Download Our App

Follow us

Home » ಮೆಟ್ರೋ » ನಿಗದಿಗಿಂತ ಹೆಚ್ಚಿನ ಹಣಕ್ಕಾಗಿ ಗಲಾಟೆ – ನಡು ರಸ್ತೆಯಲ್ಲೇ ಪ್ರಯಾಣಿಕನಿಗೆ ನಿಂದಿಸಿ ಹಲ್ಲೆಗೆ ಯತ್ನಿಸಿದ ಓಲಾ ಕ್ಯಾಬ್​ ಡ್ರೈವರ್..!

ನಿಗದಿಗಿಂತ ಹೆಚ್ಚಿನ ಹಣಕ್ಕಾಗಿ ಗಲಾಟೆ – ನಡು ರಸ್ತೆಯಲ್ಲೇ ಪ್ರಯಾಣಿಕನಿಗೆ ನಿಂದಿಸಿ ಹಲ್ಲೆಗೆ ಯತ್ನಿಸಿದ ಓಲಾ ಕ್ಯಾಬ್​ ಡ್ರೈವರ್..!

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ನಿಗದಿಗಿಂತ ಹೆಚ್ಚಿನ ಹಣ ನೀಡುವಂತೆ ಓಲಾ ಕ್ಯಾಬ್ ಡ್ರೈವರ್ ಕ್ಯಾತೆ ತೆಗೆದಿದ್ದು, ಚಾಲಕ ನಡು ರಸ್ತೆಯಲ್ಲೇ ಪ್ರಯಾಣಿಕನಿಗೆ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾನೆ.

ಪದ್ಮನಾಭ ನಗರದ RK ಲೇಔಟ್​ನಲ್ಲಿ ಕ್ಯಾಬ್ ಡ್ರೈವರ್ ಗೂಂಡಾಗಿರಿ ನಡೆಸಿದ್ದು, ಬಿಲ್​ ತೋರಿಸಿ ಎಂದು ಹೇಳಿದ್ರೂ ಡ್ರೈವರ್ ಕಾಂತರಾಜ್ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾನೆ.
ಶುಭಂ ಎಂಬುವವರು RK ಲೇಔಟ್​ನಲ್ಲಿ ಓಲಾ ಕ್ಯಾಬ್ ಬುಕ್ ಮಾಡಿದ್ದರು. 3 km ಹೆಚ್ಚು ತೋರಿಸ್ತಿದೆ ಎಂದು ಎಕ್ಸ್​ಟ್ರಾ ಹಣ ಕೊಡುವಂತೆ ಡ್ರೈವರ್ ಪಟ್ಟು ಹಿಡಿದು ಹೆಚ್ಚಿನ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾನೆ.

ಬಿಲ್​ ತೋರಿಸಿ ಹೆಚ್ಚಿನ ಹಣ ನೀಡುತ್ತೇನೆ ಎಂದ್ರೂ ಕಾಂತರಾಜ್ ಬಿಡಲಿಲ್ಲ. ಇದಕ್ಕೆ ನಿರಾಕರಿಸಿದ ಪ್ರಯಾಣಿಕ ಶುಭಂ ಟ್ರಿಪ್ ಕ್ಯಾನ್ಸಲ್ ಮಾಡಲು ಹೇಳಿದ. ಇದೇ ವಿಚಾರಕ್ಕೆ ಕಾಂತರಾಜ್- ಶುಭಂ ಮಧ್ಯೆ ನಡು ರಸ್ತೆಯಲ್ಲೇ ವಾಗ್ವಾದ ನಡೆದಿದೆ. ಈ‌ ಬಗ್ಗೆ X ನಲ್ಲಿ ಪೋಸ್ಟ್ ಹಾಕಿ ಬೆಂಗಳೂರು ಪೊಲೀಸರಿಗೆ ಶುಭಂ ದೂರು ನೀಡಿದ್ದಾರೆ.

ಇದನ್ನೂ ಓದಿ : ಯಶವಂತಪುರ ಫ್ಲೈಓವರ್ ಮೇಲೆ ಮತ್ತೊಂದು ಅಪಘಾತ – ಟಯರ್ ಬ್ಲಾಸ್ಟ್ ಆಗಿ ಬೊಲೆರೋ ವಾಹನ ಪಲ್ಟಿ..!

Leave a Comment

DG Ad

RELATED LATEST NEWS

Top Headlines

ಸಿ.ಟಿ ರವಿ ಬಂಧಿಸಿ ಫೇಕ್​ ಎನ್​ಕೌಂಟರ್​ ಮಾಡೋ ಉದ್ದೇಶವಿತ್ತು ಅನ್ನಿಸುತ್ತೆ – ಪ್ರಹ್ಲಾದ್‌ ಜೋಶಿ ಸ್ಪೋಟಕ ಹೇಳಿಕೆ..!

ಬಾಗಲಕೋಟೆ : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅಶ್ಲೀಲ ಪದ ಬಳಕೆ ಆರೋಪದಲ್ಲಿ ಬಂಧಿತರಾಗಿದ್ದ ಪರಿಷತ್ ಸದಸ್ಯ ಸಿ.ಟಿ ರವಿ ಅವರು ಜಾಮೀನು ಪಡೆದು ಹೊರ ಬಂದಬಳಿಕ

Live Cricket

Add Your Heading Text Here