Download Our App

Follow us

Home » ಅಪರಾಧ » ಚಿಕ್ಕಬಳ್ಳಾಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ – ಉದ್ಯಮಿಗಳನ್ನ ಕಿಡ್ನಾಪ್ ಮಾಡಿದ್ದ ನಟೋರಿಯಸ್ ಗ್ಯಾಂಗ್ ಅರೆಸ್ಟ್..!

ಚಿಕ್ಕಬಳ್ಳಾಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ – ಉದ್ಯಮಿಗಳನ್ನ ಕಿಡ್ನಾಪ್ ಮಾಡಿದ್ದ ನಟೋರಿಯಸ್ ಗ್ಯಾಂಗ್ ಅರೆಸ್ಟ್..!

ಚಿಕ್ಕಬಳ್ಳಾಪುರ : ಉದ್ಯಮಿಗಳನ್ನು ಕಿಡ್ನಾಪ್ ಮಾಡಿದ್ದ ಪ್ರಕರಣ ಸಂಬಂಧ ಚಿಕ್ಕಬಳ್ಳಾಪುರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಇದೀಗ ಕಿಡ್ನಾಪ್ ಮಾಡಿದ್ದ ನಟೋರಿಯಸ್ ಕಿಡ್ನಾಪರ್ಸ್​ನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

80 ಲಕ್ಷ ವಸೂಲಿ ಮಾಡಿದ್ದ ಕುಖ್ಯಾತ ಕಿಡ್ನಾಪರ್ಸ್​ನ್ನು ಚಿಕ್ಕಬಳ್ಳಾಪುರ ಪೊಲೀಸರು ಎಡೆಮುರಿ ಕಟ್ಟಿದ್ದಾರೆ. ನಟೋರಿಯಸ್ ಕಿಡ್ನಾಪರ್ ಲೋಹಿತ್ ಅಲಿಯಾಸ್ ರೋಹಿತ್ ಗ್ಯಾಂಗ್​​ನ ಪ್ರವೀಣ್ ಅಲಿಯಾಸ್ ನೇಪಾಳಿ, ಸಂತೋಷ್, ವೆಂಕಟೇಶ್, ಭರತ್ ಕುಮಾರ್ ನಾಯಕ್, ಮಾರುತಿ ಪ್ರಸನ್ನ ಹಾಗೂ ಚಿಕ್ಕಬಳ್ಳಾಪುರ ನಗರದ ಬರ್ಕತ್ ವುಲ್ಲಾ ಬಂಧಿತರು. ಬಂಧಿತರಿಂದ 41 ಲಕ್ಷ ನಗದು, ಚಿನ್ನದ ಚೈನ್ ಹಾಗೂ ಕೃತ್ಯಕ್ಕೆ ಬಳಸಿದ ಕಾರುಗಳು, ಮೊಬೈಲ್​​ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತರ ಮೇಲೆ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಕೊಲೆ, ಸುಳಿಗೆ, ದರೋಡೆ ಪ್ರಕರಣಗಳು ದಾಖಲಾಗಿದೆ. ಮಾಜಿ ಸಚಿವ ಹೆಚ್.ಡಿ ರೇವಣ್ಣ ಆಪ್ತ ಅಶ್ವಥ್ ಕಿಡ್ನಾಪ್ ಪ್ರಕರಣದಲ್ಲೂ ಈ ತಂಡ ಭಾಗಿಯಾಗಿತ್ತು. ಚಿಕ್ಕಬಳ್ಳಾಪುರ ನಗರದ ಕಾಂಗ್ರೆಸ್ ಮುಖಂಡ ಸಮೀವುಲ್ಲಾ ಅಲಿಯಾಸ್ ಸಮ್ಮು ಎಂಬಾತನನ್ನ ಕಿಡ್ನಾಪ್ ಮಾಡಿ 18 ಲಕ್ಷ ವಸೂಲಿ ಮಾಡಿದ್ದರು. ಕುಡುವತಿ ಗ್ರಾಮದ ರಿಯಲ್ ಎಸ್ಟೇಟ್ ಉದ್ಯಮಿ ನವೀನ್​​ ಅವರನ್ನು ಈ ಗ್ಯಾಂಗ್ ಕಿಡ್ನಾಪ್ ಮಾಡಿ 60 ಲಕ್ಷ ವಸೂಲಿ ಮಾಡಿತ್ತು.

ಈ ಕೇಸ್ ಸಂಬಂಧ ಚಿಕ್ಕಬಳ್ಳಾಪುರ ಸೆನ್ ಡಿವೈಎಸ್ಪಿ ರವಿಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಸಿನಿಮೀಯ ಶೈಲಿಯಲ್ಲಿ ಕಿಡ್ನಾಪರ್ಸ್​ನ್ನು ಅರೆಸ್ಟ್ ಮಾಡಲಾಗಿದೆ. ಗ್ಯಾಂಗ್​​ನ ಮುಖ್ಯಸ್ಥ ಲೋಹಿತ್ ಆಲಿಯಾಸ್ ರೋಹಿತ್ ಈ ಹಿಂದೆ ಮಾಜಿ ಸಚಿವ ವರ್ತೂರು ಪ್ರಕಾಶ್ ಮೇಲೆ ಆಟ್ಯಾಕ್ ಮಾಡಿ ಹಣ ದರೋಡೆ ಮಾಡಿದ್ದ ಪ್ರಕರಣದ ಪ್ರಮುಖ ರೂವಾರಿ.

ಇದನ್ನೂ ಓದಿ : ಕಾಪಿರೈಟ್ ಉಲ್ಲಂಘನೆ ಆರೋಪ – ಪೊಲೀಸರ ಮುಂದೆ ವಿಚಾರಣೆಗೆ ಹಾಜರಾದ ನಟ ರಕ್ಷಿತ್​ ಶೆಟ್ಟಿ..!

Leave a Comment

DG Ad

RELATED LATEST NEWS

Top Headlines

ತೆರೆಮೇಲೆ ಅಬ್ಬರಿಸಿದ “ಬಘೀರ” – ಸೂಪರ್ ಹೀರೋ ಆದ ರೋರಿಂಗ್ ಸ್ಟಾರ್ ಶ್ರೀಮುರಳಿ..!

ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಬಘೀರ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಹೊಂಬಾಳೆ ಫಿಲಂಸ್‌ ಬ್ಯಾನರ್‌ನಲ್ಲಿ ಮೂಡಿಬಂದ ಈ ಚಿತ್ರಕ್ಕೆ ಡಾ. ಸೂರಿ ನಿರ್ದೇಶನ ಮಾಡಿದ್ದಾರೆ.

Live Cricket

Add Your Heading Text Here