ಬೀದರ್ : ಬೀದರ್ನಲ್ಲಿ ಮಿಡ್ನೈಟ್ನಲ್ಲೇ ರೌಡಿಶೀಟರ್ ರಸೂಲ್ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ರೌಡಿಶೀಟರ್ ರಸೂಲ್ನನ್ನ ಚಿಕಿತ್ಸೆಗೆಂದು ಪೊಲೀಸರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ರಸೂಲ್ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.
ನ್ಯೂಟೌನ್ ಠಾಣೆಯ CPI ಸಂತೋಷ್ ಮೇಲೆ ರಸೂಲ್ ಹಲ್ಲೆ ನಡೆಸಿದ್ದಾನೆ. ರೌಡಿಶೀಟರ್ ರಸೂಲ್ CPI ಸಂತೋಷ್ಗೆ ಚಾಕು ಇರಿದಿದ್ದು, ಆತ್ಮರಕ್ಷಣೆಗಾಗಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಸಿಪಿಐ ಆತ್ಮರಕ್ಷಣೆಗಾಗಿ ರಸೂಲ್ ಬಲಗಾಲಿಗೆ ಫೈರ್ ಮಾಡಿದ್ದಾರೆ.
ಸಿಪಿಐ ಸಂತೋಷಗೆ ಬ್ರಿಮ್ಸ್ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನಡೆಯುತ್ತಿದ್ದು, ಪ್ರಾಥಮಿಕ ಚಿಕಿತ್ಸೆ ಬಳಿಕ ಆ್ಯಂಬುಲೈನ್ಸ್ನಲ್ಲಿ ಕಲಬುರಗಿಗೆ ರವಾನಿಸಿದ್ದಾರೆ.
ಇದನ್ನೂ ಓದಿ : ಓವರ್ ಟೇಕ್ ಭರದಲ್ಲಿ ಬೈಕ್ಗೆ ಡಿಕ್ಕಿ ಹೊಡೆದ ಕ್ಯಾಂಟರ್ : ಬೈಕ್ ಸವಾರ ಸ್ಥಳದಲ್ಲೇ ಸಾ*ವು..!
Post Views: 15