Download Our App

Follow us

Home » ರಾಜಕೀಯ » ರಾಜ್ಯದಲ್ಲಿ ಟೆಂಡರ್ ರೀತಿ ಅಧಿಕಾರಿಗಳ ಟ್ರಾನ್ಸ್​ಫರ್ ದಂಧೆ ನಡೆಯುತ್ತಿದೆ – ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಆರೋಪ..!

ರಾಜ್ಯದಲ್ಲಿ ಟೆಂಡರ್ ರೀತಿ ಅಧಿಕಾರಿಗಳ ಟ್ರಾನ್ಸ್​ಫರ್ ದಂಧೆ ನಡೆಯುತ್ತಿದೆ – ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಆರೋಪ..!

ಹುಬ್ಬಳ್ಳಿ : ರಾಜ್ಯದಲ್ಲಿ ಹರಾಜ್ ರೀತಿ ಅಧಿಕಾರಿಗಳ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಆರೋಪಿಸಿದ್ದಾರೆ. ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳ ವರ್ಗಾವಣೆಯಲ್ಲಿ ಸರ್ಕಾರ ಟೆಂಡರ್ ನೀತಿ ಅನುಸರಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಟೆಂಡರ್ ನಲ್ಲಿ ಸ್ಲ್ಯಾಬ್ ವಿಧಿಸಿದಂತೆ, ಅಧಿಕಾರಿಗಳ ವರ್ಗಾವಣೆಯಲ್ಲಿ ಸಹ ಕಾಂಗ್ರೆಸ್​ನವರು ಆಯಾ ದರ್ಜೆ, ಶ್ರೇಣಿ, ಹುದ್ದೆ, ಪ್ರದೇಶವರು ರೇಟ್ ಸ್ಲ್ಯಾಬ್ ಹಾಕಿ ವರ್ಗಾವಣೆ ದಂಧೆಯಲ್ಲಿ ತೊಡಗಿದ್ದಾರೆ ಎಂದು ಹರಿಹಾಯ್ದರು. ಹೀಗೆ ವರ್ಗಾವಣೆ ಪಡೆದ ಅಧಿಕಾರಿಗಳು ಅನಿವಾರ್ಯವಾಗಿ ಕಲೆಕ್ಷನ್ ಅಲ್ಲಿ ನಿರತರಾಗುತ್ತಾರೆ. ಇದು ಅಧಿಕಾರಿಗಳ ತಪ್ಪಲ್ಲ, ನಮ್ಮ ವ್ಯವಸ್ಥೆಯ ಲೋಪ. ಕಾಂಗ್ರೆಸ್ ಹಿಂದಿನಿಂದಲೂ ಈ ರೀತಿ ಭ್ರಷ್ಟಾಚಾರ ವ್ಯವಸ್ಥೆಯನ್ನು ಪೋಷಿಸಿಕೊಂಡು ಬಂದಿದೆ ಎಂದು ಸಚಿವ ಪ್ರಹ್ಲಾದ್‌ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಾನೂನು ಸುವ್ಯವಸ್ಥೆಯೇ ಇಲ್ಲವಾಗಿದೆ. ಅಪರಾಧಿ ಕೃತ್ಯಗಳು ಹೆಚ್ಚುತ್ತಲೇ ಇವೆ. ಅಪರಾಧಿಗಳನ್ನು ಬೆಂಬಲಿಸುತ್ತ ಪೊಲೀಸ್ ಅಧಿಕಾರಿಗಳ ಕೈ ಕಟ್ಟಿ ಹಾಕಿದ್ದಾರೆ ಎಂದು ಕಿಡಿಕಾರಿದ್ಧಾರೆ.

ಇದನ್ನೂ ಓದಿ : ವಯನಾಡು ಭೂಕುಸಿತದ ಸಂತ್ರಸ್ತರಿಗೆ ನೆರವಾದ ಮೆಗಾಸ್ಟಾರ್ ಫ್ಯಾಮಿಲಿ, ಭಾರೀ ದೇಣಿಗೆ ಘೋಷಣೆ..!

Leave a Comment

DG Ad

RELATED LATEST NEWS

Top Headlines

ಮಾಜಿ ಪ್ರಿಯತಮೆಗೆ ಖಾಸಗಿ ವಿಡಿಯೋ ವೈರಲ್ ಮಾಡೋದಾಗಿ ಬೆದರಿಕೆ – ಸೀರಿಯಲ್​ ನಟ ವರುಣ್​ ಆರಾಧ್ಯ ವಿರುದ್ಧ FIR..!

ಬೆಂಗಳೂರು: ಸೋಶಿಯಲ್‌ ಮೀಡಿಯಾದ ಮೂಲಕ ಫೇಮಸ್​​ ಆಗಿದ್ದ ವರ್ಷಾ ಕಾವೇರಿ ಮತ್ತು ವರುಣ್‌ ಆರಾಧ್ಯ ಕಳೆದ ವರ್ಷ ಇಬ್ಬರು ಬ್ರೇಕಪ್ ಬಗ್ಗೆ ಅಧಿಕೃತವಾಗಿ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದರು.

Live Cricket

Add Your Heading Text Here