Download Our App

Follow us

Home » ಅಪರಾಧ » ಸಂತ್ರಸ್ತೆ ಹೇಳಿಕೆಯೇ ಪ್ರಜ್ವಲ್​​​ಗೆ ಕಂಟಕ : ಬೆದರಿಸಿ ಅತ್ಯಾಚಾರ ಮಾಡಿದ ಆರೋಪ..!

ಸಂತ್ರಸ್ತೆ ಹೇಳಿಕೆಯೇ ಪ್ರಜ್ವಲ್​​​ಗೆ ಕಂಟಕ : ಬೆದರಿಸಿ ಅತ್ಯಾಚಾರ ಮಾಡಿದ ಆರೋಪ..!

ಬೆಂಗಳೂರು : ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಪ್ರಜ್ವಲ್ ರೇವಣ್ಣ ಪೆನ್​​​ಡ್ರೈವ್​​ ಪ್ರಕರಣ ತನಿಖೆ ಚುರುಕುಗೊಳಿಸಿರುವ ಎಸ್‌ಐಟಿ ಮುಂದೆ ಮೊದಲ ಬಾರಿಗೆ ಸಂತ್ರಸ್ತೆಯೊಬ್ಬರು ಹಾಜರಾಗಿ ಪ್ರಜ್ವಲ್‌ ಎಸಗಿದ ಕೃತ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.

ಸಂತ್ರಸ್ತೆ ಹೇಳಿಕೆಯೇ ಇದೀಗ ಪ್ರಜ್ವಲ್​​​ಗೆ ಕಂಟಕವಾಗಿದ್ದು, ಪ್ರಜ್ವಲ್ ರೇವಣ್ಣ ವಿರುದ್ದ ಅತ್ಯಾಚಾರ ಆರೋಪ ಕೇಳಿಬಂದಿದೆ. ಬೆದರಿಸಿ ಅತ್ಯಾಚಾರ ಮಾಡಿದ್ರು ಎಂದು SIT ಹಾಗೂ ಕೋರ್ಟ್ ಮುಂದೆ ಸಂತ್ರಸ್ತೆ ಹೇಳಿಕೆ ನೀಡಿದ್ದಾರೆ. ಅತ್ಯಾಚಾರ ಕೇಸ್​ನಲ್ಲಿ ಈಗಾಗಲೇ ನಾನ್ ಬೇಲಬಲ್ ಕೇಸ್ ದಾಖಲಾಗಿದ್ದು, ಸಂತ್ರಸ್ತೆಯ ಮೆಡಿಕಲ್ ಮಾಡಿಸಿ SIT ರಿಪೋರ್ಟ್ ಪಡೆದಿದೆ. ಮೆಡಿಕಲ್ ರಿಪೋರ್ಟ್ ಹಾಗೂ ಸಂತ್ರಸ್ತೆಯ ಹೇಳಿಕೆ ಕೋರ್ಟ್​ಗೆ ಸಲ್ಲಿಸಲಾಗಿದೆ.

ಪ್ರಜ್ವಲ್ ರೇವಣ್ಣ ಅರೆಸ್ಟ್​ ಮಾಡಲು SIT ವಾರಂಟ್ ಪಡೆದಿದ್ದು, ಪ್ರಜ್ಬಲ್ ರೇವಣ್ಣ ಅರೆಸ್ಟ್ ಮಾಡಿ ವಶಕ್ಕೆ ಪಡೆಯಲು SIT ತಯಾರಿ ಮಾಡಿಕೊಂಡಿದೆ. ಅರೆಸ್ಟ್​ ಸಂಕಷ್ಟಕ್ಕೆ ಸಿಲುಕಿರುವ ಸಂಸದ ಪ್ರಜ್ವಲ್​ ರೇವಣ್ಣ ವಿದೇಶದಲ್ಲಿ​ ತಲೆ ಮರೆಸಿಕೊಂಡಿದ್ದಾನೆ ಎಂದು ಕೋರ್ಟ್​ಗೂ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ : ಪ್ರಜ್ವಲ್​​ ಪೆನ್​ಡ್ರೈವ್ ಸೈಡ್​​ ಎಫೆಕ್ಟ್ : 12 ಶಾಸಕರು JDS ತೊರೆದು ‘ಕೈ’ ಹಿಡಿಯಲು ನಿರ್ಧಾರ..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here