Download Our App

Follow us

Home » ಅಪರಾಧ » ಈರುಳ್ಳಿ ವ್ಯಾಪಾರಿ ಮನೆಗೆ ನುಗ್ಗಿ ದರೋಡೆ – 6.57 ಲಕ್ಷ ಹಣ, ಚಿನ್ನಾಭರಣ ಸಮೇತ CCTV ಹಾರ್ಡ್ ಡಿಸ್ಕ್ ಕದ್ದು ಖದೀಮರು ಎಸ್ಕೇಪ್..!

ಈರುಳ್ಳಿ ವ್ಯಾಪಾರಿ ಮನೆಗೆ ನುಗ್ಗಿ ದರೋಡೆ – 6.57 ಲಕ್ಷ ಹಣ, ಚಿನ್ನಾಭರಣ ಸಮೇತ CCTV ಹಾರ್ಡ್ ಡಿಸ್ಕ್ ಕದ್ದು ಖದೀಮರು ಎಸ್ಕೇಪ್..!

ಚಿತ್ರದುರ್ಗ : ಜಿಲ್ಲೆಯ ಹಿರೇಹಳ್ಳಿ ಗ್ರಾಮದ ಈರುಳ್ಳಿ ವ್ಯಾಪಾರಿ ತಿಪ್ಪೇಸ್ವಾಮಿ ಮನೆಯಲ್ಲಿ ಸಿನಿಮಾ ಮೀರಿಸೋ ರಾಬರಿ ನಡೆದಿದ್ದು, 3 ಮಂದಿ ದರೋಡೆಕೋರ ಗ್ಯಾಂಗ್ ಹಣ, ಚಿನ್ನಾಭರಣ ಕದ್ದು ಪರಾರಿಯಾಗಿದೆ.

ದರೋಡೆಕೋರು ಮನೆಯಲ್ಲಿದ್ದ ವೃದ್ದ ತಿಪ್ಪೇಸ್ವಾಮಿ, ಮಗಳು ಪುಷ್ಪಲತ, ಮಗ ನಿಧಿ ಕೈಯನ್ನು ಕಟ್ಟಿ ಹಾಕಿ 6.57 ಲಕ್ಷ ನಗದು ಹಾಗೂ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದರೋಡೆ ಮಾಡಿದ್ದಾರೆ.

ಇನ್ನು, 3 ಮಂದಿ ದರೋಡೆಕೋರ ಗ್ಯಾಂಗ್ ತಮ್ಮ ಗುರುತು ಎಲ್ಲಿಯೂ ಗೊತ್ತಾಗಬಾರದೆಂದು CCTVಯ ಹಾರ್ಡ್ ಡಿಸ್ಕ್ ಸಮೇತ ಎಸ್ಕೇಪ್​​ ಆಗಿದ್ದಾರೆ. ಘಟನಾ ಸ್ಥಳಕ್ಕೆ ಚಳ್ಳಕೆರೆ DySP ರಾಜಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಳಕು ಠಾಣೆಯಲ್ಲಿ ಕೇಸ್​ ದಾಖಲಾಗಿದೆ. ದರೋಡೆಕೋರರ ಗ್ಯಾಂಗ್​ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ : ಬೆಂಗಳೂರಿನಲ್ಲಿ ಧಗಧಗನೆ ಹೊತ್ತಿ ಉರಿದ BMTC ಬಸ್ : ತಪ್ಪಿದ ಅನಾಹುತ..!

Leave a Comment

DG Ad

RELATED LATEST NEWS

Top Headlines

ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ವೇನಲ್ಲಿ ಡಿವೈಡರ್​​ಗೆ ಡಿಕ್ಕಿ ಹೊಡೆದ ಕಾರು – ತಾಯಿ, ಮಗ ಸ್ಥಳದಲ್ಲೇ ಸಾವು..!

ಮಂಡ್ಯ : ಮೈಸೂರು-ಬೆಂಗಳೂರು ಎಕ್ಸ್​ಪ್ರೆಸ್​ ವೇ ನಲ್ಲಿ ಭೀಕರ ರಸ್ತೆ ಅಪಘಾತಕ್ಕೆ ತಾಯಿ ಮಗ ಬಲಿಯಾಗಿರುವ ಘಟನೆ ನಡೆದಿದೆ. ರುದ್ರಾಕ್ಷಿಪುರ ಗ್ರಾಮದ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಕಾರಿನಲ್ಲಿ

Live Cricket

Add Your Heading Text Here