Download Our App

Follow us

Home » ಕ್ರೀಡೆ » ವಿಶ್ವಕಪ್ ಹಿಡಿದ ಪ್ರಧಾನಿ ಮೋದಿ – ‘ವಿಶ್ವ’ ಗೆದ್ದ ವೀರರಿಗೆ ನಮೋ ಸ್ಪೆಷಲ್ ವಿಶ್..!

ವಿಶ್ವಕಪ್ ಹಿಡಿದ ಪ್ರಧಾನಿ ಮೋದಿ – ‘ವಿಶ್ವ’ ಗೆದ್ದ ವೀರರಿಗೆ ನಮೋ ಸ್ಪೆಷಲ್ ವಿಶ್..!

ನವದೆಹಲಿ : ವಿಶ್ವಕಪ್​ ಟ್ರೋಫಿಯೊಂದಿಗೆ ತವರಿಗೆ ಮರಳಿದ ಟೀಮ್​ ಇಂಡಿಯಾ ಇದೀಗ ದೆಹಲಿಯ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸಕ್ಕೆ ಭೇಟಿ ನೀಡಿದೆ. ನಮೋ ನಿವಾಸಕ್ಕೆ ಭೇಟಿ ನೀಡಿದ ರೋಹಿತ್​​ ಪಡೆ ಪ್ರಧಾನಿ ಮೋದಿಗೆ ವಿಶ್ವಕಪ್​​ ನೀಡಿ ಸಂಭ್ರಮಿಸಿದ್ರು. ಬಳಿಕ ಆಟಗಾರರು ಪ್ರಧಾನಿ ಜೊತೆ ಕುಳಿತು ವಿಶ್ವಕಪ್​ ಗೆಲುವಿನ ಕುರಿತು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾ ಮಣಿಸಿ T-20 ವಿಶ್ವಕಪ್​​ ಗೆದ್ದಿದ್ದ ಟೀಂ ಇಂಡಿಯಾ 3 ದಿನಗಳ ನಂತರ ತವರಿಗೆ ಮರಳಿದೆ. ಇದೀಗ ತಾಯ್ನಾಡಿಗೆ ಬಂದಿಳಿದಿರುವ ವಿಶ್ವಗೆದ್ದ ವೀರರನ್ನು ಪ್ರಧಾನಿ ಮೋದಿ ದೆಹಲಿಯ ತಮ್ಮ ನಿವಾಸಕ್ಕೆ ಕರೆಸಿ ಅಭಿನಂದಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನಿವಾಸಕ್ಕೆ BCCI ಕಾರ್ಯದರ್ಶಿ ಜೈ ಶಾ, ಅಧ್ಯಕ್ಷ ರೋಜರ್​ ಬಿನ್ನಿ ಹಾಗೂ  ಕೋಚ್​ ದ್ರಾವಿಡ್, ಕ್ಯಾಪ್ಟನ್​​​ ರೋಹಿತ್​​​​ ಟೀಂ ತೆರಳಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಆತಿಥ್ಯ ಸ್ವೀಕರಿಸಿದ ಬಳಿಕ, ಆಟಗಾರರು ವಿಶೇಷ ವಿಮಾನದಲ್ಲಿ ಮುಂಬೈಗೆ ತೆರಳಲಿದ್ದಾರೆ. ಅಲ್ಲಿ ತೆರೆದ ವಾಹನದಲ್ಲಿ ಆಟಗಾರರನ್ನು ಮೆರವಣಿಗೆ ನಡೆಸಿ ಬಳಿಕ ಅದ್ಧೂರಿ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ವಿಜಯಯಾತ್ರೆಗೆ ಸಕಲ ಸಿದ್ಧತೆ : ವಿಶ್ವಕಪ್‌ ಗೆದ್ದ ಟೀಂ ಇಂಡಿಯಾ ತಂಡದ ಆಟಗಾರರಿಗೆ ಮುಂಬೈನಲ್ಲಿ ಇಂದು ಸಂಜೆ ವಿಜಯಯಾತ್ರೆ ಆಯೋಜಿಸಲಾಗಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಸಂಜೆ 5 ಗಂಟೆಗೆ ಭಾರತ ತಂಡದ ಆಟಗಾರರನ್ನು ಅದ್ಧೂರಿಯಾಗಿ ಸ್ವಾಗತಿಸಲಾಗುತ್ತದೆ. ಇದಕ್ಕೂ ಮೊದಲು ಅಂದರೆ, ಸಂಜೆ 4 ಗಂಟೆಗೆ ಮರೀನ್‌ನಿಂದ ವಾಂಖೆಡೆ ಸ್ಟೇಡಿಯಂವರೆಗೆ ತೆರೆದ ವಾಹನದಲ್ಲಿ ಟ್ರೋಫಿಯೊಂದಿಗೆ ಮೆರವಣಿಗೆ ಬರಲಿದ್ದಾರೆ. ವಿಕ್ಟರಿ ಪರೇಡ್‌ನಲ್ಲಿ ಸಾವಿರಾರು ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಎಲ್ಲರೂ ಬನ್ನಿ ಎಂಬುದಾಗಿ ರೋಹಿತ್‌ ಶರ್ಮಾ ಅವರು ಈಗಾಗಲೇ ಆಹ್ವಾನ ನೀಡಿದ್ದಾರೆ.

ಇದನ್ನೂ ಓದಿ : ಅರುಣ್​ ಕಟಾರೆಯಿಂದ ಸ್ಯಾಂಡಲ್​ವುಡ್​ನ ಟೆಕ್ನಿಷನ್​ಗೆ ಸಂಕಷ್ಟ- ಡಮ್ಮಿ ಗನ್​ ಕೊಟ್ಟಿದ್ದ ಸಾಹಿಲ್​​​ಗೆ ನೋಟಿಸ್ ಜಾರಿ..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here