ಬೆಂಗಳೂರು: 2025ರ ಹೊಸ ವರ್ಷಾಚರಣೆಗೆ ಕೆಲವೇ ದಿನಗಳಷ್ಟೇ ಬಾಕಿಯಿದ್ದು ಎಲ್ಲೆಲ್ಲೂ ನ್ಯೂ ಇಯರ್ ಸಂಭ್ರಮಕ್ಕೆ ಅದ್ಧೂರಿ ತಯಾರಿ ನಡೆಯುತ್ತಿದೆ. 2024ಕ್ಕೆ ಗುಡ್ ಬೈ ಹೇಳಿ 2025ರ ಸಂಭ್ರಮಕ್ಕೆ ಎಲ್ಲರೂ ಕಾತರರಾಗಿದ್ದಾರೆ. ಈ ಬಾರಿ ಸಿಲಿಕಾನ್ ಸಿಟಿಯಲ್ಲಂತೂ ನ್ಯೂ ಇಯರ್ ಜೋಶ್ ಮಾತ್ರ ಸಖತ್ ಕಿಕ್ ಏರಿಸಲಿದೆ. ಇಂತಹ ಹೊಸವರ್ಷದ ಸಂಭ್ರಮದ ನಡುವೆ ಯಾವುದೇ ಅವಘಡ ಸಂಭವಿಸಿದಂತೆ ಬಿಗಿ ಭದ್ರತೆ ಮಾಡಲಾಗ್ತಿದೆ.
ಬೆಂಗಳೂರಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಿದಂತೆ ಪೊಲೀಸರು ಆಯಾ ಭಾಗದಲ್ಲಿ ಕಟ್ಟುನಿಟ್ಟಿನ ಕ್ರಮಗಳೊಂದಿಗೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ ಅಂತ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮಾಹಿತಿ ನೀಡಿದ್ದಾರೆ. ಇಂದಿರಾನಗರ, ಕೋರಮಂಗಲ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ವಹಿಸಲಾಗಿದೆ. ಅತಿಹೆಚ್ಚು ಜನ ಸೇರುವ ಎಮ್.ಜಿ ರಸ್ತೆ, ಬಿಗ್ರೇಡ್ ರಸ್ತೆಯಲ್ಲಿ ಹೆಚ್ಚಿನ ಭದ್ರತೆ, ಮಹಿಳೆಯರಿಗೆ ಮಹಿಳಾ ಸೇಫ್ಟಿ, ಹೈ ಲ್ಯಾಂಡ್, ವಾಚ್ ಟವರ್, ಶ್ವಾನ ದಳ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಅಲ್ಲದೇ ಡ್ರೋನ್ ಕ್ಯಾಮೆರಾಗಳು ನಿಯೋಜಿಸಲಾಗಿದ್ದು, ಹೆಚ್ಚಿನ ಸಂಖ್ಯೆಯ ಸಿಸಿಟಿವಿ ಕ್ಯಾಮೆರಾಗಳನ್ನೂ ಅಳವಡಿಸಲಾಗಿದೆ. ಬ್ರಿಗೇಡ್ ರೋಡ್‌ಗೆ ಕಾವೇರಿ ಎಪೋರಿಯಂನಿಂದ ಮಾತ್ರ ಎಂಟ್ರಿ ಇರಲಿದೆ. ಜೊತೆಗೆ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರ ಜೊತೆ ಸಭೆ ಮಾಡಿದ್ದು, ಮಧ್ಯರಾತ್ರಿ 1 ಗಂಟೆ ತನಕ ಹೊಸ ವರ್ಷ ಆಚರಣೆಗೆ ಸಮಯ ನಿಗದಿ ಮಾಡಲಾಗಿದೆ.
ಇನ್ನೂ ನಗರದ ಹೊರವಲಯದ ರೇವ್ ಪಾರ್ಟಿಗಳ ಮೇಲೂ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಅನಧಿಕೃತ ವಾಗಿ ಪಾರ್ಟಿ ಆಯೋಜನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಓಲಾ, ಉಬರ್ ಸಂಸ್ಥೆಗಳೊಂದಿಗೆ ಸಭೆ ನಡೆಸಿ ಅವರಿಗೂ ಡ್ರಾಪ್, ಪಿಕಪ್ ಪಾಯಿಂಟ್‌ಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಇದರ ಮಧ್ಯೆ ಹೆಚ್ಚಿನ ಹಣ ಕೇಳುವ ಓಲಾ, ಉಬರ್ ಮೇಲೆ ಕ್ರಮ ಕೈಗೊಳ್ಳಲಾಗುತ್ತೆ.
ನ್ಯೂ ಇಯರ್ ಸಂಭ್ರಮದಲ್ಲಿ ಯಾರೂ ಕೂಡ ಕುಡಿದು ವಾಹನಗಳನ್ನ ಚಲಾಯಿಸಬಾರದು ಅಂತ ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಕುಡಿದು ವಾಹನ ಚಲಾಯಿಸಿದ್ರೆ, ಮುಲಾಜಿಲ್ಲದೇ ವಾಹನ ಪರವಾನಗಿ ರದ್ದುಗೊಳಿಸಲಾಗುತ್ತದೆ ಎಂದೂ ಎಚ್ಚರಿಕೆ ನೀಡಿದ್ದಾರೆ.
ಹೊಸ ವರ್ಷದಂದು ಕೆಲ ಮಾರ್ಗಗಳ ಬದಲಾವಣೆ : – ಹೊಸವರ್ಷದ ದಿನ ಟ್ರಾಫಿಕ್ ನಿಯಂತ್ರಣಕ್ಕಾಗಿ ಕೆಲ ಮಾರ್ಗಗಳ ಬದಲಾವಣೆ ಕೂಡ ಮಾಡಲಾಗಿದೆ. ಎಮ್‌ಜಿ ರೋಡ್ ಬ್ರಿಗೆಡ್ ರೋಡ್ ಬಳಿ ಯಾವುದೇ ಪಾರ್ಕಿಂಗ್ ಇರೋದಿಲ್ಲ. ಎಮ್.ಜಿ ರಸ್ತೆ, ಬ್ರಿಗೇಡ್, ಇಂದಿರಾನಗರ, ಕೋರಮಂಗಲ ಬಳಿ ಪಾರ್ಕಿಂಗ್‌ಗೆ ಪ್ರತ್ಯೇಕವಾಗಿ ಸೂಚನೆ ನೀಡಲಾಗಿದೆ. ಎಲ್ಲಾ ರೀತಿಯ ಫ್ಲೈ ಓವರ್‌ಗಳು ಕ್ಲೋಸ್ ಇರಲಿವೆ. ನೋ ಪಾರ್ಕಿಂಗ್‌ಗಳಲ್ಲಿ ಪಾರ್ಕ್ ಮಾಡಿದ್ರೆ ಗಾಡಿಗಳನ್ನ ಟೋ ಮಾಡಲಾಗುತ್ತೆ. ಆ ದಿನ ರಾತ್ರಿಯಿಡೀ ಟೋಯಿಂಗ್ ವಾಹನಗಳು ಆಕ್ಟೀವ್ ಆಗಿ ಇರಲಿವೆ. ಅಲ್ಲಲ್ಲಿ ಡ್ರಾಪ್ ಪಿಕಪ್ ಬಗ್ಗೆ ಸೂಚನಾಫಲಕ ಹಾಕಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಆನ್‌ಲೈನ್ ಗೇಮ್ ಚಟಕ್ಕೆ ಲಕ್ಷ ಲಕ್ಷ ಸಾಲ – ರಾಜ್ಯದಲ್ಲಿ ಮತ್ತೊರ್ವ ಯುವಕ ಬಲಿ