Download Our App

Follow us

Home » ರಾಷ್ಟ್ರೀಯ » ಬಾಹ್ಯಾಕಾಶಕ್ಕೆ ತೆರಳುತ್ತಾರಾ ಪ್ರಧಾನಿ ಮೋದಿ? ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ಹೇಳಿದ್ದೇನು?

ಬಾಹ್ಯಾಕಾಶಕ್ಕೆ ತೆರಳುತ್ತಾರಾ ಪ್ರಧಾನಿ ಮೋದಿ? ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ಹೇಳಿದ್ದೇನು?

ಬೆಂಗಳೂರು : ಭಾರತದ ಪ್ರತಿಷ್ಠಿತ ಬಾಹ್ಯಾಕಾಶ ಸಂಸ್ಥೆಯಾದ ಇಸ್ರೋ, ತನ್ನ ಪ್ರಪ್ರಥಮ ಮಾನವ ಸಹಿತ ಗಗನ ಯಾನಕ್ಕೆ ಸಜ್ಜಾಗುತ್ತಿದ್ದು, ಇನ್ನೆರಡು ವರ್ಷಗಳಲ್ಲಿ ಈ ಯೋಜನೆಯ ಭಾಗವಾಗಿ ಗಗನ ನೌಕೆಯೊಂದು ಬಾಹ್ಯಾಕಾಶಕ್ಕೆ ಉಡಾವಣೆಯಾಗಲಿದೆ.

ಈ ಹಿನ್ನಲೆಯಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿದ ಇಸ್ರೋ ಮುಖ್ಯಸ್ಥ ಡಾ ಎಸ್​​. ಸೋಮನಾಥ್ ಅವರು, ಅವಕಾಶ ಸಿಕ್ಕರೆ ಬಾಹ್ಯಾಕಾಶಕ್ಕೆ ಪ್ರಧಾನಿ ಮೋದಿ ಅವರನ್ನು ಕರೆದೊಯ್ತೇವೆ. ಸದ್ಯಕ್ಕೆ ತರಬೇತಿ ಹೊಂದಿದವರನ್ನು ಮಾತ್ರ ಕರೆದೊಯ್ತೇವೆ ಎಂದಿದ್ದಾರೆ.

ಇನ್ನು ಗಗನಯಾನ ಸಂಬಂಧ ಇಸ್ರೋ ಹಲವು ಯೋಜನೆ ಹಮ್ಮಿಕೊಂಡಿದೆ. ದೇಶದ ಮುಖ್ಯಸ್ಥರನ್ನು ಕರೆದೊಯ್ಯಲು ತುಂಬಾ ಸಾಮರ್ಥ್ಯ ಬೇಕು. ಅಂಥಾ ಸಾಮರ್ಥ್ಯ ತಮಗೆ ದಕ್ಕಿದರೆ ಅದಕ್ಕಿಂತ ಯಶಸ್ಸು ಬೇರೆ ಇಲ್ಲ ಎಂದಿದ್ದಾರೆ.

ಮೋದಿಯವರನ್ನು ಕರೆದೊಯ್ಯಲು ಸಾಧ್ಯವಾದರೆ ಇಡೀ ದೇಶದ ಪಾಲಿಗೆ ಅತ್ಯಂತ ಹೆಮ್ಮೆಯ ಕ್ಷಣವಾಗಲಿದೆ ಎಂದು ಇಸ್ರೋ ಮುಖ್ಯಸ್ಥ ಡಾ S ಸೋಮನಾಥ್ ಹೇಳಿಕೆ ನೀಡಿದ್ದಾರೆ. ಈ ಮೂಲಕ ಮೋದಿ ಗಗನಯಾತ್ರೆಗೆ  ರೆಡಿಯಾಗ್ತಿದೆಯಾ ಇಸ್ರೋ? ಬಾಹ್ಯಾಕಾಶಕ್ಕೆ ಪ್ರಧಾನಿ ಮೋದಿ ತೆರಳುತ್ತಾರಾ ? ಎಂದು ಕಾದುನೋಡಬೇಕಾಗಿದೆ.

ಇದನ್ನೂ ಓದಿ : ಹತೋಟಿಗೆ ಬರ್ತಾನೆ ಇಲ್ಲ ಡೇಂಜರ್​​​​ ಡೆಂಗ್ಯೂ – ಮನೆ ಮನೆ ಸರ್ವೆ ಹಾಗೂ ಜಾಗೃತಿ ಕಾರ್ಯ ಹೆಚ್ಚಿಸಿದ BBMP..!

Leave a Comment

DG Ad

RELATED LATEST NEWS

Top Headlines

ವಿಕ್ಕಿ ಯಾವಾಗಲೂ ಹೇಗಿರ್ತಾರೆ ಗೊತ್ತಾ? – ದಾಂಪತ್ಯದ ಸೀಕ್ರೆಟ್ ರಿವೀಲ್ ಮಾಡಿದ ಕತ್ರಿನಾ ಕೈಫ್..!

ಮುಂಬೈ : ಬಾಲಿವುಡ್​ನ​ ಕ್ಯೂಟ್​ ಕಪಲ್​ಗಳಲ್ಲಿ ಕತ್ರಿನಾ ಕೈಫ್​​ ಮತ್ತು ವಿಕ್ಕಿ ಕೌಶಲ್​ ಕೂಡ ಒಬ್ಬರು. 2021ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಮುದ್ದಾದ ಜೋಡಿಯನ್ನು ಬಿಗ್

Live Cricket

Add Your Heading Text Here