ಬೆಂಗಳೂರು : ಬೆಂಗಳೂರಿನಲ್ಲಿ ರೈಲ್ವೆ ರಾಜ್ಯ ಸಚಿವ ಸೋಮಣ್ಣ ಅವರು ಮೊದಲ ಸಭೆ ಮಾಡಿದ್ದಾರೆ. ಮಹಾ ಸಂಕಲ್ಪದೊಂದಿಗೆ ಸಭೆ ಮಾಡಿದ ವಿ.ಸೋಮಣ್ಣ ಅವರು ರಾಜ್ಯದ ರೈಲ್ವೆ ಬಾಕಿ ಯೋಜನೆಗಳ ಜಾರಿಗೆ ತರಲು ಅಧಿಕಾರಿಗಳಿಗೆ ಸಭೆಯಲ್ಲೇ ಟಾರ್ಗೆಟ್ ಕೊಟಿದ್ದಾರೆ.
ಸಭೆ ಬಳಿಕ ಈ ಬಗ್ಗೆ ಮಾತನಾಡಿದ ಕೇಂದ್ರ ರೈಲ್ವೆ ರಾಜ್ಯ ಸಚಿವ ಸೋಮಣ್ಣ ಅವರು, ಹೊಸ ರೈಲ್ವೆ ಅಂಡರ್ಪಾಸ್ಗಳ ಮೇಲೆ ಗಮನ ಹರಿಸುತ್ತೇವೆ. ಎಲ್ಲಾ ಅಂಡರ್ಪಾಸ್ ರೈಲ್ವೆ ಓವರ್ ಬ್ರಿಡ್ಜ್ ನಾವೇ ಮಾಡುತ್ತೆವೆ. ರೈಲ್ವೆ ಅಧಿಕಾರಿಗಳು ಸೈನಿಕರಂತೆ ಕೆಲಸ ಮಾಡ್ತಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು ಇನ್ನೆರಡು ವರ್ಷಗಳಲ್ಲಿ ಕರ್ನಾಟಕ ವಿಭಿನ್ನ ರೀತಿಯಲ್ಲಿ ರೈಲ್ವೆ ವಿಭಾಗದಲ್ಲಿ ಅಭಿವೃದ್ಧಿ ಹೊಂದಲಿದೆ. ಎರಡು ವರ್ಷದಲ್ಲಿ ರಾಜ್ಯದ ರೈಲ್ವೆಗೆ ಹೊಸ ರೂಪ ಕೊಡುವ ಗುರಿ ಹೊಂದಿದೆ ಎನ್ನುವ ಮೂಲಕ ರಾಜ್ಯ ರೈಲ್ವೆ ಯೋಜನೆಗಳ ಸ್ಥಿತಿ-ಗತಿ ಬಗ್ಗೆ ವಿ.ಸೋಮಣ್ಣ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಶೂಟಿಂಗ್ ಮುಗಿಸಿದ ‘ಒನ್ ಅಂಡ್ ಹಾಫ್’ ಚಿತ್ರ – ನಿರ್ಮಾಪಕ ಹುಟ್ಟುಹಬ್ಬಕ್ಕೆ ಸಾಂಗ್ ಗ್ಲಿಂಪ್ಸ್ ಉಡುಗೊರೆ..!