Download Our App

Follow us

Home » ಸಿನಿಮಾ » ಅದ್ದೂರಿಯಾಗಿ ಸೆಟ್ಟೇರಿತು ಜೂ.ಎನ್‌ಟಿಆರ್‌-ಪ್ರಶಾಂತ್‌ ನೀಲ್‌ ಕಾಂಬಿನೇಷನ್​​ನ ಹೊಸ ಸಿನಿಮಾ..!

ಅದ್ದೂರಿಯಾಗಿ ಸೆಟ್ಟೇರಿತು ಜೂ.ಎನ್‌ಟಿಆರ್‌-ಪ್ರಶಾಂತ್‌ ನೀಲ್‌ ಕಾಂಬಿನೇಷನ್​​ನ ಹೊಸ ಸಿನಿಮಾ..!

ಸ್ಟಾರ್​​​ ಡೈರೆಕ್ಟರ್ ಪ್ರಶಾಂತ್ ನೀಲ್ ಮತ್ತು ಜೂನಿಯರ್‌ ಎನ್​​ಟಿಆರ್ ಕಾಂಬಿನೇಷನ್‌ನ ಹೊಸ ಸಿನಿಮಾದ ಮುಹೂರ್ತ ಹೈದರಾಬಾದ್‌ನಲ್ಲಿ ಸರಳವಾಗಿ ಜರುಗಿದೆ. ಇದೇ ವೇಳೆ ಚಿತ್ರ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್‌ ಈ ಸಿನಿಮಾವನ್ನು 2026ರ ಜನವರಿ 9ರಂದು ರಿಲೀಸ್ ಮಾಡೋದಾಗಿ ಘೋಷಿಸಿದೆ.

ಯಾವುದೇ ಪೂರ್ವ ಮಾಹಿತಿ ಇಲ್ಲದೆ ಸರಳವಾಗಿ ಈ ಸಿನಿಮಾದ ಮುಹೂರ್ತ ಸಮಾರಂಭವನ್ನು ನಡೆಸಲಾಯಿತು. ಎನ್‌ಟಿಆರ್ ಮತ್ತು ಪ್ರಶಾಂತ್ ನೀಲ್ ಚಿತ್ರದ ಉದ್ಘಾಟನಾ ಕಾರ್ಯಕ್ರಮದ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. ಎನ್‌ಟಿಆರ್ ಮತ್ತು ಪ್ರಶಾಂತ್ ನೀಲ್ ಜೊತೆಗೆ ಕಲ್ಯಾಣ್ ರಾಮ್ ಮತ್ತು ಚಿತ್ರದ ನಿರ್ಮಾಪಕರು ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

ಈಗಾಗಲೇ ಎನ್‌ಟಿಆರ್‌ ಮತ್ತು ನೀಲ್‌ ಜೋಡಿಯ ಸಿನಿಮಾ ಘೋಷಣೆ ಆಗಿಯೇ ವರ್ಷಗಳು ಕಳೆದಿವೆ. ಆದರೆ, ಮುಂದುವರಿದು ಯಾವುದೇ ಅಪ್ಡೇಟ್‌ ಹೊರಬಂದಿರಲಿಲ್ಲ. ಇದೀಗ ಎನ್‌ಟಿಆರ್‌ ಮತ್ತು ನೀಲ್‌ ಕಾಂಬಿನೇಷನ್‌ ಸಿನಿಮಾ ಸೆಟ್ಟೇರಿದೆ. ಈ ಸುದ್ದಿ ತಿಳಿದ ಅವರ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಮುಹೂರ್ತ ಮಾತ್ರವಲ್ಲದೆ, ಈ ಬಿಗ್ ಬಜೆಟ್ ಸಿನಿಮಾ 2026ರ ಸಂಕ್ರಾಂತಿಗೆ ಈ ಸಿನಿಮಾ ತೆರೆಗೆ ಅಪ್ಪಳಿಸಲಿದೆ. ಮೂಲ ತೆಲುಗು ಜತೆಗೆ, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂನಲ್ಲಿ ಚಿತ್ರಮಂದಿರಕ್ಕೆ ಲಗ್ಗೆ ಇಡಲಿದೆ.

ಬ್ಲಾಕ್‌ಬಸ್ಟರ್ ಹಿಟ್‌ ಸಿನಿಮಾಗಳಿಂದಲೇ ಹೆಸರುವಾಸಿಯಾದ ಪ್ರಶಾಂತ್ ನೀಲ್, ಎನ್‌ಟಿಆರ್‌ ಜತೆಗಿನ ಈ ಸಿನಿಮಾಕ್ಕೆ ಇನ್ನಷ್ಟು ಶ್ರಮ ಹಾಕುತ್ತಿದ್ದಾರೆ. ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರವನ್ನು ಕಲ್ಯಾಣ್ ರಾಮ್ ನಂದಮೂರಿ, ನವೀನ್ ಯೆರ್ನೇನಿ, ರವಿಶಂಕರ್ ಯಲಮಂಚಿಲಿ ಮತ್ತು ಹರಿಕೃಷ್ಣ ಕೊಸರಾಜು ಅವರು ಮೈತ್ರಿ ಮೂವೀ ಮೇಕರ್ಸ್ ಮತ್ತು ಎನ್‌ಟಿಆರ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿದ್ದಾರೆ. ಕೆಜಿಎಫ್‌, ಸಲಾರ್‌ ಖ್ಯಾತಿಯ ಭುವನ್ ಗೌಡ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಲಿದ್ದು, ರವಿ ಬಸ್ರೂರ್ ಸಂಗೀತ ಸಂಯೋಜಿಸಲಿದ್ದಾರೆ. ಚಿತ್ರದ ಪಾತ್ರವರ್ಗ ಇನ್ನಷ್ಟೇ ಅಂತಿಮವಾಗಬೇಕಿದೆ. ಇನ್ನೇನು ಶೀಘ್ರದಲ್ಲಿ ಈ ಚಿತ್ರದ ಶೂಟಿಂಗ್‌ ಸಹ ಶುರುವಾಗಲಿದೆ.

ಇದನ್ನೂ ಓದಿ : ಬೆಂಗಳೂರಿನ ಲೀಲಾ ಪ್ಯಾಲೇಸ್‌ ಹೋಟೆಲ್‌-ರೆಸಾರ್ಟ್‌ಗಳ ಬ್ರಾಂಡ್‌ ಜೊತೆ ಕೈ ಜೋಡಿಸಿದ ರಿಕಿ ಕೇಜ್‌..!

Leave a Comment

DG Ad

RELATED LATEST NEWS

Top Headlines

MLA ಮುನಿರತ್ನ ವಿರುದ್ಧ ರೇಪ್ ಆರೋಪದ ಬೆನ್ನಲ್ಲೇ ಮಾಜಿ ಕಾರ್ಪೊರೇಟರ್ ಪತಿಯ ಹನಿಟ್ರ್ಯಾಪ್ ವಿಡಿಯೋ ವೈರಲ್..!

ಬೆಂಗಳೂರು : ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಬಿಜೆಪಿ ಶಾಸಕ ಮುನಿರತ್ನ ಸೇರಿ ಏಳು ಮಂದಿಯ ವಿರುದ್ಧ ರಾಮನಗರ ಜಿಲ್ಲಾ ವ್ಯಾಪ್ತಿಯ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ

Live Cricket

Add Your Heading Text Here