ಗಣಪ, ಪಟಾಕಿ ಮುಂತಾದ ಸಿನಿಮಾಗಳಿಂದ ಗುರುತಿಸಿಕೊಂಡಿದ್ದ ನಟಿ ಪ್ರಿಯಾಂಕಾ ತಿಮ್ಮೇಶ್ ಅವರು ಬಿಗ್‌ಬಾಸ್ ಸೀಸನ್ – 8ಕ್ಕೆ ವೈಲ್ಡ್‌ಕಾರ್ಡ್ ಮೂಲಕ ಎಂಟ್ರಿಯಾಗಿದ್ದರು. ತಮ್ಮ ನೇರ ನಡೆ-ನುಡಿಯ ಗುಣಗಳಿಂದ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗಿದ್ದ ನಟಿ ಇದೀಗ ನಟಿ ಪ್ರಿಯಾಂಕಾ ತಿಮ್ಮೇಶ್ ತಮ್ಮ ನಾಯಿಯನ್ನು ಕಳೆದುಕೊಂಡ ಬೇಸರದಲ್ಲಿದ್ದಾರೆ.
ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಿಯಾಂಕಾ ತಿಮ್ಮೇಶ್ ತಮ್ಮ ಪ್ರೀತಿಯ ನಾಯಿ ಸತ್ತು ಹೋಗಿರುವುದನ್ನು ತಿಳಿಸಿದ್ದಾರೆ. ಅಷ್ಟೆ ಅಲ್ಲದೆ ಸೋಶಿಯಲ್ ಮೀಡಿಯಾ ಡಿಪಿಯಲ್ಲೂ ತಮ್ಮ ನೆಚ್ಚಿನ ನಾಯಿಯ ಚಿತ್ರವನ್ನು ಪ್ರಿಯಾಂಕಾ ತಿಮ್ಮೇಶ್ ಹಾಕಿಕೊಂಡಿದ್ದಾರೆ. ಐದು ದಿನಗಳ ಹಿಂದೆ ತಮ್ಮ ಪ್ರೀತಿಯ ನಾಯಿಯ ಶ್ರಾದ್ಧವನ್ನೂ ಕೂಡ ಅವರು ನಡೆಸಿ, ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
‘ನನ್ನ ಕ್ಷಮಿಸಿ ಬಿಡು ಕಂದಮ್ಮ..’ ಎಂದು ಬರೆದುಕೊಂಡು ನಾಯಿಯ ಚಿತ್ರಕ್ಕೆ ಫೋಟೋಗೆ ಹೂವಿನ ಹಾರ ಹಾಗೂ ಫೋಟೋ ಎದುರು ದೀಪ ಹಚ್ಚಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.
ಆದರೆ, ಅವರ ಪ್ರೀತಿಯ ನಾಯಿಗೆ ಏನಾಗಿತ್ತು ಅನ್ನೋದರ ಮಾಹಿತಿಯನ್ನು ಅವರು ಎಲ್ಲಿಯೂ ನೀಡಿಲ್ಲ. ಸಾಕಷ್ಟು ಮಂದಿ ಈ ಬಗ್ಗೆ ಪ್ರಶ್ನೆ ಮಾಡಿದ್ದು, ನಾಯಿಗೆ ಏನಾಗಿತ್ತು ಎಂದು ಹೇಳಿದ್ದಾರೆ. ಆದರೆ, ಪ್ರಿಯಾಂಕಾ ತಿಮ್ಮೇಶ್ ಯಾವುದಕ್ಕೂ ಉತ್ತರ ನೀಡಿಲ್ಲ.
![](https://btvkannada.com/wp-content/uploads/2024/06/WhatsApp-Image-2024-06-28-at-4.59.20-PM-240x300.jpeg)
ಪ್ರೀತಿಯಿಂದ ಎಂಬ ಧಾರಾವಾಹಿ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಈಕೆ ಇದೀಗ ನಟ ಕೋಮಲ್ ಕುಮಾರ್ ಅವರ ಜೊತೆಗೆ ಕುಟೀರ ಎಂಬ ಹೊಸ ಸಿನಿಮಾಗೆ ಒಪ್ಪಿಕೊಂಡಿದ್ದಾರೆ. ಇತ್ತೀಚೆಗೆ ಈ ಹೊಸ ಸಿನಿಮಾ ಸೆಟ್ಟೇರಿದ್ದು, ಪ್ರಿಯಾಂಕಾ ತಿಮ್ಮೇಶ್ ಇದರ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾದಲ್ಲಿ ಇವರು ಆಂಗ್ಲೋ ಇಂಡಿಯನ್ ಪಾತ್ರದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನ ಪ್ರತಿಷ್ಟಿತ ವಾಸವಿ ಕಾಂಡಿಮೆಂಟ್ಸ್ಗೆ ಬೀಗ – ಕಾರಣವೇನು?
Post Views: 26