Download Our App

Follow us

Home » ರಾಜಕೀಯ » ನಾಳೆಯಿಂದ ನಮೋ 3.O ಇನ್ನಿಂಗ್ಸ್​​ ಶುರು – ರಾಷ್ಟ್ರಪತಿ ಭವನದಲ್ಲಿ ಮೋದಿ ಪಟ್ಟಾಭಿಷೇಕಕ್ಕೆ ಭಾರೀ ಸಿದ್ಧತೆ..!

ನಾಳೆಯಿಂದ ನಮೋ 3.O ಇನ್ನಿಂಗ್ಸ್​​ ಶುರು – ರಾಷ್ಟ್ರಪತಿ ಭವನದಲ್ಲಿ ಮೋದಿ ಪಟ್ಟಾಭಿಷೇಕಕ್ಕೆ ಭಾರೀ ಸಿದ್ಧತೆ..!

ನವದೆಹಲಿ : ಇದೇ ಜೂ.9 ರಂದು ಸಂಜೆ 7:15 ಕ್ಕೆ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ರಾಷ್ಟ್ರಪತಿ ಭವನ ಪ್ರಕಟಣೆ ಮೂಲಕ ತಿಳಿಸಿದೆ. ಪ್ರಮಾಣ ವಚನ ಸ್ವೀಕಾರ ಸಮಾರಂಭ ಕುರಿತು ರಾಷ್ಟ್ರಪತಿ ಭವನ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ರಾಷ್ಟ್ರಪತಿ ಭವನದಲ್ಲಿ ಸಮಾರಂಭ ನಡೆಯಲಿದೆ. ಪ್ರಧಾನ ಮಂತ್ರಿ ಹಾಗೂ ಮಂತ್ರಿ ಮಂಡಲದ ಇತರ ಸದಸ್ಯರಿಗೆ ಜೂ.9 ರಂದು ಸಂಜೆ 7:15ಕ್ಕೆ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಗಳು ಪ್ರಮಾಣವಚನ ಹಾಗೂ ಗೋಪ್ಯತಾ ವಿಧಿ ಬೋಧಿಸಲಿದ್ದಾರೆ ಎಂದು ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

ಇನ್ನು ರಾಷ್ಟ್ರಪತಿ ಭವನದಲ್ಲಿ ನರೇಂದ್ರ ಮೋದಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಸಲುವಾಗಿ ಭಾರೀ ಭದ್ರತೆ ಕಲ್ಪಿಸಲು ಸಿದ್ಧತೆ ನಡೆದಿದೆ. ರಾಷ್ಟ್ರಪತಿ ಭವನದ ಸುತ್ತ ಅರೆಸೇನಾ ಪಡೆ ಸಿಬ್ಬಂದಿ, ಎನ್‍ಎಸ್‍ಜಿ ಕಮಾಂಡೋಗಳು, ಡ್ರೋನ್‍ಗಳು ಮತ್ತು ಸ್ನೈಪರ್‌ಗಳ ಬಹು ಹಂತದ ಭದ್ರತೆಯನ್ನು ಕಲ್ಪಿಸಲಾಗಿದೆ. ಮೂರು ಹಂತದಲ್ಲಿ ಹೈ ಟೈಟ್​​ ಸೆಕ್ಯೂರಿಟಿ ನೀಡಲಾಗಿದ್ದು, 2500ಕ್ಕೂ ಹೆಚ್ಚು ಪೊಲೀಸರ ಭದ್ರತೆ ಒದಗಿಸಲಾಗಿದೆ.

ಈ ಕಾರ್ಯಕ್ರಮಕ್ಕೆ ಪೌರ ಕಾರ್ಮಿಕರಿಂದ ಹಿಡಿದು ವಿದೇಶಿ ಗಣ್ಯರು ಕೂಡ ಸಾಕ್ಷಿಯಾಗಲಿದ್ದಾರೆ. ಮೋದಿ ಹ್ಯಾಟ್ರಿಕ್ ಸಾಧನೆಯ ಈ ಸಮಾರಂಭಕ್ಕೆ 8 ರಿಂದ 9 ಸಾವಿರ ಮಂದಿ ಅತಿಥಿಗಳಿಗೆ ಆಹ್ವಾನ ನೀಡಿದ್ದು, ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಯಾರಿಗೆಲ್ಲ ಆಹ್ವಾನ? ಮೋದಿ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಪೌರ ಕಾರ್ಮಿಕರು, ಸೆಂಟ್ರಲ್ ವಿಸ್ತಾ ಯೋಜನೆ, ನೂತನ ಸಂಸತ್ ಕಟ್ಟಡ ನಿರ್ಮಾಣ ಕಾರ್ಮಿಕರು, ತೃತೀಯ ಲಿಂಗಿಗಳು, ಕೇಂದ್ರ ಸರ್ಕಾರದ ಕಲ್ಯಾಣ ಯೋಜನೆಗಳ ಫಲಾನುಭವಿಗಳು, ಉತ್ತರಾಖಂಡ್ ಗಣಿ ಕಾರ್ಮಿಕರ ರಕ್ಷಿಸಿದ ತಂಡ, ವಂದೇ ಭಾರತ್, ಮೆಟ್ರೋದಂಥ ರೈಲ್ವೆ ಯೋಜನೆಯಲ್ಲಿ ಪ್ರಮುಖ ಪಾತ್ರವಹಿಸಿದವರು, ಎಲ್ಲಾ ಧರ್ಮಗಳ 50 ಧರ್ಮ ಗುರುಗಳಿಗೂ ಜೊತೆಗೆ ಪದ್ಮಭೂಷಣ, ಪದ್ಮವಿಭೂಷಣ, ಪದ್ಮಶ್ರೀ ಪುರಸ್ಕøತರಿಗೆ, ವಿಕಸಿತ ಭಾರತ್ ಅಂಬಾಸಿಡರ್‍ಗಳು ಹಾಗೂ ಆದಿವಾಸಿ ಮಹಿಳೆಯರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ.

ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ, ಸೀಷೆಲ್ಸ್ ಅಧ್ಯಕ್ಷ ವಾವೆಲ್ ರಾಮ್‍ಕಾಲಾವನ್, ಭೂತಾನ್ ಪ್ರಧಾನಿ ತ್ಶೆರಿಂಗ್ ತೋಗ್ಬೆ, ಮಾರಿಷಸ್ ಪ್ರಧಾನಿ ಪ್ರವೀಂದ್ ಜುಗ್ನಾಥ್, ಬಾಂಗ್ಲಾ ದೇಶದ ಪ್ರಧಾನಿ ಶೇಖ್ ಹಸೀನಾ, ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್ ಹಾಗೂ ಮಾಲ್ಡಿವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜುಗೆ ಆಹ್ವಾನ ನೀಡಲಾಗಿದೆ.

ಇದನ್ನೂ ಓದಿ : ಮಾಧ್ಯಮ ಲೋಕದ ಭೀಷ್ಮ, ರಾಮೋಜಿ ಗ್ರೂಪ್ಸ್‌ ಸಂಸ್ಥಾಪಕರಾದ ರಾಮೋಜಿ ರಾವ್ ಇನ್ನಿಲ್ಲ..!

Leave a Comment

DG Ad

RELATED LATEST NEWS

Top Headlines

ಬಸ್ ಚಾಲಕನ ನಿಯಂತ್ರಣ ತಪ್ಪಿ ಭೀಕರ ರಸ್ತೆ ಅಪಘಾತ – 7 ಮಂದಿ ದಾರುಣ ಸಾವು..!

ಮುಂಬೈ : ಬಸ್‌ ಚಾಲಕನ ನಿಯಂತ್ರಣ ತಪ್ಪಿ ಭೀಕರ ರಸ್ತೆ ಅಪಘಾತ ಸಂಭವಿಸಿದ ಪರಿಣಾಮ 7 ಮಂದಿ ಸಾವನ್ನಪ್ಪಿರೋ ಘಟನೆ ಮುಂಬೈನ ಕುರ್ಲಾದಲ್ಲಿ ನಡೆದಿದೆ. ಟ್ರಾನ್ಸ್‌ಪೋರ್ಟ್ ಸಂಸ್ಥೆಯ ಬಸ್

Live Cricket

Add Your Heading Text Here