Download Our App

Follow us

Home » ರಾಷ್ಟ್ರೀಯ » ಪ್ರಸಾರ ಭಾರತಿ – ಪಿಬಿ-ಶಬ್ದ್‌ ಯೋಜನೆಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್‌ ಠಾಕೂರ್‌ ಚಾಲನೆ..!

ಪ್ರಸಾರ ಭಾರತಿ – ಪಿಬಿ-ಶಬ್ದ್‌ ಯೋಜನೆಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್‌ ಠಾಕೂರ್‌ ಚಾಲನೆ..!

ನವದೆಹಲಿ : ಸುದ್ದಿ ಸಂಸ್ಥೆಗಳಿಗೆ ಸುದ್ದಿ, ಮತ್ತು ವಿಡಿಯೋ ಹಾಗೂ ಚಿತ್ರಗಳನ್ನು ಹಂಚಿಕೊಳ್ಳುವ ಪ್ರಸಾರ ಭಾರತಿಯ ಪಿಬಿ– ಶಬ್ದ್‌ ಯೋಜನೆಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್‌ ಠಾಕೂರ್‌ ಅವರು ಬುಧವಾರ ಚಾಲನೆ ನೀಡಿದರು.

(ಪ್ರಸಾರ ಭಾರತಿ –ಶೇರ್‌ಡ್‌ ಆಡಿಯೋ ವಿಜ್ಯವಲ್ಸ್‌ ಫಾರ್‌ ಬ್ರಾಡ್‌ಕಾಸ್ಟ್‌ ಅ್ಯಂಡ್‌ ಡಿಸ್‌ಎಮಿನೇಷನ್‌) ಯೋಜನೆಯಡಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯದೊಂದಿಗೆ ನೋಂದಣಿ ಮಾಡಿಕೊಂಡ ಸುದ್ದಿ ಸಂಸ್ಥೆಗಳಿಗೆ ಒಂದು ವರ್ಷದವರೆಗೆ ಉಚಿತ ಸೇವೆಯನ್ನು ಒದಗಿಸಲಾಗುವುದು.‌

ಸುಮಾರು 50 ವಿಭಾಗಗಳಲ್ಲಿ ಭಾರತದ ಎಲ್ಲ ಪ್ರಮುಖ ಭಾಷೆಗಳಲ್ಲಿ ಸುದ್ದಿಗಳನ್ನು ಸುದ್ದಿಸಂಸ್ಥೆಗಳಿಗೆ ಒದಗಿಸಲಾಗುವುದು. ‘ಪಿಬಿ– ಶಬ್ದ್‌’ ಮೂಲಕ ಒದಗಿಸುವ ಯಾವುದೇ ವಿಡಿಯೋಗಳಿಗೆ ದೂರದರ್ಶನದ ಲಾಂಛನ ಬಳಸುವ ಅಗತ್ಯವಿಲ್ಲ’ ಎಂದು ಮಾಹಿತಿ ನೀಡಿದರು.

ಇದೇ ಸಂದರ್ಭ, ಅನುರಾಗ್‌ ಅವರು ಡಿಡಿ ನ್ಯೂಸ್‌ ಮತ್ತು ಆಕಾಶವಾಣಿ ನ್ಯೂಸ್‌ನ ನವೀಕೃತ ವೆಬ್‌ಸೈಟ್‌ಗಳಿಗೆ ಚಾಲನೆ ನೀಡಿ, ನ್ಯೂಸ್‌ ಆನ್‌ಏರ್‌ ಮೊಬೈಲ್‌ ಆ್ಯಪ್‌ನ ನೂತನ ವಿನ್ಯಾಸವನ್ನು ಅನಾವರಣಗೊಳಿಸಿದರು.

ಇದನ್ನೂ ಓದಿ : ಬೆಂಗಳೂರಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯ ಹ*ತ್ಯೆ : ಮೃತದೇಹವನ್ನು ಕಾರಿನಲ್ಲಿರಿಸಿ ಪರಾರಿಯಾದ ದುಷ್ಕರ್ಮಿಗಳು..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here