ಬಿಗ್ ಬಾಸ್ ಮನೆಯಲ್ಲಿ ಕೊನೆಯ ಫಿನಾಲೆ ವಾರದಲ್ಲಿ ಗೆಲುವಿಗಾಗಿ ಸೆಣೆಸಾಡುತ್ತಿರುವ ಡ್ರೋನ್ ಪ್ರತಾಪ್ ಮೇಲೆ ಒಂದರ ಮೇಲೆ ಒಂದರಂತೆ ದೂರುಗಳು ದಾಖಲಾಗುತ್ತಿವೆ. ಮೊನ್ನೆಯಷ್ಟೇ ಡಾ.ಪ್ರಯಾಗ್ ಎನ್ನುವವರು ಡ್ರೋನ್ ಪ್ರತಾಪ್ ಮೇಲೆ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ. ಇದೀಗ ಪ್ರತಾಪ್ ಲಕ್ಷ ಲಕ್ಷ ದೋಖಾ ಮಾಡಿರುವ ಆರೋಪ ಒಂದು ಕೇಳಿಬಂದಿದೆ.
ಪ್ರತಾಪ್ ತಾವೇ ಒಂದು ಡ್ರೋನ್ ಸಂಸ್ಥೆ ಪ್ರಾರಂಭಿಸಿ, ರೈತರಿಗೆ ಅನುಕೂಲಕರವಾಗುವಂತೆ ಡ್ರೋನ್ ನಿರ್ಮಿಸಿ ಮಾರಾಟ ಮಾಡುತ್ತಿರುವುದಾಗಿ ಹೇಳಿ ಹಲವು ವಿಡಿಯೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದೀಗ ಪ್ರತಾಪ್, ತಮ್ಮ ಡ್ರೋನ್ಗಳನ್ನು ಮಾರಾಟ ಮಾಡಿದ್ದ ಸಂಸ್ಥೆಯ ಸಿಇಓ ಪ್ರತಾಪ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಪೂಣಾ ಮೂಲದ ಕ್ಯಾಸ್ಪರ್ ಡ್ರೊನೊಟಿಕ್ಸ್ ಹೆಸರಿನ ಸಂಸ್ಥೆಯ ಸಿಇಓ ಸಾರಂಗ್ ಮಾನೆ ಎನ್ನುವವರು ಡ್ರೋಣ್ ಪ್ರತಾಪ್ ಗೆ ಬರೋಬ್ಬರಿ 83 ಲಕ್ಷ ರೂಪಾಯಿ ನೀಡಿದ್ದಾರಂತೆ. ಈ ಹಣದಲ್ಲಿ 8 ಡ್ರೋಣ್ ನೀಡುವುದಾಗಿ ಪ್ರತಾಪ್ ಹೇಳಿದ್ದರಂತೆ. ಆದರೆ, ಕೊಟ್ಟ ಮಾತಿನಂತೆ ಪ್ರತಾಪ್ ನಡೆದುಕೊಂಡಿಲ್ಲ ಎಂದು ಮಾನೆ ಅವರು ಆರೋಪ ಮಾಡಿದ್ದಾರೆ.
ರೈತರ ಬೆಳೆಗಳಿಗೆ ಕ್ರಿಮಿನಾಶಕ ಔಷಧ ಸಿಂಪಡಿಸುವ ಡ್ರೋನ್ ಗಳ ಎಕ್ಸಿಬಿಷನ್ ವೇಳೆ ಸಾರಂಗ್ ಮಾನೆ ಅವರಿಗೆ ಡ್ರೋನ್ ಪ್ರತಾಪ್ ಪರಿಚವಾಗಿದ್ದರಂತೆ. ರೈತರಿಗೆ ಡ್ರೋನ್ ಕಳಿಸಿಕೊಡುವ ಟೆಂಡರ್ ಪಡೆದಿದ್ದ ಸಾರಂಗ್ ಮಾನೆ ಅವರು ಪ್ರತಾಪ್ ಗೆ ಆ ಜವಾಬ್ದಾರಿ ನೀಡಿದ್ದರು.
ಈ ಬಗ್ಗೆ ಮಾತನಾಡಿರುವ ಸಾರಂಗ್ ಮಾನೆ, ಕಳೆದ ವರ್ಷ ನಾಸಿಕ್ ಡ್ರೋನ್ ಎಕ್ಸಿಬಿಷನ್ನಲ್ಲಿ ನಾನು ಡ್ರೋನ್ ಪ್ರತಾಪ್ರ ಡ್ರೋನ್ಗಳನ್ನು ನೋಡಿದ್ದೆ. ಬಳಿಕ ಧುಲಿಯಾನಲ್ಲಿ ಅವರ ಸಿಎ ಸಾಗರ್ ಮುಖಾಂತರ ಅವರ ಕಚೇರಿಗೆ ಹೋಗಿ ಅವರನ್ನು ಭೇಟಿ ಮಾಡಿದೆ. ಒಟ್ಟು ಎಂಟು ಡ್ರೋನ್ ನೀಡುವಂತೆ ಮಾತುಕತೆ ಮಾಡಿ 35.75 ಲಕ್ಷ ರೂಪಾಯಿ ಹಣ ಪಾವತಿ ಮಾಡಿದೆವು. ಈ ಹಣವನ್ನು ನಾವು ರೈತರಿಂದ ಪಡೆದ ಅಡ್ವಾನ್ಸ್ ಹಾಗೂ ಬ್ಯಾಂಕ್ನಿಂದ ಪಡೆದ ಸಾಲವನ್ನು ಒಟ್ಟು ಮಾಡಿ ನೀಡಿದ್ದೆವು.
ಮೊದಲ ಎರಡು ಡ್ರೋನ್ಗಳನ್ನು ನೀಡಲು ಪ್ರತಾಪ್ ಎರಡು ತಿಂಗಳು ತಡ ಮಾಡಿದರು. ಅದಾದ ನಾಲ್ಕು ತಿಂಗಳ ಬಳಿಕ ಇನ್ನೆರಡು ಡ್ರೋನ್ಗಳನ್ನು ನೀಡಿದರು. ಅದಾದ ಬಳಿಕ ಯಾವುದೇ ಡ್ರೋನ್ ನೀಡಿಲ್ಲ. ಇನ್ನೂ ನಾಲ್ಕು ಡ್ರೋನ್ಗಳನ್ನು ಅವರು ನಮಗೆ ನೀಡಬೇಕಿದೆ’ ಎಂದಿದ್ದಾರೆ.
‘ಈಗ ಪ್ರತಾಪ್ ಕೊಟ್ಟಿರುವ ಡ್ರೋನ್ಗಳು ಉತ್ತಮ ಗುಣಮಟ್ಟ ಹೊಂದಿಲ್ಲ. ಕೆಲವು ಡ್ರೋನ್ಗಳ ಬ್ಯಾಟರಿ ಸರಿಯಿಲ್ಲ. ಒಂದು ಡ್ರೋನ್ ನಲ್ಲಿ ತಪ್ಪು ಜಿಪಿಎಸ್ ತೋರಿಸುತ್ತಿದೆ. ಪ್ರತಾಪ್, ಡ್ರೋನ್ಗಳ ಬಿಡಿ ಭಾಗಗಳನ್ನು ವಿದೇಶಗಳಿಂದ ತರಿಸುತ್ತಾರೆ. ಹಾಗೂ ಅದನ್ನು ತಾವು ಜೋಡಿಸಿ ಮಾರಾಟ ಮಾಡುತ್ತಾರೆ. ಹೀಗೆ ಜೋಡಿಸಲು ಸಹ ಧುಲೆಯಿಂದ ಇಂಟರ್ನ್ಗಳನ್ನು ಕರೆದುಕೊಂಡು ಅವರಿಂದ ಡ್ರೋನ್ನ ಕಾಂಪೋನೆಂಟ್ಸ್ಗಳನ್ನು ಜೋಡಿಸಿ ಮಾರಾಟ ಮಾಡುತ್ತಾರೆ. ಅವರಿಗೆ ಹೆಚ್ಚಿನ ತಂತ್ರಜ್ಞಾನ ಮಾಹಿತಿ ಇದೆ ಎಂದು ನನಗೆ ಅನಿಸುವುದಿಲ್ಲ’ ಎಂದಿದ್ದಾರೆ.
ಇದನ್ನೂ ಓದಿ : 80 ಸಾವಿರ ಲಂಚಕ್ಕೆ ಬೇಡಿಕೆ : ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AE..!