ಕಿರುತೆರೆ ನಟಿ ನೇಹಾ ಗೌಡ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅಕ್ಟೋಬರ್ 29ರಂದು ನೇಹಾ ಗೌಡಗೆ ಹೆರಿಗೆಯಾಗಿದ್ದು, ಈ ಖುಷಿ ಸುದ್ದಿಯನ್ನು ಈಗ ನೇಹಾ ಹಾಗೂ ಅವರ ಪತಿ ಚಂದನ್ ಗೌಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಅಕ್ಟೋಬರ್ 29 ರಂದು ನಮ್ಮ ಮನೆಗೆ ಹೆಣ್ಣು ಮಗುವಿನ ಆಗಮನವಾಗಿದೆ. ನಾವು ತುಂಬಾ ಸಂತೋಷವಾಗಿದ್ದೇವೆ. ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದಕ್ಕೆ ಧನ್ಯವಾದಗಳು. ತಾಯಿ ಮತ್ತು ನಮ್ಮ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ, ಸಂತೋಷದಿಂದ ಇದ್ದಾರೆ. ತಂದೆ ಸ್ವಲ್ಪ ಭಾವುಕರಾಗಿದ್ದಾರೆ ಎಂದು ಬರೆದು ನೇಹಾ ಗೌಡ ತಮ್ಮ ಇನ್ಸ್ಟಾ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಫೆಬ್ರವರಿ 18, 2018ರಂದು ಬೆಂಗಳೂರಿನಲ್ಲಿ ಚಂದನ್ ಮತ್ತು ನೇಹಾ ಗೌಡ ಮದುವೆಯಾಗಿದ್ದರು. ಈ ಮದುವೆಗೆ ಕನ್ನಡ ಚಿತ್ರರಂಗದ ಹಲವು ಗಣ್ಯರು ಆಗಮಿಸಿದ್ದರು. ರಾಜಾ ರಾಣಿ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದಾರೆ. ಕಾರ್ಯಕ್ರಮದ ಒಂದು ಸಂಚಿಕೆಯಲ್ಲಿ ನೇಹಾ ಮಗು ದತ್ತು ಪಡೆದುಕೊಳ್ಳುವ ಆಸೆ ಬಗ್ಗೆ ಹಂಚಿಕೊಂಡಿದ್ದರು. ಇದೀಗ ತನ್ನದೇ ಮಗುವಿಗೆ ನಟಿ ನೇಹಾ ಜನ್ಮ ನೀಡಿದ್ದಾರೆ.
ಇದನ್ನೂ ಓದಿ : ಸಂಜೆ ವೇಳೆಗೆ ನಟ ದರ್ಶನ್ ರಿಲೀಸ್ - ಇಮೇಲ್ ಮೂಲಕ ಬಳ್ಳಾರಿ ಜೈಲ್ ತಲುಪಿದ ಆದೇಶ ಪ್ರತಿ..!