Download Our App

Follow us

Home » ಸಿನಿಮಾ » ಒಟಿಟಿ ಪ್ರಿಯರಿಗೆ ಸಿಹಿ ಸುದ್ದಿ – ಈ ವೀಕೆಂಡ್ ರಿಲೀಸ್ ಆಗುವ​ ಸೀರಿಸ್‌, ಸಿನಿಮಾಗಳ ಲಿಸ್ಟ್ ಇಲ್ಲಿದೆ..!

ಒಟಿಟಿ ಪ್ರಿಯರಿಗೆ ಸಿಹಿ ಸುದ್ದಿ – ಈ ವೀಕೆಂಡ್ ರಿಲೀಸ್ ಆಗುವ​ ಸೀರಿಸ್‌, ಸಿನಿಮಾಗಳ ಲಿಸ್ಟ್ ಇಲ್ಲಿದೆ..!

ಒಟಿಟಿ ಪ್ರಿಯರಿಗೆ ಇದು ಸಿಹಿ ಸುದ್ದಿ​. ಸಿನಿಮಾ, ಸಿರೀಸ್‌ ಅಷ್ಟು ಮಾತ್ರವಲ್ಲದೇ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ಕೂಡ ಈ ವೀಕೆಂಡ್‌‌ನಲ್ಲಿ ಒಟಿಟಿ ಪ್ಲೇ, ಜಿಯೋ ಸಿನಿಮಾ, ನೆಟ್‌ಫ್ಲಿಕ್ಸ್‌, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್, ಜೀ5 ಸೇರಿದಂತೆ ವಿವಿಧ ಒಟಿಟಿಗಳಲ್ಲಿ ಪ್ಲಾಟ್​ ಫಾರ್ಮ್ಗಳಲ್ಲಿ ಬಿಡುಗಡೆಯಾಗಿವೆ. ಹಾಗಾಗಿ ಮನೆಯಲ್ಲೇ ಕೂತು ಈ ವೀಕೆಂಡ್‌‌ನಲ್ಲಿ ಸಿನಿ ಪ್ರಿಯರು ಸಖತ್‌ ಮಜಾ ಮಾಡಬಹದು. 

ಯಾವೆಲ್ಲ ಸಿನಿಮಾ, ಸೀರಿಸ್​ ಬಿಡುಗಡೆಯಾಗಿದೆ ಗೊತ್ತಾ?

1) ನಟ ಪೃಥ್ವಿ ಅಂಬಾರ್‌ ನಟಿಸಿರುವ ಕನ್ನಡ ಸಿನಿಮಾ ಮತ್ಸ್ಯಗಂಧ ಈ ವಾರ ಒಟಿಟಿಯಲ್ಲಿ ನೋಡಬಹುದು. ಸೆಪ್ಟೆಂಬರ್‌ 20ರಂದು ಸಿನಿಬಜಾರ್‌ ಒಟಿಟಿಯಲ್ಲಿ ರೆಂಟ್‌ ರೂಪದಲ್ಲಿ ಮತ್ಸ್ಯಗಂಧ ಸಿನಿಮಾ ಬಿಡುಗಡೆಯಾಗಿದೆ. ಕನ್ನಡ ಸಿನಿಮಾ ಪ್ರೇಮಿಗಳು 49 ರೂಪಾಯಿ ನೀಡಿ ಈ ಚಿತ್ರವನ್ನು ಕಣ್ತುಂಬಿಕೊಳ್ಳಬಹುದು. ಪ್ರಶಾಂತ್‌ ಸಿದ್ಧಿ, ನಾಗರಾಜ್‌ ಬೈಂದೂರ್‌, ಶರತ್‌ ಲೋಹಿತಾಶ್ವ, ಮೈಮ್‌ ರಾಮದಾಸ್‌ ಮುಂತಾದವರು ನಟಿಸಿದ್ದಾರೆ.

2) ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ (ಸೀಸನ್ 2) – ನೆಟ್‌ಫ್ಲಿಕ್ಸ್ : ಕಪಿಲ್ ಶರ್ಮಾ ದಿ ಗ್ರೇಟ್ ಇಂಡಿಯನ್ ಕಪಿಲ್ ಶೋನ ಎರಡನೇ ಸೀಸನ್‌ಗೆ ಹೋಸ್ಟ್ ಆಗಿ ಮರಳಿದ್ದಾರೆ. ಆಲಿಯಾ ಭಟ್, ಕರಣ್ ಜೋಹರ್, ಸೈಫ್ ಅಲಿ ಖಾನ್, ಜಾನ್ವಿ ಕಪೂರ್, ಜೂನಿಯರ್ ಎನ್‌ಟಿಆರ್, T20 ವಿಶ್ವಕಪ್ ಚಾಂಪಿಯನ್‌ಗಳಂತಹ ಗಣ್ಯರು ಬರುತ್ತಿದ್ದಾರೆ. ಇದು ಸೆಪ್ಟೆಂಬರ್‌ 21 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಪ್ರೀಮಿಯರ್‌‌ ಆಗುತ್ತಿದೆ.

ತಮ್ಮ ನಟನೆಯ ‘ದೇವರ’ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿರುವ ಜೂ ಎನ್​ಟಿಆರ್ ಕೂಡ ಕಪಿಲ್ ಶರ್ಮಾ ಶೋಗೆ ಅತಿಥಿಯಾಗಿ ಆಗಮಿಸಿದ್ದಾರೆ. ಅಂದಹಾಗೆ ಶೋನ ಮೊದಲ ಅತಿಥಿಯೇ ಜೂ ಎನ್​ಟಿಆರ್ ಎಂಬ ಮಾತುಗಳು ಸಹ ಕೇಳಿ ಬರುತ್ತಿದೆ. ಈಗಾಗಲೇ ಪ್ರೋಮೊ ಔಟ್‌‌ ಆಗಿದ್ದು, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಇನ್ನಿತರೆ ಕೆಲವು ಆಟಗಾರರು ಶೋಗೆ ಆಗಮಿಸಿ ಮಜಾ ಮಾಡಿದ್ದಾರೆ. ಜಾನ್ವಿ ಕೂಡ ವೇದಿಕೆಯಲ್ಲಿ ಚುಟ್ಟಮಲ್ಲೆಗೆ ಡ್ಯಾನ್ಸ್ ಮಾಡಿದ್ದಾರೆ.

ಇನ್ನು ಒಟಿಟಿ ಪ್ರಿಯರು ಕಾತುರದಿಂದ ಕಾಯುತ್ತಿದ್ದ ಪೆಂಗ್ವಿನ್ ಸೀರಿಸ್ ಕೂಡ ಸೆಪ್ಟೆಂಬರ್ 20ರಿಂದ ಪ್ರೀಮಿಯರ್ ಆಗುತ್ತಿದೆ. ಜಿಯೋ ಸಿನಿಮಾ ಪ್ರೀಮಿಯರ್‌ನಲ್ಲಿ ಈ ಪೆಂಗ್ವಿನ್ ಸೀರಿಸ್‌ ಸ್ಟ್ರೀಮಿಂಗ್ ಆಗುತ್ತಿದೆ.

ವಂಡಾ ವಿಷನ್ ವೆಬ್ ಸರಣಿಯಲ್ಲಿ ಈಗಾಗಲೇ ಈ ಪಾತ್ರವನ್ನು ಸಾಕಷ್ಟು ಜನರು ನೋಡಿರಬಹುದು. ಇದೀಗ ಆ ಪಾತ್ರವೇ ಪ್ರತ್ಯೇಕ ವೆಬ್‌ ಸರಣಿಯಾಗಿದೆ. ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಮಾತ್ರ ಬಿಡುಗಡೆಯಾಗಿದೆ. ಇದು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ.

ಮಾನ್‌ಸ್ಟಾರ್‌ : ದಿ ಲೈಲಿ ಆಂಡ್‌ ಇರಿಕ್‌ ಮೆನೆಡೆನ್ಸ್‌ ಸ್ಟೋರಿ – ಮೆನೆಡೆನ್‌ ಬ್ರದರ್ಸ್‌ಗಳ ಸತ್ಯ ಕಥೆ ಆಧರಿತ ಕ್ರೈಮ್‌ ಸ್ಟೋರಿ ಇದಾಗಿದ್ದು, ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ.

ಇದನ್ನೂ ಓದಿ : ಇಂದು ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದಲ್ಲಿ ಜೆಡಿಎಸ್‌ ಮಹತ್ವದ ಸಭೆ..!

Leave a Comment

DG Ad

RELATED LATEST NEWS

Top Headlines

ಸೆಟ್ಟೇರಿತು ಶಶಿಕುಮಾರ್ ಮಗನ ಮೂರನೇ ಸಿನಿಮಾ -‘ರಾಶಿ’ಗೆ ಸಮೀಕ್ಷಾ ನಾಯಕಿ..!

ನಟ ಶಶಿಕುಮಾರ್ ಅವರು ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದವರು. ಈಗ ಅವರು ಪೋಷಕ ಪಾತ್ರಗಳ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಗುರುತಿಸಿಕೊಂಡಿದ್ದಾರೆ. ಈಗ ಅವರ ಮಗ ಆದಿತ್ಯ ಅವರು ನಟನಾಗಿ

Live Cricket

Add Your Heading Text Here