ದಾಸರಹಳ್ಳಿ : ಹೆಸರಘಟ್ಟ – ನೆಲಗದರನಹಳ್ಳಿ ರಸ್ತೆ ಕಾಮಗಾರಿ ಕುಂಠಿತಗೊಂಡಿದೆ. ನೆನಗುದಿಗೆ ಬಿದ್ದ ನೆಲಗದರನಹಳ್ಳಿ ರಸ್ತೆ ಕಾಮಗಾರಿ ವಿರುದ್ದ ಇದೀಗ ದಾಸರಹಳ್ಳಿ ಮಾಜಿ ಶಾಸಕ ಮಂಜುನಾಥ್ ಆಕ್ರೋಶ ಹೊರಹಾಕಿದ್ದಾರೆ.
ಅಧಿಕಾರಿಗಳ ವಿರುದ್ಧ ಸಿಡಿದೆದ್ದ ಮಾಜಿ ಶಾಸಕ ಮಂಜುನಾಥ್, ಕಾಮಗಾರಿ ಮಾಡಲು ಒಂದು ವಾರ ಡೆಡ್ಲೈನ್ ಕೊಟ್ಟಿದ್ದಾರೆ. ಅಧಿಕಾರಿಗಳ ವಿರುದ್ದ ಸಿಡಿದೆದ್ದ ಮಾಜಿ ಶಾಸಕ ಮಂಜುನಾಥ್ ಅವರು, ಚೊಕ್ಕಸಂದ್ರ ವಾರ್ಡ್ ಬಳಿ ಜನರು ಓಡಾಡೋಕೆ ಆಗ್ತಿಲ್ಲ. ಸಪ್ತಗಿರಿ ಕಾಲೇಜು ಬಳಿ ಹೀನಾಯ ಸ್ಥಿತಿ ಇದೆ. ಇದಕ್ಕೆಲ್ಲಾ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಕಿಡಿಕಾರಿದ್ದಾರೆ.
ಒಂದು ವಾರದಲ್ಲಿ ಕಾಮಗಾರಿ ಮಾಡುವಂತೆ ಆಗ್ರಹಿಸಿದ ಮಂಜುನಾಥ್ ಅವರು, ಎಲೆಕ್ಷನ್ ನಂತರ ಕ್ಷೇತ್ರದಲ್ಲಿ ಯಾವುದೇ ಕೆಲಸ ಆಗ್ತಿಲ್ಲ. ಮಳೆ ಬಂದರೆ ಜನ ಕಣ್ಣೀರು ಹಾಕುವಂತಹ ಪರಿಸ್ಥಿತಿ ಇದೆ. ನಾನು ಅನುದಾನ ತಂದು ಕಾಮಗಾರಿ ಆರಂಭ ಮಾಡಿದ್ದೆ. ಇನ್ನು ಒಂದು ವಾರದಲ್ಲಿ ಕಾಮಗಾರಿ ಮುಗಿಯದಿದ್ದರೆ ಧರಣಿ ಕೂರ್ತೇನೆ ಎಂದು ದಾಸರಹಳ್ಳಿ ಮಾಜಿ ಶಾಸಕ ಮಂಜುನಾಥ್ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ : ಸಚಿವ ಜಮೀರ್ ಅಹ್ಮದ್ ಖಾನ್ಗೆ ಬಿಗ್ ಶಾಕ್ – ಜಮೀರ್ ವಿರುದ್ಧ ಕ್ರಮಕ್ಕೆ ರಾಜ್ಯಪಾಲರ ಸೂಚನೆ..!