ಸಿನಿಮಾ ರಂಗ, ಕಿರುತೆರೆಗೆ ಎಂಟ್ರಿಯಾದ್ರೆ ಸಾಕು ನಟ – ನಟಿಯರು ಒಂದಲ್ಲಾ ಒಂದು ವಿಷಯದಲ್ಲಿ ಸುದ್ದಿಯಲ್ಲಿರುತ್ತಾರೆ. ಇದೀಗ ನೆಟ್ಟಿಗರ ಕಣ್ಣಿಗೆ ಬಿದ್ದವರು ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ ಅನುಶ್ರೀ ಮತ್ತು ನಟ ರಕ್ಷಿತ್ ಶೆಟ್ಟಿ. ಇವರ ಮದುವೆ ಕುರಿತು ಒಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ.
ತಮ್ಮ ನಿರೂಪಣೆ ಮೂಲಕ ಇಡೀ ಕರ್ನಾಟಕದ ಜನತೆಯ ಮನೆ ಮನ ಗೆದ್ದಿರುವ ಅನುಶ್ರೀ ಮದುವೆ ವದಂತಿ ಹಬ್ಬಿದ್ದು ಫಸ್ಟ್ ಟೈಮ್ ಅಲ್ಲ. ಈ ಹಿಂದೆಯೂ ಅನೇಕ ಬಾರಿ ಅನುಶ್ರೀ ಮದುವೆ ಬಗ್ಗೆ ಗಾಳಿಸುದ್ದಿಗಳು ಹರಿದಾಡಿದೆ.
ಇನ್ನು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸ್ಯಾಂಡಲ್ವುಡ್ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಆಗಿದ್ದಾರೆ. ಇವರ ಫ್ಯಾನ್ಸ್ ಕೂಡ ರಕ್ಷಿತ್ ವಿವಾಹ ನೋಡಲು ಕಾದು ಕುಳಿತಿದ್ದಾರೆ. ಇದರ ಮಧ್ಯೆ ಸೋಷಿಯಲ್ ಮೀಡಿಯಾದಲ್ಲಿ ರಕ್ಷಿತ್ ಶೆಟ್ಟಿ ಮತ್ತು ಅನುಶ್ರೀ ವಧು – ವರರಂತೆ ಕಾಣುತ್ತಿರುವ ಫೋಟೋ ವೈರಲ್ ಆಗಿದೆ. ಈ ಫೋಟೋ ನೋಡಿ ಅನುಶ್ರೀ ಮತ್ತು ರಕ್ಷಿತ್ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ.
ಫೋಟೋದಲ್ಲಿ ರಕ್ಷಿತ್ ಕೈ ಯಲ್ಲಿ ತಾಳಿಯೂ ಇದೆ. ಹಾಗಾಗಿ ಈ ವೈರಲ್ ಫೋಟೋ ನೋಡಿದವರಿಗೆ ಸಹಜವಾಗಿಯೇ ಇವರಿಬ್ಬರೂ ಮದುವೆಯಾಗ್ತಿದ್ದಾರೆ ಎಂದು ಅನಿಸುತ್ತದೆ. ಆಂಕರ್ ಅನುಶ್ರೀ ಮತ್ತು ನಟ ರಕ್ಷಿತ್ ಶೆಟ್ಟಿ ಮದುವೆಯಾಗಿದ್ದಾರೆ ಎಂದು ಸುದ್ದಿ ಹರಿದಾಡ್ತಿದೆ. ಆದರೆ ಅಸಲಿ ಸತ್ಯವೇ ಬೇರೆಯಾಗಿದೆ. ಆಂಕರ್ ಅನುಶ್ರೀ ಮತ್ತು ನಟ ರಕ್ಷಿತ್ ಶೆಟ್ಟಿ ಮದುವೆಯ ಈ ಫೋಟೋ ಎಡಿಟ್ ಮಾಡಿರೋದಾಗಿದೆ.
ಇದನ್ನೂ ಓದಿ : ಕೋಲಾರ : ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಚುನಾವಣಾ ಬಹಿಷ್ಕಾರ ಹಾಕಿದ ಗ್ರಾಮಸ್ಥರು..!