Download Our App

Follow us

Home » ಅಪರಾಧ » ಪ್ರಜ್ವಲ್ ರೇವಣ್ಣ ಪೆನ್​​ಡ್ರೈವ್​ ಪ್ರಕರಣ : ದೇವರಾಜೇಗೌಡರನ್ನು ಕಸ್ಟಡಿಗೆ ಪಡೆಯಲು SIT ಚಿಂತನೆ..!

ಪ್ರಜ್ವಲ್ ರೇವಣ್ಣ ಪೆನ್​​ಡ್ರೈವ್​ ಪ್ರಕರಣ : ದೇವರಾಜೇಗೌಡರನ್ನು ಕಸ್ಟಡಿಗೆ ಪಡೆಯಲು SIT ಚಿಂತನೆ..!

ಬೆಂಗಳೂರು : ಹೊಳೆನರಸೀಪುರ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಬಿಜೆಪಿ ಮುಖಂಡ ದೇವರಾಜೇಗೌಡ ಅರೆಸ್ಟ್ ಆಗಿದ್ದಾರೆ. ಮೊನ್ನೆಯಷ್ಟೇ ಕೋರ್ಟ್‌ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಸದ್ಯ ನ್ಯಾಯಾಂಗ ಬಂಧನದಲ್ಲಿ ದೇವರಾಜೇಗೌಡರನ್ನು SIT ಕಸ್ಟಡಿಗೆ ಪಡೆಯಲು ಚಿಂತನೆ ನಡೆಸುತ್ತಿದೆ.

ಪ್ರಜ್ವಲ್​​ ರೇವಣ್ಣ ಪೆನ್​ಡ್ರೈವ್​​ ಪ್ರಕರಣಕ್ಕೆ ಸಂಬಂದಿಸಿದಂತೆ SIT ತನಿಖಾ ತಂಡ ದೇವರಾಜೇಗೌಡರ ಮೇಲೆಯೇ ಕಣ್ಣಿಟ್ಟಿದೆ. ದೇವರಾಜೇಗೌಡರನ್ನು ಫೋಕಸ್​​ ಮಾಡುತ್ತಿರುವ SIT ಕೇಸ್​​ ಸಂಬಂಧ ಹೆಚ್ಚಿನ ವಿಚಾರಣೆ ನಡೆಸಲು ಈಗಾಗಲೇ 2 ಎರಡು ನೋಟಿಸ್​​ ನೀಡಿತ್ತು. ಇದೀಗ ಇದೇ ನೋಟಿಸ್​​ ಮುಂದಿಟ್ಟುಕೊಂಡು ವಶಕ್ಕೆ ಪಡೆಯುವ ಸಾಧ್ಯತೆಯಿದೆ.

ಸದ್ಯ ನ್ಯಾಯಾಂಗ ಬಂಧನದಲ್ಲಿರುವ ದೇವರಾಜೇಗೌಡರನ್ನು ಪ್ರಜ್ವಲ್ ಕೇಸ್ ಸಂಬಂಧ ಬಾಡಿ ವಾರೆಂಟ್ ಪಡೆದು ವಶಕ್ಕೆ ಕೇಳುವ ಸಾಧ್ಯತೆಯಿದೆ. ಈಗಾಗಲೇ ಹೊಳೆ ನರಸೀಪುರ ಪೊಲೀಸರು   ಮೊಬೈಲ್, ದಾಖಲೆ ಪರಿಶೀಲಿಸಿದ್ದಾರೆ. ಇನ್ನು ಹೊಳೆನರಸೀಪುರ ಪೊಲೀಸರು ಕೋರ್ಟ್​ಗೆ ಅರ್ಜಿ ಸಲ್ಲಿಸಿ ದೇವರಾಜೇಗೌಡರನ್ನು ಕಸ್ಟಡಿಗೆ ಕೇಳಲಿದ್ದು, SIT ಅಧಿಕಾರಿಗಳು
ಹೊಳೆನರಸೀಪುರ ಪೊಲೀಸರ ಸಂಪರ್ಕದಲ್ಲಿದ್ದಾರೆ.

ಇದನ್ನೂ ಓದಿ : ಮಮ್ಮುಟ್ಟಿ ಜೊತೆ ರಾಜ್ ಬಿ ಶೆಟ್ಟಿ – ದುಬೈನಲ್ಲಿ “ಟರ್ಬೋ” ಟ್ರೈಲರ್ ರಿಲೀಸ್..! 

Leave a Comment

DG Ad

RELATED LATEST NEWS

Top Headlines

ರವಿಶಂಕರ್ ಪುತ್ರ ಅದ್ವೈ ನಟನೆಯ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ – ಸಾಥ್ ಕೊಟ್ಟ ಶಿವಣ್ಣ..!

ಬಹುಭಾಷಾ ನಟ ಪಿ. ರವಿಶಂಕರ್​ ಅವರ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಣೇಶ ಚತುರ್ಥಿಯ ಶುಭ ದಿನವಾದ ಇಂದು

Live Cricket

Add Your Heading Text Here