Download Our App

Follow us

Home » ಅಪರಾಧ » ಪ್ರಜ್ವಲ್ ರೇವಣ್ಣ ಪತ್ತೆಗೆ ಬ್ಲೂ ಕಾರ್ನರ್ ನೋಟಿಸ್ ಜಾರಿ ​- 196 ರಾಷ್ಟ್ರಗಳಿಗೆ ಮಾಹಿತಿ ರವಾನಿಸಿದ ಇಂಟರ್​​​ಪೋಲ್..!

ಪ್ರಜ್ವಲ್ ರೇವಣ್ಣ ಪತ್ತೆಗೆ ಬ್ಲೂ ಕಾರ್ನರ್ ನೋಟಿಸ್ ಜಾರಿ ​- 196 ರಾಷ್ಟ್ರಗಳಿಗೆ ಮಾಹಿತಿ ರವಾನಿಸಿದ ಇಂಟರ್​​​ಪೋಲ್..!

ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯಾಗಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಪತ್ತೆಗಾಗಿ ಇಂಟರ್ಪೋಲ್​ನಿಂದ ಅಧಿಕೃತವಾಗಿ ಬ್ಲೂ ಕಾರ್ನರ್ ನೋಟಿಸ್ ಜಾರಿಗೊಳಿಸಲಾಗಿದೆ.

ಪ್ರಜ್ವಲ್ ರೇವಣ್ಣರ ಪತ್ತೆಗಾಗಿ ಬ್ಲೂ ಕಾರ್ನರ್ ನೋಟಿಸ್ ಜಾರಿಗೊಳಿಸುವಂತೆ ಸಿಬಿಐಗೆ ಪತ್ರ ಬರೆದು SIT ಅಧಿಕಾರಿಗಳು ಮನವಿ ಮಾಡಿದ್ದರು. ಸಿಬಿಐ ಪ್ರಸ್ತಾವನೆಗೆ ಪ್ರತಿಕ್ರಿಯಿಸಿರುವ ಇಂಟರ್ಪೋಲ್ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಿದ್ದು, ಪ್ರಜ್ವಲ್​ ರೇವಣ್ಣ ಅವರು ತಮ್ಮ ವ್ಯಾಪ್ತಿಯ ಯಾವುದೇ ಬಂದರಿನಲ್ಲಿ ಕಾಣಿಸಿಕೊಂಡರೆ ಗುರುತಿಸಲು ಮತ್ತು ಮಾಹಿತಿ ನೀಡಲು 196 ದೇಶಗಳಿಗೆ ಇಂಟರ್​​​ಪೋಲ್ ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ರೇವಣ್ಣ​​​​​​ ಪುತ್ರನ ಚಲನವಲನದ ಮೇಲೆ ಇಂಟರ್​​ಪೋಲ್ ನಿಗಾ ಇಟ್ಟಿದೆ.

ಟೆಕ್ನಿಕಲ್ ಕಾರಣದಿಂದ ಮೊದಲ ಬ್ಲೂ ಕಾರ್ನರ್ ನೋಟಿಸ್​ಗೆ ಅಡಚಣೆ ಆಗಿತ್ತು. ಇದೀಗ ಮತ್ತೊಮ್ಮೆ ಬ್ಲೂ ಕಾರ್ನರ್ ನೋಟಿಸ್ ಜಾರಿಯಾಗಿದೆ. ಡಿಜಿ-ಐಜಿಪಿ ಅಲೋಕ್ ಮೋಹನ್, ಸಿಐಡಿ ಡಿಜಿ ಎ.ಸಲೀಂ, SIT ಮುಖ್ಯಸ್ಥ ಎಡಿಜಿಪಿ ಬಿಕೆ ಸಿಂಗ್ ಸಭೆ ನಡೆಸಿ ಬ್ಲೂಕಾರ್ನರ್​​​ಗೆ CBIಗೆ ಪತ್ರ ಬರೆದು ಕೋರಿಕೆ ಸಲ್ಲಿಸಿದ್ದರು. ರಾಜತಾಂತ್ರಿಕ ಪಾಸ್​ಪೋರ್ಟ್​, ಫ್ಲೈಟ್​ ಟಿಕೆಟ್​, ಕೇಸ್​ ವಿವರ, ಸೆಕ್ಷನ್​​ ವಿವರ ನೀಡಿ ಮನವಿ ಮಾಡಲಾಗಿತ್ತು. ಇನ್ನು ಬ್ಲೂ ಕಾರ್ನರ್​ ಆಧರಿಸಿ 196 ದೇಶಗಳಲ್ಲಿ ಪ್ರಜ್ವಲ್​​ ಮಾಹಿತಿ ಸಂಗ್ರಹಿಸಲಾಗುತ್ತದೆ.

ಇದನ್ನೂ ಓದಿ : ಬೆಂಗಳೂರಿನಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಬರ್ಬರ ಹ*ತ್ಯೆ..!

Leave a Comment

DG Ad

RELATED LATEST NEWS

Top Headlines

ರವಿಶಂಕರ್ ಪುತ್ರ ಅದ್ವೈ ನಟನೆಯ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ – ಸಾಥ್ ಕೊಟ್ಟ ಶಿವಣ್ಣ..!

ಬಹುಭಾಷಾ ನಟ ಪಿ. ರವಿಶಂಕರ್​ ಅವರ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಣೇಶ ಚತುರ್ಥಿಯ ಶುಭ ದಿನವಾದ ಇಂದು

Live Cricket

Add Your Heading Text Here