Download Our App

Follow us

Home » ಅಪರಾಧ » ಪ್ರಜ್ವಲ್​ ರೇವಣ್ಣ ರೀ ಎಂಟ್ರಿ ಡೇಟ್​ ಫಿಕ್ಸ್ ​- SIT ಅಧಿಕಾರಿಗಳ ಟೀಂ ಫುಲ್​ ಅಲರ್ಟ್..!

ಪ್ರಜ್ವಲ್​ ರೇವಣ್ಣ ರೀ ಎಂಟ್ರಿ ಡೇಟ್​ ಫಿಕ್ಸ್ ​- SIT ಅಧಿಕಾರಿಗಳ ಟೀಂ ಫುಲ್​ ಅಲರ್ಟ್..!

ಬೆಂಗಳೂರು : ಅಶ್ಲೀಲ ವಿಡಿಯೋ ಪೆನ್​​ಡ್ರೈವ್​ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣ ಅವರು ಮೇ 31ರಂದು (ಶುಕ್ರವಾರ) ಎಸ್​ಐಟಿ ಮುಂದೆ ವಿಚಾರಣೆಗೆ ಹಾಜರಾಗುವುದಾಗಿ ಹೇಳಿದ್ದಾರೆ. ವಿದೇಶದಲ್ಲಿದ್ದುಕೊಂಡೇ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಆದ್ರೆ, ಪ್ರಜ್ವಲ್ ರೇವಣ್ಣ ಯಾವ ದೇಶದಲ್ಲಿದ್ದಾರೆ ಅನ್ನೋ ಮಾಹಿತಿ ಇನ್ನೂ ಸಿಕ್ಕಿಲ್ಲ.

ಇದರ ಬೆನಲ್ಲೇ ಇತ್ತ ಎಸ್​ಐಟಿ ಅಧಿಕಾರಿಗಳ ಟೀಂ ಫುಲ್ ಅಲರ್ಟ್ ಆಗಿದ್ದು, ವಿದೇಶದಿಂದ ಬರುವ ಎಲ್ಲಾ ವಿಮಾನಗಳ ಟಿಕೆಟ್​ಗಳ ಮೇಲೆ ಎಸ್​ಐಟಿ ನಿಗಾ ಇಟ್ಟಿದೆ. ಪ್ರಜ್ವಲ್ ರೇವಣ್ಣನ ಟಿಕೆಟ್ ಬುಕ್ಕಿಂಗ್ ಮೇಲೆ ಎಸ್​ಐ ಅಧಿಕಾರಿಗಳ ಕಣ್ಣಿಟ್ಟಿದ್ದು, ಯಾವ ವಿಮಾನದಲ್ಲಿ ಬರುತ್ತಾರೆ? ಯಾವ ನಿಲ್ದಾಣಕ್ಕೆ ಬಂದಿಳಿಯುತ್ತಾರೆ? ಎನ್ನುವ ಬಗ್ಗೆ ಹದ್ದಿನ ಕಣ್ಣಿಟ್ಟಿದ್ದಾರೆ. ದೇಶದ ಎಲ್ಲಾ ಏರ್ ಪೋರ್ಟ್​ಗಳಿಗೂ ಪ್ರಜ್ವಲ್​​​ ಬಗ್ಗೆ ಮಾಹಿತಿ ರವಾನಿಸಿದ್ದಾರೆ. ಇಂಟರ್ ಪೋಲ್ ಅಧಿಕಾರಿಗಳ ಜತೆ ಕೂಡ SIT ಸಂಪರ್ಕ ಸಾಧಿಸಿದೆ.

ಅಲ್ಲದೇ, ಪ್ರಜ್ವಲ್​ ಆಗಮಿಸುತ್ತಿದ್ದಂತೆಯೇ ಏನೆಲ್ಲಾ ಮಾಡಬೇಕು ಎನ್ನುವ ಬಗ್ಗೆ, ಕಾನೂನು ಪ್ರಕ್ರಿಯೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೊಂದೆಡೆ ಪ್ರಜ್ವಲ್​ ವಾಪಸ್​ ಆಗ್ತಿರೋ ಕುರಿತು ಮಾಜಿ ಸಿಎಂ ಹೆಚ್​ಡಿಕೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನು ಪ್ರಜ್ವಲ್​ ಬರೋ ಹಾದಿಯಲ್ಲಿ ಎಸ್​​ಐಟಿ ಟೀಂ ಈಗ ಕೆಲಸ ಚುರುಕುಗೊಳಿಸಿದೆ.

ಪ್ರಜ್ವಲ್ ವಿಡಿಯೋ ರಿಲೀಸ್​ ಮಾಡಿ ಹೇಳಿದ್ದೇನು? ನಾನು ಎಲ್ಲಿದ್ದೇನೆ ಎಂಬ ಮಾಹಿತಿ ನೀಡಲು ಬಂದಿದ್ದೇನೆ. ನಾನು ಎಲ್ಲಿಯೂ ಓಡಿ ಹೋಗಿಲ್ಲ. ನನ್ನ ರಾಜಕೀಯ ಬೆಳವಣಿಗೆ ಸಹಿಸಲಾಗದೆ ಷಡ್ಯಂತ್ರ ರೂಪಿಸಲಾಗಿದೆ. ನನ್ನ ವಿರುದ್ಧ ಪಿತೂರಿ ಮಾಡಲಾಗಿದೆ. ಕೆಲವು ಶಕ್ತಿಗಳು ಒಟ್ಟಾಗಿ ನನ್ನ ವಿರುದ್ಧ ಪಿತೂರಿ ನಡೆಸಿವೆ. ಇಷ್ಟಾದರೂ ನಾನು ನನ್ನ ತಾತ, ತಂದೆ-ತಾಯಿ ಕುಮಾರಣ್ಣನಿಗೆ, ಜೆಡಿಎಸ್‌ ಕಾರ್ಯಕರ್ತರಿಗೆ ಕ್ಷಮೆಯಾಚಿಸುತ್ತೇನೆ. ನಾನು ಮೇ 31ರಂದು ಬೆಳಗ್ಗೆ 10 ಗಂಟೆಗೆ ಭಾರತಕ್ಕೆ ಬಂದು ಎಸ್‌ಐಟಿ ಎದುರು ವಿಚಾರಣೆಗೆ ಹಾಜರಾಗುತ್ತೇನೆ. ವಿದೇಶ ಪ್ರವಾಸವು ಮೊದಲೇ ನಿಗದಿಯಾಗಿತ್ತು. ಆದರೂ, ನಾನು ಭಾರತಕ್ಕೆ ಬಂದು ವಿಚಾರಣೆ ಎದುರಿಸುತ್ತೇನೆ.

ವಿದೇಶಕ್ಕೆ ಹೋದ ಮೂರ್ನಾಲ್ಕು ದಿನದ ಬಳಿಕ ಪ್ರಕರಣದ ಬಗ್ಗೆ ಮಾಹಿತಿ ಗೊತ್ತಾಗಿದೆ. ಏಪ್ರಿಲ್ 26ರಂದು ಚುನಾವಣೆ ನಡೆಯಿತು. ಆಗ ಕೇಸ್​ ದಾಖಲಾಗಿರಲಿಲ್ಲ. ಎಸ್​​ಐಟಿ ಕೂಡ ರಚನೆ ಆಗಿರಲಿಲ್ಲ. ಆ ನಂತರ ಎಸ್​​ಐಟಿ ನೋಟಿಸ್​ ನೀಡಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ. ಆದ್ರೆ, ನನ್ನ ವಿರುದ್ಧದ ಎಲ್ಲಾ ಆರೋಪಗಳು ಸುಳ್ಳು-ಪ್ರಜ್ವಲ್ ರೇವಣ್ಣ ಎಂದು ವಿದೇಶದಿಂದ ವಿಡಿಯೋ ರಿಲೀಸ್ ಮಾಡಿದ್ದಾರೆ.

ಇದನ್ನೂ ಓದಿ : ಸಂತ್ರಸ್ತೆ ಕಿಡ್ಯ್ನಾಪ್​​​​ ಕೇಸ್​​ : ಭವಾನಿ ರೇವಣ್ಣಗೂ ಶುರುವಾಯಿತು ಬಂಧನ ಭೀತಿ..!

 

 

 

 

Leave a Comment

DG Ad

RELATED LATEST NEWS

Top Headlines

MLA ಮುನಿರತ್ನ ವಿರುದ್ಧ ರೇಪ್ ಆರೋಪದ ಬೆನ್ನಲ್ಲೇ ಮಾಜಿ ಕಾರ್ಪೊರೇಟರ್ ಪತಿಯ ಹನಿಟ್ರ್ಯಾಪ್ ವಿಡಿಯೋ ವೈರಲ್..!

ಬೆಂಗಳೂರು : ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಬಿಜೆಪಿ ಶಾಸಕ ಮುನಿರತ್ನ ಸೇರಿ ಏಳು ಮಂದಿಯ ವಿರುದ್ಧ ರಾಮನಗರ ಜಿಲ್ಲಾ ವ್ಯಾಪ್ತಿಯ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ

Live Cricket

Add Your Heading Text Here