Download Our App

Follow us

Home » ಸಿನಿಮಾ » ಮೈಮುಲ್ ಅಧ್ಯಕ್ಷ ಸ್ಥಾನಕ್ಕೆ ದಿಢೀರ್ ರಾಜೀನಾಮೆ ಕೊಟ್ಟ ಪಿಎಂ ಪ್ರಸನ್ನ – ಪಶುಸಂಗೋಪನಾ ಸಚಿವರ ಕಿರುಕುಳಕ್ಕೆ ರಿಸೈನ್ ಮಾಡಿದ್ರಾ?

ಮೈಮುಲ್ ಅಧ್ಯಕ್ಷ ಸ್ಥಾನಕ್ಕೆ ದಿಢೀರ್ ರಾಜೀನಾಮೆ ಕೊಟ್ಟ ಪಿಎಂ ಪ್ರಸನ್ನ – ಪಶುಸಂಗೋಪನಾ ಸಚಿವರ ಕಿರುಕುಳಕ್ಕೆ ರಿಸೈನ್ ಮಾಡಿದ್ರಾ?

ಮೈಸೂರು : ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ (ಮೈಮುಲ್) ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಪ್ರಸನ್ನ ಕುಮಾರ್ ರಾಜೀನಾಮೆ ನೀಡಿದ್ದಾರೆ. ಪಿ.ಎಂ ಪ್ರಸನ್ನ ಕುಮಾರ್‌ ಅವರು ಎಚ್.ಡಿ ಕೋಟೆ ಮಾಜಿ ಶಾಸಕ ಕೆ.ಮಹದೇವ‌ ಅವರ ಪುತ್ರರಾಗಿದ್ದು, 2021ರಲ್ಲಿ ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿ. (ಮೈಮುಲ್‌) ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು.

ಆದರೆ ಇದೀಗ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್‌ ಅವರ ಕಿರುಕುಳಕ್ಕೆ ಬೇಸತ್ತು ರಾಜೀನಾಮೆ ನೀಡಿದ್ದಾರೆ ಎನ್ನಲಾಗುತ್ತಿದೆ. ಸಚಿವ ವೆಂಕಟೇಶ್ ಅವರು ಪಿ.ಎಂ ಪ್ರಸನ್ನರನ್ನು ಮೈಮುಲ್ ಅಧ್ಯಕ್ಷ ಸ್ಥಾನದಿಂದ‌‌ ಕೆಳಗಿಳಿಸಲು ಮೇಲಿಂದ ಮೇಲೆ ನೊಟೀಸ್ ಕೊಡಿಸಿದ್ದರು. ಕಳೆದ 6 ತಿಂಗಳಲ್ಲಿ 24 ನೋಟಿಸ್ ಕೊಟ್ಟು ಕಿರುಕುಳ ನೀಡುತ್ತಿದ್ದಾರೆ ಎಂದು ಬಹಿರಂಗವಾಗಿ ಪ್ರಸನ್ನ ಅವರೇ ಆರೋಪಿಸಿದ್ದರು. ಇದರ ಬೆನ್ನಲ್ಲೇ ಇದೀಗ ಪ್ರಸನ್ನ ಅವರು ದಿಢೀರ್ ಅಂತ ತಮ್ಮ ಮೈಮುಲ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪ್ರಸನ್ನ ಅವರು ಮೈಮುಲ್ ಎಂಡಿಗೆ ರಾಜೀನಾಮೆ ಪತ್ರ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : ಬೆಂಗಳೂರು ಶೆಡ್​ನಲ್ಲಿ ಮತ್ತೊಂದು ಮರ್ಡರ್ ​​- ದರ್ಶನ್​​ ಕೇಸ್​ ಎಫೆಕ್ಟ್​​​ನಿಂದ ಕೊಲೆ ಅಡ್ಡೆಯಾಗ್ತಿವೆ ಶೆಡ್​..!

 

 

Leave a Comment

DG Ad

RELATED LATEST NEWS

Top Headlines

MLA ಮುನಿರತ್ನ ವಿರುದ್ಧ ರೇಪ್ ಆರೋಪದ ಬೆನ್ನಲ್ಲೇ ಮಾಜಿ ಕಾರ್ಪೊರೇಟರ್ ಪತಿಯ ಹನಿಟ್ರ್ಯಾಪ್ ವಿಡಿಯೋ ವೈರಲ್..!

ಬೆಂಗಳೂರು : ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಬಿಜೆಪಿ ಶಾಸಕ ಮುನಿರತ್ನ ಸೇರಿ ಏಳು ಮಂದಿಯ ವಿರುದ್ಧ ರಾಮನಗರ ಜಿಲ್ಲಾ ವ್ಯಾಪ್ತಿಯ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ

Live Cricket

Add Your Heading Text Here