Download Our App

Follow us

Home » ಅಪರಾಧ » ರೇವ್​​ ಪಾರ್ಟಿ ಪ್ರಕರಣ – ನಟಿ ಹೇಮಾ ತಲೆಗೂದಲು ಟೆಸ್ಟ್​​​ಗೆ ಮುಂದಾದ ಸಿಸಿಬಿ..!

ರೇವ್​​ ಪಾರ್ಟಿ ಪ್ರಕರಣ – ನಟಿ ಹೇಮಾ ತಲೆಗೂದಲು ಟೆಸ್ಟ್​​​ಗೆ ಮುಂದಾದ ಸಿಸಿಬಿ..!

ಬೆಂಗಳೂರು : ನಗರದ ಎಲೆಕ್ಟ್ರಾನಿಕ್ ಸಿಟಿಯ ಜಿಆರ್ ಫಾರಂ ಹೌಸ್​ನಲ್ಲಿ ನಡೆದ ರೇವ್ ಪಾರ್ಟಿ ಪ್ರಕರಣದಲ್ಲಿ ಭಾಗಿಯಾದ ತೆಲುಗು ಚಿತ್ರರಂಗದ ನಟಿ ಹೇಮಾಗೆ ಮತ್ತೊಂದು ಸಂಕಷ್ಟ ಶುರುವಾಗಿದೆ.

ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾರ್ಟಿ ಆಯೋಜಕ ಹಾಗೂ ಮೂವರು ಡ್ರಗ್ ಪೆಡ್ಲರ್ ಸೇರಿ ಐವರನ್ನು ವಶಕ್ಕೆ ಪಡೆದ ಪೊಲೀಸರು, ಪಾರ್ಟಿಯಲ್ಲಿ ಭಾಗಿಯಾಗಿದ್ದ 101 ಮಂದಿಯ ಬ್ಲಡ್ ಸ್ಯಾಂಪಲ್ ಪಡೆದಿದ್ದಾರೆ. ಬ್ಲಡ್​ ರಿಪೋರ್ಟ್​ ಬಂದ ನಂತರ ಡ್ರಗ್ಸ್​ ಅಂಶ ಕಂಡು ಬಂದವರಿಗೆ ನೋಟಿಸ್​ ನೀಡಲು ತಯಾರಿ ನಡೆಸಿತ್ತು.

ಇದೀಗ CCB ಪಾರ್ಟಿಯಲ್ಲಿ ಭಾಗಿಯಾಗಿದ್ದ ನಟಿ ಹೇಮಾ ತಲೆಗೂದಲು ಪರೀಕ್ಷೆ ನಡೆಸಲು ಸಜ್ಜಾಗಿದೆ. ಬ್ಲಡ್​ ರಿಪೋರ್ಟ್​ ಪಾಸಿಟೀವ್​ ಬಂದ ಬಳಿಕವೇ ಮತ್ತೊಂದು ನೋಟಿಸ್​ ಕೊಟ್ಟು ಕರೆಸಿಕೊಳ್ಳುವ CCB ಅಧಿಕಾರಿಗಳು, ನಟಿ ಹೇಮಾ ಕಳೆದ ಒಂದು ವರ್ಷದಿಂದ ಯಾವ ಯಾವ ರೀತಿಯ ಡ್ರಗ್ಸ್ ಸೇವನೆ ಮಾಡಿದ್ದಾರೆ ಎಂಬ ಬಗ್ಗೆ ತಲೆಗೊದಲು ಟೆಸ್ಟ್ ಮೂಲಕ ಪತ್ತೆ ಹಚ್ಚಲು  ಮುಂದಾಗಿದೆ.

ಈ ಹಿಂದೆ ಸ್ಯಾಂಡಲ್ ವುಡ್​​ನ ಇಬ್ಬರು ನಟಿಯರಿಗೆ ತಲೆಗೊದಲು ಟೆಸ್ಟ್ ನಡೆದಿತ್ತು. ತಲೆಕೂದಲಿನ ಟೆಸ್ಟ್ ಮೂಲಕ CCB ಪೊಲೀಸರು ಡ್ರಗ್ಸ್ ಸೇವನೆ ಮಾಡಿರುವುದು ಪತ್ತೆ ಹಚ್ಚಿದ್ದರು.  ಡ್ರಗ್ಸ್ ಸೇವನೆ ಮಾಡಿರುವುದು ಪತ್ತೆಯಾದ ಬೆನ್ನಲ್ಲೇ ಇಬ್ಬರು ಖ್ಯಾತ ನಟಿರನ್ನು CCB ಪೊಲೀಸರು ಅರೆಸ್ಟ್​​ ಮಾಡಿ ಜೈಲಿಗೆ ಕಳಿಸಲಾಗಿತ್ತು. ಇದೀಗ ತೆಲುಗು ನಟಿ ಹೇಮಾಗೂ ತಲೆ ಕೂದಲು ಟೆಸ್ಟ್ ಮಾಡಿಸಲು ಸಿಸಿಬಿ ಪೊಲೀಸರು ತಯಾರಿ ನಡೆಸುತ್ತಿದ್ದಾರೆ. ಕೂದಲು ಪರೀಕ್ಷೆ ನಡೆದ್ರೆ ನಟಿ ಅರೆಸ್ಟ್ ಆಗ್ತಾರಾ ಎಂದು ಕಾದು ನೋಡಬೇಕಾಗಿದೆ.

ಇದನ್ನೂ ಓದಿ : ವಿದ್ಯಾರ್ಥಿನಿ ಪ್ರಭುದ್ಯಾ ಸಾವಿನ ಕೇಸ್​ಗೆ ಟ್ವಿಸ್ಟ್ ​- ಆತ್ಮಹ*ತ್ಯೆ ಅಲ್ಲವೇ ಅಲ್ಲ, ಕೊಲೆ ಎಂದು ತಾಯಿಯಿಂದ ದೂರು..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here