ಬೆಂಗಳೂರು : ಸ್ಯಾಂಡಲ್ವುಡ್ನಲ್ಲಿ ಉತ್ತಮ ಕಥೆಯುಳ್ಳ ಚಿತ್ರಗಳನ್ನು ಪ್ರೇಕ್ಷಕರು ಹೈ ಹಿಡಿದೇ ಹಿಡಿಯುತ್ತಾರೆ. ಈ ಹಿಂದೆ ವಿಶಿಷ್ಠ ಹಾಗೂ ಎಲ್ಲರನ್ನೂ ಒಳಗೊಳ್ಳುವ ಕಥೆಗಳ ಮೂಲಕ ಮೋಡಿ ಮಾಡುವ ಸಿನಿಮಾಗಳನ್ನು ಕನ್ನಡಿಗರು ಕೈ ಹಿಡಿದು ಬೆಳೆಸಿದ್ದಾರೆ. ಇದೇ ರೀತಿ ವಿಭಿನ್ನ ಕಥಾಹಂದರ ಹೊಂದಿರುವ ‘ನಾಗವಲ್ಲಿ ಬಂಗಲೆ‘ ಎಂಬ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ.
ಅರಿಷಡ್ವರ್ಗಗಳನ್ನು ಪ್ರತಿನಿಧಿಸುವ 6 ಪ್ರತಿನಿಧಿಗಳು ‘ನಾಗವಲ್ಲಿ ಬಂಗಲೆ‘ ಪ್ರವೇಶಿಸಿದ್ದಾರೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಕವಿ ರಾಜೇಶ್ ನಿರ್ದೇಶನ ಮಾಡಿದ್ದಾರೆ. ಕನ್ನಡದಲ್ಲಿ ಉತ್ತಮ ಕಂಟೆಂಟ್ವುಳ್ಳ ಚಿತ್ರಗಳೇ ಹೆಚ್ಚಾಗಿ ಜನರನ್ನು ತಲುಪುತ್ತಿದೆ. ಅಂತಹ ಉತ್ತಮ ಹಾಗೂ ವಿಭಿನ್ನ ಕಂಟೆಂಟ್ ಹೊತ್ತು “ನಾಗವಲ್ಲಿ ಬಂಗಲೆ” ನಿರ್ಮಾಣವಾಗಿದೆ.
ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ,ಮೋಹ, ಮದ, ಮತ್ಸರ ಈ ಆರು ಗುಣಗಳನ್ನು ಪ್ರತಿನಿಧಿಸುವ ಆರು ಹುಡುಗಿಯರು (ಪಾತ್ರಗಳು) “ನಾಗವಲ್ಲಿ ಬಂಗಲೆ”ಯನ್ನು ಪ್ರವೇಶಿಸುತ್ತಾರೆ. ಈ ಆರು ಪಾತ್ರಗಳ ಜೊತೆಗೆ ಮತ್ತೊಂದು ವಿಶೇಷ ಪಾತ್ರ ಸಹ ಇದೆ. ಈ ಆರು ಪಾತ್ರಗಳ ಪ್ರವೇಶದ ನಂತರ “ನಾಗವಲ್ಲಿ ಬಂಗಲೆ”ಯಲ್ಲಿ ಏನೆಲ್ಲಾ ಆಗುತ್ತದೆ. ಎಂಬುದೇ ಚಿತ್ರದ ಪ್ರಮುಖ ಕಥಾಹಂದರ.
ಈಗಾಗಲೇ ಚಿತ್ರೀಕರಣ ಮುಗಿಸಿರುವ ‘ನಾಗವಲ್ಲಿ ಬಂಗಲೆ’ ಸಿನಿಮಾವನ್ನು ಸೆನ್ಸಾರ್ ಮಂಡಳಿ ಕೂಡ ವೀಕ್ಷಿಸಿದ್ದು, ಚಿತ್ರಕ್ಕೆ ‘U/A’ ಪ್ರಮಾಣ ಪತ್ರವನ್ನು ನೀಡಿದೆ. ಬೆಂಗಳೂರು, ನೆಲಮಂಗಲದ ಆಸುಪಾಸಿನಲ್ಲಿ ಸಿನಿಮಾದ ಚಿತ್ರೀಕರಣವಾಗಿದೆ.
‘ನಾಗವಲ್ಲಿ ಬಂಗಲೆ’ ಸಿನಿಮಾವನ್ನು ಹಂಸ ವಿಷನ್ಸ್ ಲಾಂಛನದಲ್ಲಿ ನೆಲ ಮಹೇಶ್ ಮತ್ತು ನೇವಿ ಮಂಜುರವರು ನಿರ್ಮಿಸಿದ್ದಾರೆ. ಕವಿ ರಾಜೇಶ್ರವರ ನಿರ್ದೇಶನ, ರೋಹನ್ ದೇಸಾಯಿರವರ ಸಂಗೀತ, ಜೆ. ಎಮ್. ಪ್ರಹ್ಲಾದ್ ರವರ ಕಥೆ -ಚಿತ್ರಕಥೆ-ಸಂಭಾಷಣೆ ಈ ಚಿತ್ರಕ್ಕಿದೆ.
ಫೆಬ್ರುವರಿಯಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಲು ಅಣಿಯಾಗುತ್ತಿರುವ ‘ನಾಗವಲ್ಲಿ ಬಂಗಲೆ‘ ಚಿತ್ರದ ಪ್ರಮುಖ ತಾರಾಬಳಗದಲ್ಲಿ ನೆ.ಲ.ನರೇಂದ್ರಬಾಬು, ತೇಜಸ್ವಿನಿ, ನೇವಿ ಮಂಜು, ರೂಪಶ್ರೀ ಮುಂತಾದವರಿದ್ದಾರೆ.
ಇದನ್ನೂ ಓದಿ : ಅಮೆರಿಕದಲ್ಲಿರುವ ಶಿವಣ್ಣ ಫ್ಯಾಮಿಲಿಗೆ ಮತ್ತೆ ಶಾಕ್ – ಪ್ರೀತಿಯ ‘ನಿಮೋ’ ಕಳೆದುಕೊಂಡು ಕಣ್ಣೀರು!