Download Our App

Follow us

Home » ರಾಜಕೀಯ » ಪ್ರಜ್ವಲ್​​ ರೇವಣ್ಣ ಮಾಡಿದ್ದು ಘೋರ ಅನ್ಯಾಯ – ಪೆನ್​ಡ್ರೈವ್ ಕೇಸ್​​​ ಬಗ್ಗೆ ಅಮಿತ್‌ ಶಾ ಮೊದಲ ಪ್ರತಿಕ್ರಿಯೆ..!

ಪ್ರಜ್ವಲ್​​ ರೇವಣ್ಣ ಮಾಡಿದ್ದು ಘೋರ ಅನ್ಯಾಯ – ಪೆನ್​ಡ್ರೈವ್ ಕೇಸ್​​​ ಬಗ್ಗೆ ಅಮಿತ್‌ ಶಾ ಮೊದಲ ಪ್ರತಿಕ್ರಿಯೆ..!

ಅಸ್ಸಾಂ : ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಕ್ಷಣ ಕ್ಷಣಕ್ಕೂ ಸ್ಫೋಟಕ ತಿರುವು ಸಿಗುತ್ತಿದೆ. ಅದರಲ್ಲೂ ಕರ್ನಾಟಕದಲ್ಲಿ 2024ರ ಲೋಕಸಭೆ ಚುನಾವಣೆಗಿಂತ ಹೆಚ್ಚಾಗಿ ಪ್ರಜ್ವಲ್ ರೇವಣ್ಣ ಪೆನ್​ಡ್ರೈವ್ ಪ್ರಕರಣದ ​​ಬಗ್ಗೆಯೇ ಚರ್ಚೆ ಆಗುತ್ತಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್​​ ಶಾ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಅಸ್ಸಾಂನ ಗುವಾಹಟಿಯಲ್ಲಿ ಹೇಳಿಕೆ ನೀಡಿದ ಅಮಿತ್​ ಶಾ  ಅವರು, ಪ್ರಜ್ವಲ್​​ ರೇವಣ್ಣ ಮಾಡಿದ್ದು ಘೋರ ಅನ್ಯಾಯ. ಯಾವುದೇ ಕಾರಣಕ್ಕೂ ಇದನ್ನು ನಾವು ಸಹಿಸಲ್ಲ. ಜೆಡಿಎಸ್​ ಇವತ್ತೇ ಪ್ರಜ್ವಲ್​ ಮೇಲೆ ಕ್ರಮ ಕೈಗೊಳ್ಳುತ್ತೆ ಎಂದು ಪ್ರಜ್ವಲ್​​​​ ಪೆನ್​ಡ್ರೈವ್ ಪ್ರಕರಣ ​​ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ನಿಲುವು ಅತ್ಯಂತ ಸ್ಪಷ್ಟವಾಗಿದೆ. ಮಹಿಳೆಯರಿಗೆ ಆದ ಅಪಮಾನವನ್ನು ನಾವು ಸಹಿಸಲ್ಲ. ಪ್ರಜ್ವಲ್​ ರೇವಣ್ಣ ಪ್ರಕರಣದಲ್ಲಿ ತನಿಖೆ ಆಗಲಿ. ಗಂಭೀರವಾದ ಕ್ರಮ ಕೈಗೊಳ್ಳಲು ನಮ್ಮ ಅಭ್ಯಂತ್ರ ಇಲ್ಲವೇ ಇಲ್ಲ. ಪ್ರಜ್ವಲ್​ ವಿಡಿಯೋಗಳ ಬಗ್ಗೆ ಸರ್ಕಾರಕ್ಕೆ ಗೊತ್ತಿತ್ತು. ಸಿಎಂ, ಡಿಸಿಎಂ ಇಬ್ಬರಿಗೂ ಈ ಬಗ್ಗೆ ಗೊತ್ತಿತ್ತು. ತನಿಖೆ ಮಾಡದೇ ಸುಮ್ಮನೇ ಇದ್ದದ್ದು ಯಾಕೆ..?ಎಲೆಕ್ಷನ್​ ಹೊತ್ತಲ್ಲೇ ಯಾಕೆ ಇದನ್ನು ದೊಡ್ಡ ಮಾಡಿಸಿದ್ರು. ಕಾಂಗ್ರೆಸ್​ ಸರ್ಕಾರವೇ ಇದೆ.. ಬೇಗ ತನಿಖೆ ಮಾಡಿಸಲಿ. ತಕ್ಕ ಶಿಕ್ಷೆ ಕೊಡಿಸಲಿ, ನಮ್ಮ ಅಭ್ಯಂತರ ಇಲ್ಲವೇ ಇಲ್ಲ ಎಂದು ಅಮಿತ್​ ಶಾ ತಿಳಿಸಿದ್ದಾರೆ.

ಇದನ್ನೂ ಓದಿ : ಮೋದಿ ನಂತರ ನಾಳೆ ಉತ್ತರಕ್ಕೆ ಅಮಿತ್​​ ಶಾ ಎಂಟ್ರಿ – ಪ್ರಹ್ಲಾದ್ ಜೋಶಿ, ಬೊಮ್ಮಾಯಿ ಪರ ಮತಬೇಟೆ..!  

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here