ರಾಮನಗರ : ರಾಮನಗರ ಹೆಸರು ಬದಲಾವಣೆ ಸಾಹಸಕ್ಕೆ ಕೈಹಾಕ್ಬೇಡಿ, ರಾಮನಗರ ಹೆಸರು ಬದಲಿಸುವ ಸಾಹಸಕ್ಕೆ ಕೈಹಾಕಿದ್ರೆ ಸರಿಯಿರಲ್ಲ. ರಾಮನಗರ ಅಸ್ಮಿತೆ ಉಳಿಸಲು ತೀವ್ರ ಹೋರಾಟ ಮಾಡ್ತೇವೆ ಎಂದು ಕಾಂಗ್ರೆಸ್ ನಾಯಕರಿಗೆ ನಿಖಿಲ್ ಕುಮಾರಸ್ವಾಮಿ ವಾರ್ನಿಂಗ್ ಕೊಟ್ಟಿದ್ದಾರೆ.
ಈ ಬಗ್ಗೆ ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ರಾಮನಗರ ಹೆಸರು ಬದಲಿಸಿದ್ರೆ ದೊಡ್ಡ ಮಟ್ಟದ ಹೋರಾಟ ಆಗುತ್ತೆ. ನಾಲ್ಕು ತಾಲೂಕು ಸೇರಿಸಿದ ತಕ್ಷಣ ಬಹಳ ಅನುಕೂಲ ಆಗುತ್ತಾ..? ಆಧಾರ್ ಕಾರ್ಡ್, ಗ್ಯಾಸ್ ಬಿಲ್, ರೆವೆನ್ಯೂ ರೆಕಾರ್ಡ್ ಬದಲಾಗ್ಬೇಕು. ಜನರಿಗೆ ಪರದಾಟ ಆಗುತ್ತೇ ಹೊರತೂ ಇನ್ನೇನೂ ಬದಲಾವಣೆ ಆಗಲ್ಲ, HDD, HDK ಶ್ರಮದಿಂದಾಗಿ ರಾಮನಗರ ಅಭಿವೃದ್ಧಿ ಆಗಿದೆ ಎಂದಿದ್ದಾರೆ.
ರಿಯಲ್ ಎಸ್ಟೇಟ್ ದಂಧೆಕೋರರಿಗೆ ಬಿಟ್ರೆ ಬೇರೆ ಯಾರಿಗೂ ಅನುಕೂಲ ಆಗಲ್ಲ, ಬೆಂಗಳೂರು ದಕ್ಷಿಣ ಅಂತಾ ಹೆಸರು ಬದಲಿಸಿದ್ರೆ ಪಕ್ಷಾತೀತ ಹೋರಾಟ ಮಾಡ್ತೇವೆ ಎಂದು ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ : ಡಿಸಿಎಂ ಡಿಕೆ ಶಿವಕುಮಾರ್ನ್ನು ಭೇಟಿ ಮಾಡಿದ ಸ್ವಿಗ್ಗಿ ಮಾಲೀಕ..!