐ ಆಗಿ ಪರಶುರಾಮ್ (35) ಅಧಿಕಾರ ಸ್ವೀಕರಿಸಿದ್ದರು. ಅವರನ್ನ ಯಾದಗಿರಿಯ ಸೈಬರ್ ಕ್ರೈಮ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ವರ್ಗಾವಣೆಯಾದ ಕಾರಣ ಕಳೆದ ಗುರುವಾರ ಅವರನ್ನು ಪೊಲೀಸ್ ಸಿಬ್ಬಂದಿ ಬೀಳ್ಕೊಟ್ಟಿದ್ದರು. ಶುಕ್ರವಾರ (ಆ.2) ರಾತ್ರಿ 8 ಗಂಟೆಯ ವೇಳೆಗೆ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇದರಿಂದ ಅನುಮಾನ ವ್ಯಕ್ತಪಡಿಸಿದ ಕುಟುಂಬಸ್ಥರು ನಗರ ಠಾಣೆಗೆ ದೂರು ನೀಡಿದ್ದರು. ಇನ್ನು, ಪಿಎಸ್‌ಐ ಪರಶುರಾಮ್ ಸಾವಿಗೆ ಯಾದಗಿರಿ ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಹಾಗೂ ಅವರ ಪುತ್ರ ಪಂಪಣ್ಣಗೌಡನೇ ಕಾರಣ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಪ್ರಕರಣದ ತೀವ್ರತೆ ಹೆಚ್ಚಾಗುತ್ತಿದ್ದಂತೆ ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿದೆ.
ಇದನ್ನೂ ಓದಿ : ರಾಜ್ಯದಲ್ಲಿ ಟೆಂಡರ್ ರೀತಿ ಅಧಿಕಾರಿಗಳ ಟ್ರಾನ್ಸ್ಫರ್ ದಂಧೆ ನಡೆಯುತ್ತಿದೆ – ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪ..!