ಬೆಂಗಳೂರು : ಇಂದು ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದಲ್ಲಿ ಜೆಡಿಎಸ್ ನಾಯಕರ ಮಹತ್ವದ ಸಭೆ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಜೆಪಿ ಭವನದಲ್ಲಿ ಮಹತ್ವದ ಮೀಟಿಂಗ್ ನಡೆಯಲಿದ್ದು, ಬೆಂಗಳೂರು ವಿಚಾರವಾಗಿ ಪಕ್ಷದ ನಾಯಕರ ಜೊತೆ ಹೆಚ್‌ಡಿಡಿ ಸಭೆ ನಡೆಸಲಿದ್ದಾರೆ.
ಸಭೆಯಲ್ಲಿ ಜೆಡಿಎಸ್‌ಪಿ ನಾಯಕ ಸುರೇಶ್ ಬಾಬು, ನಿಖಿಲ್ ಕುಮಾರಸ್ವಾಮಿ, ಮಾಜಿ, ಹಾಲಿ ಸಚಿವರು, ಸಂಸದರು, ಶಾಸಕರು, ಪದಾಧಿಕಾರಿಗಳು, ವಿವಿಧ ವಿಭಾಗದ ಅಧ್ಯಕ್ಷರು, ವಾರ್ಡ್ ಅಧ್ಯಕ್ಷರು, ಬಿಬಿಎಂಪಿ ಟಿಕೆಟ್ ಆಕಾಂಕ್ಷಿಗಳು ಸೇರಿದಂತೆ ಪ್ರಮುಖ ಮುಖಂಡರು ಭಾಗಿಯಾಗಲಿದ್ದಾರೆ.
ಇನ್ನು ಈ ಸಭೆಯಲ್ಲಿ ಬೆಂಗಳೂರಿನಲ್ಲಿ ಪಕ್ಷ ಸಂಘಟನೆ, ಸದಸ್ಯತ್ವ ನೋಂದಣಿ ಅಭಿಯಾನ, ಮುಂಬರುವ ಬಿಬಿಎಂಪಿ ಚುನಾವಣೆ ಕುರಿತು ಚರ್ಚೆ ನಡೆಯಲಿದೆ. ಈ ಮೂಲಕ ಮಾಜಿ ಪ್ರಧಾನಿ ದೇವೇಗೌಡರು ಈಗಿನಿಂದಲೇ ಬಿಬಿಎಂಪಿ ಚುನಾವಣೆಗೆ ತಯಾರಿ ಶುರು ಮಾಡಿದ್ದಾರೆ. ಕೆಲವು ದಿನಗಳ ಹಿಂದೆ ನಾನು ಪಕ್ಷ ಸಭೆ, ಕಾರ್ಯಕ್ರಮಗಳಲ್ಲಿ ಭಾಗಿಯಾಗ್ತಿನಿ, ದೇವೇಗೌಡರನ್ನ ಯಾರಿಂದಲೂ ಮುಗಿಸಲು ಸಾಧ್ಯವಿಲ್ಲ ಎಂದು ಸ್ವತಃ ಅವರೇ ಗುಡುಗಿದ್ದರು.
ಅದೇ ರೀತಿ ಇಂದು ಹೆಚ್‌ಡಿಡಿ ಪಕ್ಷದ ಪ್ರಮುಖ ನಾಯಕರ ಸಭೆ ಕರೆದಿದ್ದಾರೆ. ಪ್ರಜ್ವಲ್ ರೇವಣ್ಣ ಘಟನೆಯಿಂದ ಹೊರ ಬಂದು ಮತ್ತೆ ಪಕ್ಷ ಸಂಘಟನೆಗೆ ಹೆಚ್‌ಡಿಡಿ ಮುಂದಾಗಿದ್ದಾರೆ. ಕಳೆದ ಶನಿವಾರ ಕೇಂದ್ರ ಸಚಿವ ಹೆಚ್‌ಡಿಕೆ ಸದಸ್ಯತ್ವ ಅಭಿಯಾನ ಕುರಿತು ರಾಜ್ಯ ಮಟ್ಟದ ಸಭೆ ನಡೆಸಿದ್ದರು. ಇಂದು ದೇವೇಗೌಡರು ಬೆಂಗಳೂರು ವ್ಯಾಪ್ತಿಯ ನಾಯಕರ ಸಭೆ ನಡೆಸ್ತಿದ್ದಾರೆ.
ಇದನ್ನೂ ಓದಿ : ಮೈಸೂರು ಅರಮನೆ ಮುಂದೆ ರೊಚ್ಚಿಗೆದ್ದ ದಸರಾ ಆನೆಗಳು – ದಿಕ್ಕಾಪಾಲಾಗಿ ಓಡಿದ ಜನ..!