Download Our App

Follow us

Home » ರಾಜ್ಯ » ತಹಶೀಲ್ದಾರ್ ನಿರ್ಲಕ್ಷ್ಯದಿಂದ ತಪ್ಪು ನಡೆದಿದೆ.. ಹಿರೇಮಗಳೂರು ಕಣ್ಣನ್​​ಗೆ ನೀಡಿರುವ ನೋಟಿಸ್ ಹಿಂಪಡೆಯಲು ಸೂಚಿಸಿದ್ದೇನೆ : ಸಚಿವ ರಾಮಲಿಂಗಾರೆಡ್ಡಿ..!

ತಹಶೀಲ್ದಾರ್ ನಿರ್ಲಕ್ಷ್ಯದಿಂದ ತಪ್ಪು ನಡೆದಿದೆ.. ಹಿರೇಮಗಳೂರು ಕಣ್ಣನ್​​ಗೆ ನೀಡಿರುವ ನೋಟಿಸ್ ಹಿಂಪಡೆಯಲು ಸೂಚಿಸಿದ್ದೇನೆ : ಸಚಿವ ರಾಮಲಿಂಗಾರೆಡ್ಡಿ..!

ಬೆಂಗಳೂರು : ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್​​ಗೆ ಸಂಬಳ ವಾಪಸ್ ಕೇಳಿ ನೋಟಿಸ್ ನೀಡಿರುವ ವಿಚಾರದಲ್ಲಿ ತಹಶೀಲ್ದಾರ್ ತಪ್ಪಿದೆ ಹೊರತು ಹಿರೇಮಗಳೂರು ಕಣ್ಣನ್ ತಪ್ಪಿಲ್ಲ ಎಂದು ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.
 
ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್​​ಗೆ ನೋಟಿಸ್ ನೀಡಿರುವ​ ವಿಚಾರದ ಕುರಿತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಯವರು ಪ್ರತಿಕ್ರಿಯಿಸಿ, ತಹಶೀಲ್ದಾರ್ ನಿರ್ಲಕ್ಷ್ಯದಿಂದ ಇಂತಹ ತಪ್ಪು ನಡೆದಿದೆ. ಬೇರೆ ಅರ್ಚಕರು, ದೇವಾಲಯದವರು ಆತಂಕ ಪಡೋದು ಬೇಡ. ಕಣ್ಣನ್​ ಅವರಿಂದ ಹಣ ವಾಪಸ್ ಕೇಳುವುದಿಲ್ಲ. ತಹಶೀಲ್ದಾರ್​ಗೆ ನೋಟಿಸ್ ಹಿಂಪಡೆಯಲು ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.

ಎಲ್ಲಾ ದೇವಾಲಗಳಿಗೆ ಸರ್ಕಾರದಿಂದ ಈ ರೀತಿ ವೇತನ ನೀಡುತ್ತೇವೆ. ಅಲ್ಲಿ ವೇತನ ನೀಡುವ ವೇಳೆ ಹೆಚ್ಚು ಕಮ್ಮಿ ಆಗಿದೆ. 27 ಸಾವಿರದ ಬದಲು ತಹಶಿಲ್ದಾರ್ 90 ಸಾವಿರ ನೀಡಿದ್ರು. ಅದು ಮನವರಿಗೆ ಆದ ಬಳಿಕ ವಾಪಸ್ ಕೇಳಿದ್ದಾರೆ. ಅದ್ರೆ ಸರ್ಕಾರದಿಂದ ಬಂದ ಹಣ ಅಂತಾ ಕಣ್ಣನ್ ಖರ್ಚು ಮಾಡಿದ್ದಾರೆ. ಇದು ಮೊದಲ ಬಾರಿ ಈ ರೀತಿ ಆಗಿರೋದು. ಇದರ ಬಗ್ಗೆ ಮುಜರಾಯಿ ಇಲಾಖೆ ಆಯುಕ್ತರಿಗೆ ತಿಳಿಸಿದ್ದೇನೆ. ತಹಶಿಲ್ದಾರ್ ಗೆ ಪತ್ರ ನೀಡಲು ಸೂಚಿಸಿದ್ದೇನೆ. ಅವರೇ ಆ ಹಣವನ್ನು ಸರ್ಕಾರಕ್ಕೆ ಕಟ್ಟಿ ಕೊಡಬೇಕು. ಅವರಿಗೆ ನೀಡುವ ಶಿಕ್ಷೆಯ ಬಗ್ಗೆ ಆಯುಕ್ತರು ತೀರ್ಮಾನಿಸುತ್ತಾರೆ ಎಂದು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಆದಾಯ ಕಡಿಮೆಯ ಕಾರಣ ನೀಡಿ ವೇತನ ವಾಪಸ್ ಕೇಳಿದ್ದ ಸರ್ಕಾರ – ಹಿರೇಮಗಳೂರು ಕಣ್ಣನ್ ಅವರು ಕಳೆದ 44 ವರ್ಷಗಳಿಂದ ಕಲ್ಯಾಣ ಕೋದಂಡ ರಾಮ ದೇವಾಲಯದ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ರಾಜ್ಯ ಸರ್ಕಾರ ಪ್ರತಿ ತಿಂಗಳು 7500 ರೂ. ವೇತನ ನೀಡುತ್ತಿತ್ತು. ಆದರೆ, ಇದೀಗ ದೇವಾಲಯದ ಆದಾಯ ಕಡಿಮೆ‌ ಇದೆ ಎಂಬ ಕಾರಣ ನೀಡಿ ಈ ಹಿಂದೆ ನೀಡಿದ್ದ 7500 ರೂ. ವೇತನದಲ್ಲಿ 4500 ರೂ. ಅನ್ನು ವಾಪಸ್ ನೀಡುವಂತೆ ಸೂಚಿಸಲಾಗಿತ್ತು.

4500 ರೂಪಾಯಿಯಂತೆ 10 ವರ್ಷದ 4,74,000 ರೂ. ಹಣವನ್ನು ವಾಪಸ್ ನೀಡುವಂತೆ ನೋಟಿಸ್​ನಲ್ಲಿ ಉಲ್ಲೇಖಿಸಲಾಗಿತ್ತು. ಜತೆಗೆ, ಡಿಸೆಂಬರ್ ತಿಂಗಳ ವೇತನವನ್ನು ತಡೆ ಹಿಡಿದು 2023ರ ಡಿಸೆಂಬರ್​ 2ರಂದು ತಹಶಿಲ್ದಾರ್ ಸುಮಂತ್ ನೋಟಿಸ್​ ನೀಡಿದ್ದರು. ಆದಾಯ ಕಡಿಮೆಯ ಕಾರಣ ನೀಡಿ ವೇತನ ವಾಪಸ್ ಕೇಳಿದ್ದ ಸರ್ಕಾರ

ಇದನ್ನೂ ಓದಿ : ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಪ್ರಕರಣ : 5 ಕೋಟಿ ರೂ. ವ್ಯಾಜ್ಯ ಶುಲ್ಕವಾಗಿ ಕರ್ನಾಟಕಕ್ಕೆ ಪಾವತಿಸಲು ಆದೇಶ..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here