Download Our App

Follow us

Home » ರಾಷ್ಟ್ರೀಯ » ದೇಶದಲ್ಲಿ ಇಂದಿನಿಂದ ಮೂರು ಹೊಸ ಅಪರಾಧ ಕಾನೂನು ಜಾರಿಗೆ – ಏನೆಲ್ಲ ಬದಲಾವಣೆ? ಇಲ್ಲಿದೆ ಡೀಟೇಲ್ಸ್..!

ದೇಶದಲ್ಲಿ ಇಂದಿನಿಂದ ಮೂರು ಹೊಸ ಅಪರಾಧ ಕಾನೂನು ಜಾರಿಗೆ – ಏನೆಲ್ಲ ಬದಲಾವಣೆ? ಇಲ್ಲಿದೆ ಡೀಟೇಲ್ಸ್..!

ನವದೆಹಲಿ : ದೇಶದಲ್ಲಿ ಇಂದಿನಿಂದ ಮೂರು ಹೊಸ ಅಪರಾಧ ಕಾಯ್ದೆ ಜಾರಿಗೆ ಬರಲಿವೆ. ಬ್ರಿಟಿಷರ ಕಾಲದಿಂದ ಜಾರಿಯಲ್ಲಿದ್ದ ಐಪಿಸಿ, ಸಿಆರ್‌ಪಿಸಿ, ಇಂಡಿಯನ್ ಎವಿಡೆನ್ಸ್ ಆಕ್ಟ್‌ಗೆ ಗುಡ್‌ಬೈ ಹೇಳಲಾಗುತ್ತದೆ. ಕಾಲಮಿತಿಯೊಳಗೆ ತನಿಖೆ ಮತ್ತು ತ್ವರಿತ ನ್ಯಾಯ ಖಾತ್ರಿಪಡಿಸುವ ನಿಟ್ಟಿನಲ್ಲಿ ಈ ಪ್ರಮುಖ ಬದಲಾವಣೆ ಮಾಡಲಾಗಿದ್ದು, ಶಾಸನಗಳ ಮೂಲಕ ಡಿಜಿಟಲ್ ದಾಖಲೆಗಳನ್ನು ಪ್ರಾಥಮಿಕ ಪುರಾವೆಗಳಾಗಿಸುವಲ್ಲಿ ಪ್ರಮುಖ ಬದಲಾವಣೆ ತರಲಾಗಿದೆ.

ಹೇಗಿರುತ್ತೆ ಹೊಸ ಅಪರಾಧ ಕಾಯ್ದೆ?

  • – ಮೂರು ಭಾಗಗಳಾಗಿ ಭಾರತೀಯ ಅಧಿನಿಯ ವಿಂಗಡಣೆ
  • – ಒಟ್ಟು 11 ಅಧ್ಯಾಯಗಳಿರುವ ಅಧಿನಿಯಮ
  • – ಭಾರತೀಯ ದಂಡ ಸಂಹಿತೆ( IPC) ಬದಲಾವಣೆ
  • – ಅಪರಾಧ ಪ್ರಕ್ರಿಯಾ ಸಂಹಿತೆ (CRPC) ಬದಲಾವಣೆ
  • – ಸಾಕ್ಷ್ಯ ಕಾಯ್ದೆಗಳನ್ನು ರದ್ದು ಮಾಡಲಾಗಿದೆ
  • – IPC ಇನ್ನು ಮುಂದೆ ಭಾರತೀಯ ನ್ಯಾಯ ಸಂಹಿತೆ
  • – CRPC ಇನ್ನು ಮುಂದೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ
  • – ಭಾರತೀಯ ಸಾಕ್ಷ್ಯ ನಿಯಮ ಜಾರಿ ಮಾಡಲಾಗಿದೆ
  • -ಬ್ರಿಟಿಷರ ಕಾಲದಲ್ಲಿ ಶಿಕ್ಷೆಗೆ ಒತ್ತು ಈಗ ನ್ಯಾಯಕ್ಕೆ ಒತ್ತು
  • – ಶೂನ್ಯ FIR, ಆನ್​ಲೈನ್​​ನಲ್ಲಿ ಪೊಲೀಸರಿಗೆ ದೂರು
  • – SMS ಮೂಲಕ ಸಮನ್ಸ್​ ನೀಡುವ ಅವಕಾಶ
  • – ತನಿಖಾಧಿಕಾರಿ ಅಪರಾಧ ಸ್ಥಳದ ವಿಡಿಯೋ ಕಡ್ಡಾಯವಾಗಿ ಚಿತ್ರೀಕರಿಸಬೇಕು
  • – ವಿಚಾರಣೆ ಮುಗಿದ 45 ದಿನದಲ್ಲಿ ಕೋರ್ಟ್​ಗಳು ತೀರ್ಪು ನೀಡ್ಬೇಕು
  • – ಕೋರ್ಟ್​ನಲ್ಲಿ ವಿಚಾರಣೆ ಆದ ದಿನದಿಂದ 60 ದಿನದಲ್ಲಿ ಚಾರ್ಜ್​ಶೀಟ್ ಹಾಕ್ಬೇಕು
  • – ರೇಪ್​ ಕೇಸ್​ನಲ್ಲಿ ಸಂಬಂಧಿಕರ ಸಮ್ಮುಖದಲ್ಲಿ ಸಂತ್ರಸ್ತೆ ಹೇಳಿಕೆ ದಾಖಲಿಸಬೇಕು
  • – ಪೊಲೀಸರು ಬಂಧಿಸಿದಾಗ ಬಂಧಿತ ತನಗಿಷ್ಟವಾದ ವ್ಯಕ್ತಿಗೆ ಮಾಹಿತಿ ನೀಡಬಹುದು
  • – ಗ್ಯಾಂಗ್​ ರೇಪ್​, ಮಾಸ್ ಮರ್ಡರ್, ಸರಗಳವು ಕೇಸ್​ ದಾಖಲಿಸಲು ನಿರ್ದಿಷ್ಟ ಸೆಕ್ಷನ್​​
  • – ಈವರೆಗೆ ಇಂಥಾ ಕೃತ್ಯಗಳಲ್ಲಿ ನಿರ್ದಿಷ್ಟ ಸೆಕ್ಷನ್​​ ಇರಲಿಲ್ಲ

ಹಳೆ ಕಾನೂನು | ಹೊಸ ಕಾನೂನು :

  • ಭಾರತೀಯ ದಂಡ ಸಂಹಿತೆ (ಐಪಿಸಿ) – ಭಾರತೀಯ ನ್ಯಾಯ ಸಂಹಿತೆ(ಬಿಎನ್‌ಎಸ್‌)
  • ಕ್ರಿಮಿನಲ್‌ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) – ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023(ಬಿಎನ್‌ಎಸ್‌ಎಸ್‌)
  • ಭಾರತೀಯ ಸಾಕ್ಷ್ಯ ಕಾಯಿದೆU – ಭಾರತೀಯ ಸಾಕ್ಷಿ ಅಧಿನಿಯಮ(ಬಿಎಸ್‌ಎ)

ಇದನ್ನೂ ಓದಿ : ಬಳ್ಳಾರಿ : ದಲ್ಲಾಳಿಗಳ ಕಾಟಕ್ಕೆ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ರೈತರು..!

 

 

 

 

 

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here