Download Our App

Follow us

Home » ರಾಷ್ಟ್ರೀಯ » ಒಮಾನ್‌ ಕರಾವಳಿಯಲ್ಲಿ ತೈಲ ತುಂಬಿದ್ದ ಹಡಗು ಮುಳುಗಡೆ – 13 ಭಾರತೀಯ ಸಿಬ್ಬಂದಿ ನಾಪತ್ತೆ..!

ಒಮಾನ್‌ ಕರಾವಳಿಯಲ್ಲಿ ತೈಲ ತುಂಬಿದ್ದ ಹಡಗು ಮುಳುಗಡೆ – 13 ಭಾರತೀಯ ಸಿಬ್ಬಂದಿ ನಾಪತ್ತೆ..!

ಒಮಾನ್‌ : ಒಮಾನ್‌ನ ಕರಾವಳಿಯಲ್ಲಿ ತೈಲ ತುಂಬಿದ್ದ ಹಡಗು ಮುಳುಗಡೆಯಾಗಿದ್ದು, ಹಡಗಿನಲ್ಲಿದ್ದ 13 ಭಾರತೀಯ ಸಿಬ್ಬಂದಿ ಸೇರಿದಂತೆ 16 ಮಂದಿ ನಾಪತ್ತೆಯಾಗಿದ್ದಾರೆ ಎಂದು ದೇಶದ ಸಾಗರ ಭದ್ರತಾ ಕೇಂದ್ರ ಪ್ರಕಟಿಸಿದೆ.‌

ಕೊಮೊರೊಸ್ ಧ್ವಜ ಹೊಂದಿದ್ದ “ಪ್ರೆಸ್ಟೀಜ್ ಫಾಲ್ಕನ್” ಹೆಸರಿನ ಹಡಗು ದುಬೈನ ಹಮ್ರಿಯಾದಿಂದ ಹೊರಟು ಯೆಮೆನ್ ಬಂದರು ನಗರವಾದ ಏಡೆನ್‌ಗೆ ತೆರಳುತ್ತಿತ್ತು. ಈ ಹಡಗಿನಲ್ಲಿ 13 ಭಾರತೀಯ ಮತ್ತು ಶ್ರೀಲಂಕಾದ ಮೂವರು ಸಿಬ್ಬಂದಿಗಳಿದ್ದರು.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಯೆಮೆನ್ ಬಂದರಿನಿಂದ 25 ನಾಟಿಕಲ್‌ ಮೈಲ್‌ ದೂರದಲ್ಲಿ ಹಡಗು ಮುಳುಗಡೆಯಾಗಿದೆ. ಹಡಗಿನಿಂದ ತೈಲ ಉತ್ಪನ್ನಗಳು ಸೋರಿಕೆಯಾಗುತ್ತಿವೆಯೇ ಎನ್ನುವುದು ಸ್ಪಷ್ಟವಾಗಿ ತಿಳಿದಿಲ್ಲ. ಸದ್ಯ ನಾಪತ್ತೆಯಾಗಿರುವ ಸಿಬ್ಬಂದಿ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ.  ಪ್ರೆಸ್ಟೀಜ್ ಫಾಲ್ಕನ್ ಹೆಸರಿನ ಈ ಹಡಗು 117 ಮೀಟರ್ ಉದ್ದವಾಗಿದ್ದು, 2007ರಲ್ಲಿ ಈ ತೈಲ ಹಡಗನ್ನು ನಿರ್ಮಿಸಲಾಗಿತ್ತು.

ಇದನ್ನೂ ಓದಿ : ಕೊಲೆ ಪ್ರಕರಣದಲ್ಲಿ 20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಸ್ಯಾಂಡಲ್​ವುಡ್ ನಿರ್ದೇಶಕ ಅರೆಸ್ಟ್..​!

Leave a Comment

DG Ad

RELATED LATEST NEWS

Top Headlines

56ನೇ ವಸಂತಕ್ಕೆ ಕಾಲಿಟ್ಟ ಸ್ಯಾಂಡಲ್‌ವುಡ್‌ನ ರಿಯಲ್​​ ಸ್ಟಾರ್.. ಉಪ್ಪಿ ಮನೆ ಮುಂದೆ ಅಭಿಮಾನಿಗಳ ಸಂಭ್ರಮಾಚರಣೆ..!

ಸ್ಯಾಂಡಲ್‌ವುಡ್‌ನ ರಿಯಲ್​​ ಸ್ಟಾರ್ ಉಪೇಂದ್ರ ಅವರಿಗೆ ಇಂದು ಜನ್ಮದಿನದ ಸಂಭ್ರಮ. ಮಧ್ಯರಾತ್ರಿಯಿಂದಲೇ ಅಭಿಮಾನಿಗಳು ಕತ್ರಿಗುಪ್ಪೆಯ ಉಪ್ಪಿ ನಿವಾಸದ ಎದುರು ಜಮಾಯಿಸಿ, ಕೇಕ್ ಕತ್ತರಿಸಿ ನೆಚ್ಚಿನ ನಟನಿಗೆ ಶುಭಾಶಯ

Live Cricket

Add Your Heading Text Here