Download Our App

Follow us

Home » ಸಿನಿಮಾ » ಪಾಪಗಳು ದೂರ ಆಗಬೇಕು ಅಂತ ಕೂದಲು ಕಟ್ ಮಾಡಿಸಿದ್ಯಾ? : ಸೋನು ಗೌಡರನ್ನು ಪ್ರಶ್ನಿಸಿದ ನೆಟ್ಟಿಗರು..!

ಪಾಪಗಳು ದೂರ ಆಗಬೇಕು ಅಂತ ಕೂದಲು ಕಟ್ ಮಾಡಿಸಿದ್ಯಾ? : ಸೋನು ಗೌಡರನ್ನು ಪ್ರಶ್ನಿಸಿದ ನೆಟ್ಟಿಗರು..!

ಟಿಕ್ ಟಾಕ್ ಮೂಲಕ ಸದ್ದು ಮಾಡಿ ಬಳಿಕ ಇನ್‌ಸ್ಟಾಗ್ರಾಮ್ ರೀಲ್ಸ್ ಮೂಲಕ ನಾಡಿಗೆ ಪರಿಚಯವಾದವರು ಸೋನು ಶ್ರೀನಿವಾಸ್‌ ಗೌಡ. ಬಳಿಕ ಬಿಗ್ ಬಾಸ್ ಒಟಿಟಿ ಮೂಲಕ ಮತ್ತಷ್ಟು ಜನರಿಗೆ ಹತ್ತಿರವಾಗಿದ್ದರು. ಇತ್ತೀಚೆಗೆ ಮಗುವೊಂದನ್ನು ದತ್ತು ಪಡೆದು ಕೇಸ್ ಹಾಕಿಸಿಕೊಂಡು ಪರಪ್ಪನ ಅಗ್ರಹಾರ ಜೈಲಿಗೂ ಹೋಗಿ ಬಂದಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್‌ ಗೌಡ ತುಂಬಾ ದಿನಗಳಿಂದ ಆಸೆ ಪಟ್ಟಂತೆ ಹೇರ್‌ ಸ್ಟೈಲ್ ಮಾಡಿಸಿಕೊಂಡಿದ್ದಾರೆ.

2024 ವರ್ಷವನ್ನು ಕಲರ್‌ಫುಲ್ ಮಾಡಬೇಕು ಎಂದು ಲಿಸ್ಟ್‌ ರೆಡಿ ಮಾಡಿಕೊಂಡಿದ್ದ ಸೋನು, ವೈಯಕ್ತಿಕ ಜೀವನದಲ್ಲಿ ಆದ ಬದಲಾವಣೆಯಿಂದ ಪ್ಲ್ಯಾನ್ ಮುಂದೂಡಿದ್ದರು. ಈಗ ಆ ಲಿಸ್ಟ್‌ನಲ್ಲಿ ಇದ್ದ ಹೇರ್‌ ಕಟ್‌ ಆಸೆಯನ್ನು ಸೋನು ನನಸು ಮಾಡಿಕೊಂಡಿದ್ದಾರೆ. ತಮ್ಮ ಅಪಾರ್ಟ್‌ಮೆಂಟ್‌ನಲ್ಲಿರುವ ಸಲೂನ್‌ನಲ್ಲಿ ಹೇರ್‌ ಕಟ್ ಮಾಡಿಸಿದ್ದಾರೆ.

ಕೂದಲು ಹಾಳಾಗುತ್ತಿದೆ ಹೀಗಾಗಿ ಕಟ್ ಮಾಡಿಸಬೇಕು ಎಂದು ಸೋನು ತುಂಬಾ ಬಾಬ್ ಸ್ಟೈಲ್‌ನಲ್ಲಿ ಕಟ್ ಮಾಡಿಸಿಕೊಂಡಿ ಪುಟ್ಟ ಹುಡುಗಿ ರೀತಿ ಕಾಣಿಸುತ್ತಿದ್ದಾರೆ. ಇವರ ಈ ಹೊಸ ಹೇರ್‌ ಸ್ಟೈಲ್​​ಗೆ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಹೇ.. ಸೋನು ನೀನು ಮಾಡಿರುವ ಪಾಪಗಳು ದೂರ ಆಗಬೇಕು ಅಂತ ಕಟ್ ಮಾಡಿಸಿದ್ಯಾ? ಕೂದಲ ಕಟ್ ಆದ್ಮೇಲೆ ಶನಿ ದೂರ ಆಯ್ತು ಅಂತಾನಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ : ಚೈನೀಸ್ ಹೋಟೆಲ್ ಹುಡುಗರ ‘ಚಿಲ್ಲಿ ಚಿಕನ್’ ಚಿತ್ರದ ಟೀಸರ್ ರಿಲೀಸ್​​..!

Leave a Comment

DG Ad

RELATED LATEST NEWS

Top Headlines

MLA ಮುನಿರತ್ನ ವಿರುದ್ಧ ರೇಪ್ ಆರೋಪದ ಬೆನ್ನಲ್ಲೇ ಮಾಜಿ ಕಾರ್ಪೊರೇಟರ್ ಪತಿಯ ಹನಿಟ್ರ್ಯಾಪ್ ವಿಡಿಯೋ ವೈರಲ್..!

ಬೆಂಗಳೂರು : ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಬಿಜೆಪಿ ಶಾಸಕ ಮುನಿರತ್ನ ಸೇರಿ ಏಳು ಮಂದಿಯ ವಿರುದ್ಧ ರಾಮನಗರ ಜಿಲ್ಲಾ ವ್ಯಾಪ್ತಿಯ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ

Live Cricket

Add Your Heading Text Here