ಸ್ಯಾಂಡಲ್‌ವುಡ್‌ನ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಇಂದು ಜನ್ಮದಿನದ ಸಂಭ್ರಮ. ಮಧ್ಯರಾತ್ರಿಯಿಂದಲೇ ಅಭಿಮಾನಿಗಳು ಕತ್ರಿಗುಪ್ಪೆಯ ಉಪ್ಪಿ ನಿವಾಸದ ಎದುರು ಜಮಾಯಿಸಿ, ಕೇಕ್ ಕತ್ತರಿಸಿ ನೆಚ್ಚಿನ ನಟನಿಗೆ ಶುಭಾಶಯ ತಿಳಿಸಿದ್ದಾರೆ.
ಈಗಿನ ತಲೆ ಮಾರಿಗೆ ಉಪೇಂದ್ರ ಎಂದರೆ ಒಬ್ಬ ಆಕ್ಷನ್ ಹೀರೋ ಆದರೆ 90ರ ದಶಕದವರಿಗೆ ಅಥವಾ ನಿಜ ಸಿನಿಮಾ ಪ್ರೇಮಿಗಳಿಗೆ ಗೊತ್ತು ಉಪೇಂದ್ರರ ತಾಕತ್ತು. ಕತೆಯಲ್ಲಿ ಭಿನ್ನತೆ ಎಂಬುದನ್ನು ನಿಜವಾಗಿಯೂ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಪರಿಚಯಿಸಿದ್ದು ನಿರ್ದೇಶಕ ಉಪೇಂದ್ರ. ಸಿನಿಮಾದ ಕತೆ, ಪಾತ್ರ ಪೋಷಣೆಗಳಲ್ಲಿ ಮಾತ್ರವಲ್ಲ ಸಿನಿಮಾದ ಹೆಸರಿನಲ್ಲಿಯೂ ರಿಯಲ್ ಸ್ಟಾರ್ ಪ್ರಯೋಗಗಳನ್ನು ಮಾಡಿದ್ದಾರೆ.
ರಿಯಲ್ ಸ್ಟಾರ್ ಹುಟ್ಟುಹಬ್ಬಕ್ಕೆ ಅಭಿಮಾನಿಯೊಬ್ಬರು ಸ್ಪೆಷಲ್ ಗಿಫ್ಟ್ ಕೊಟ್ಟಿದ್ದಾರೆ. ಇದೇ ಅಭಿಮಾನಿ ಕಳೆದ ವರ್ಷ 6 ಗ್ರಾಂ ಉಂಗುರ ಗಿಫ್ಟ್ ತಂದಿದ್ದರು. ಆದ್ರೆ ಅಭಿಮಾನಿಯ ಗೋಲ್ಡ್ ರಿಂಗ್ ತೆಗೆದುಕೊಳ್ಳಲು ಉಪ್ಪಿ ನಿರಾಕರಿಸಿದ್ದರು. ಈ ಬಾರಿ ಸ್ಪೆಷಲ್ ಗಿಫ್ಟ್ ಕೊಡಲು ಪ್ಲಾನ್ ಮಾಡಿದ ಅಭಿಮಾನಿ 10 ಸಿನಿಮಾಗಳ ಹೆಸರನ್ನ ತಮ್ಮ ಬೈಕ್ ಮೇಲೆ ಸ್ಟಿಕ್ಕರಿಂಗ್ ಮಾಡಿಸಿದ್ದಲ್ಲದೇ, ಉಪ್ಪಿ ಅಭಿನಯದ UI ಸಿನಿಮಾ ಹೆಸರನ್ನ ಡಾಲರ್ ಮಾಡಿಸಿ ತಂದಿದ್ದಾರೆ.
ಇನ್ನು ನಟ ಉಪೇಂದ್ರ ಅವರು 10.30 ಕ್ಕೆ ಕತ್ರಿಗುಪ್ಪೆಯಲ್ಲಿರುವ ತಮ್ಮ ನಿವಾಸದಲ್ಲಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳಲಿದ್ದಾರೆ. ಇದರೊಂದಿಗೆ ‘UI’ ಚಿತ್ರದ ಪತ್ರಿಕಾಗೋಷ್ಠಿಯನ್ನೂ ಕೂಡ ಆಯೋಜಿಸಲಾಗಿದೆ. ಈ ಮೂಲಕ ಅಭಿಮಾನಿಗಳಿಗೆ ‘ಯುಐ’ ಸಿನಿಮಾದ ಬಿಗ್ ಅಪ್ಡೇಟ್ ಸಿಗುವುದಂತೂ ಪಕ್ಕ.
ಇದನ್ನೂ ಓದಿ : ದಶಕಗಳ ಬಳಿಕ ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಚುನಾವಣೆ – 24 ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ..!