Download Our App

Follow us

Home » ಸಿನಿಮಾ » ‘ನಾ ನಿನ್ನ ಬಿಡಲಾರೆ’ ಚಿತ್ರದ ಟೀಸರ್ ರಿಲೀಸ್​​ ಮಾಡಿದ ನಟ ಶರಣ್..!

‘ನಾ ನಿನ್ನ ಬಿಡಲಾರೆ’ ಚಿತ್ರದ ಟೀಸರ್ ರಿಲೀಸ್​​ ಮಾಡಿದ ನಟ ಶರಣ್..!

ಗುಲ್ಬರ್ಗ ಮೂಲದ ಯುವ ಪ್ರತಿಭೆ ಅಂಬಾಲಿ ಭಾರತಿ ನಾಯಕಿಯಾಗಿ ನಟಿಸುವ ಮೂಲಕ ಅವರ ತಾಯಿ ಶ್ರೀಮತಿ ಭಾರತಿ ಬಾಳಿ ನಿರ್ಮಾಣದಲ್ಲಿ ಮೂಡಿ ಬರುತ್ತಿರುವಂತಹ ‘ನಾ ನಿನ್ನ  ಬಿಡಲಾರೆ’ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಗೊಂಡಿದೆ. ಈ ಚಿತ್ರದ ಟೀಸರ್​​ರನ್ನು ನಟ ಶರಣ್ ಬಿಡುಗಡೆ ಮಾಡಿ ಹೊಸ ತಂಡಕ್ಕೆ ಸಾಥ್ ನೀಡಿದ್ದಾರೆ.

ಚಿತ್ರದ ಟೀಸರ್ ಬಿಡುಗಡೆ ಬಳಿಕ ಮಾತನಾಡಿದ ಶರಣ್ ಅವರು, ಈ ಚಿತ್ರದ ನಟಿ , ನಿರ್ಮಾಪಕಿ ಭಾರತಿರವರ ಶ್ರಮಕ್ಕೆ ತಕ್ಕ ಚಿತ್ರ ಇದಾಗಿದೆ. ಬಹಳ ಸೌಮ್ಯ ಸ್ವಭಾವವಿದ್ದರೂ ಆಸಕ್ತಿ , ಗುರಿ, ಶ್ರಮ ಎಲ್ಲಿರುತ್ತೋ ಅಲ್ಲಿ ಗೆಲುವು ಖಂಡಿತ. ಫೈಟ್ ಮಾಸ್ಟರ್ ಹೇಳಿದಂತೆ ಫೈಯರ್ ಫೈಟ್ ಆಕ್ಷನ್ ಸನ್ನಿವೇಶವನ್ನ ನಿಭಾಯಿಸಿದ ರೀತಿ ಅಪ್ಪು ಸರ್ ಅವರನ್ನ ನೆನಪಿಸುತ್ತದೆ ಎಂದರು. ಒಬ್ಬ ಹೆಣ್ಣು ಮಗಳು ಇಷ್ಟು ಶ್ರಮಪಟ್ಟು ಸಿನಿಮಾ ಮಾಡಿದ್ದಾರೆ ಎಂದರೆ ಇವರು ಪ್ರಥಮ ಪ್ರಯತ್ನದಲ್ಲಿ ಗೆದ್ದಂತಾಗಿದೆ. ಅದೇ ರೀತಿ ನಿರ್ದೇಶಕರು ಮೊದಲ ಪ್ರಯತ್ನವಾಗಿ ಒಳ್ಳೆಯ ಸಿನಿಮಾ ಮಾಡಿದ್ದಾರೆ ಎನಿಸುತ್ತಿದೆ. ನನ್ನ ಪೆವರೇಟ್ ಜಾನರ್ ಹಾರರ್. ನಾನು ನಾಲ್ಕೈದು ವರ್ಷದವ ಇದ್ದಾಗ ಅನಂತ್ ನಾಗ್, ಲಕ್ಷ್ಮೀ ಅವರ ‘ನಾ ನಿನ್ನ ಬಿಡಲಾರೆ’ ಸಿನಿಮಾ ರೀ-ರಿಲೀಸ್ ಆಗಿತ್ತು. ಆಗ ನಮ್ಮ ತಂದೆ ಆ ಚಿತ್ರ ತೋರಿಸಿದ್ದರು. ನಾನು ಎಲ್ಲಾ ಭಾಷೆಯ ದೆವ್ವಗಳ ಸಿನಿಮಾಗಳನ್ನು ತಪ್ಪದೆ ನೋಡುತ್ತೇನೆ. ಕಳೆದ ವರ್ಷ ಫೆಬ್ರವರಿಯಿಂದ ಈ ತಂಡ ನನ್ನ ಪಾಲೋ ಮಾಡತಾ ಬಂದಿದೆ. ಇವರ ಪ್ರಯತ್ನ ನನ್ನನ್ನು ಈ ವೇದಿಕೆಗೆ ಬರುವಂತೆ ಮಾಡಿದೆ. ಮೊದಲ ಪ್ರಯತ್ನದಲ್ಲೇ ಚಾಲೆಂಜ್ ಆಗಿ ಚಿತ್ರ ಮಾಡಿದ್ದಾರೆ. ಒಳ್ಳೆಯ ಸಿನಿಮಾಗಳನ್ನು ನಮ್ಮ ಕನ್ನಡಿಗರು ಕೈ ಬಿಟ್ಟಿಲ್ಲ. ಟೀಸರ್ ತುಂಬಾ ಖುಷಿ ಕೊಟ್ಟಿದೆ. ಇಡೀ ಚಿತ್ರತಂಡಕ್ಕೆ ಯಶಸ್ಸು ಸಿಗಲಿ ಎಂದು ಶುಭ ಕೋರಿದರು.

ಈ ಚಿತ್ರಕ್ಕೆ ಕಥೆ ಬರೆದು ಮೊದಲ ಬಾರಿ ನಿರ್ದೇಶನ ಮಾಡಿರುವ ನವೀನ್ .ಜಿ. ಎಸ್. ಮಾತನಾಡುತ್ತಾ ನಾನು ಕಳೆದ 8 ವರ್ಷಗಳಿಂದ ಚಿತ್ರರಂಗದ ವಿವಿಧ ವಿಭಾಗದಲ್ಲಿ ಕೆಲಸ ಮಾಡಿದ್ದೇನೆ. ಈ ಚಿತ್ರವನ್ನು ಆರಂಭಿಸಲು ನಾನು ಬಹಳಷ್ಟು ಪೂರ್ವ ತಯಾರಿಯನ್ನ ಮಾಡಿಕೊಂಡಿದ್ದೆ. ಈ ಚಿತ್ರದ ಕಥೆಯನ್ನು ನಾನು ನಟಿ ಅಂಬಾಲಿ ಭಾರತೀಯರವರಿಗೆ ಹೇಳಿದೆ. ನಿರ್ಮಾಪಕರು ಹುಡುಕಾಟ ಮಾಡುತ್ತಿದ್ದೇವು, ಆಗ ನಮ್ಮ ನಟಿಯೇ ನಮ್ಮ ಊರಿಗೆ ಬಂದು ತಾಯಿಗೆ ಈ ಕಥೆ ಹೇಳಿ , ಅವರಿಗೆ ಸಿನಿಮಾ ನಿರ್ಮಿಸುವ ಆಸೆ ಇದೆ ಎಂದು ಹೇಳಿದರು. ಅದರಂತೆ ಎಲ್ಲರೂ ಒಪ್ಪಿಕೊಂಡು ಈ ಸಿನಿಮಾಗೆ ಏನೆಲ್ಲ ಬೇಕು ಅದನ್ನು ಅವರು ನೀಡಿದ್ದಾರೆ. ಈ ಒಂದು ಚಿತ್ರ ಒಳ್ಳೆಯ ಕ್ವಾಲಿಟಿಯಲ್ಲಿ ಮಾಡಿದ್ದು , ಸೈಕಲಾಜಿಕಲ್ , ಹಾರರ್ , ಥ್ರಿಲಿಂಗ್ , ಸಸ್ಪೆನ್ಸ್ ಹಾಗೂ ಮೆಡಿಕಲ್ ಬಗ್ಗೆಯೂ ಕೂಡ ನಮ್ಮ ಚಿತ್ರದಲ್ಲಿದೆ. ಸದ್ಯ ಚಿತ್ರ ಸೆನ್ಸಾರ್ ಕಾರ್ಯ ಮುಗಿಸಿ ರಿಲೀಸ್​ಗೆ ಸಿದ್ಧವಿದೆ ನಿಮ್ಮೆಲ್ಲರ ಪ್ರೋತ್ಸಾಹ ಸಹಕಾರ ಇರಲಿ ಎಂದು ಕೇಳಿಕೊಂಡರು.

ಚಿತ್ರದ ನಾಯಕಿ ಅಂಬಾಲಿ ಭಾರತಿ ಮಾತನಾಡುತ್ತಾ ನಾನು ಮ‌ೂಲತಃ ಗುಲ್ಬರ್ಗ ಹುಡುಗಿ. ನನಗೂ ರಂಗಭೂಮಿ ನಂಟು ಇದೆ. ಒಂದಿಷ್ಟು ಸಿನಿಮಾಗಳಲ್ಲಿ ಚಿಕ್ಕಪುಟ್ಟ ಪಾತ್ರ ಮಾಡಿದ್ದೇನೆ. ನಮ್ಮ ಈ ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ಬಂದ ನಟ ಶರಣ್ ಸರ್​ಗೆ ತುಂಬಾ ಧನ್ಯವಾದಗಳು ತಿಳಿಸುತ್ತೇನೆ. ನಾನು ಅವರ ಅಭಿಮಾನಿ. ಅವರ ಮೂಲಕವೇ ನಮ್ಮ ಈ ಚಿತ್ರದ ಟೀಸರ್ ಬಿಡುಗಡೆ ಮಾಡಿಸಬೇಕೆಂಬು ಉದ್ದೇಶದಿಂದ ಕಾದು ಇಂದು ಬಿಡುಗಡೆ ಮಾಡಿಸಿದ್ದೇವೆ.

ಇನ್ನು ಈ ಒಂದು ಚಿತ್ರಕ್ಕಾಗಿ ನಾನು ಎಲ್ಲಾ ಜವಾಬ್ದಾರಿ ಹೊತ್ತುಕೊಂಡು ಈ ಸಿನಿಮಾ ಮಾಡಿದ್ದೇನೆ. ನಮ್ಮ ನಿರ್ದೇಶಕ ನವೀನ್ ಹಾಗೂ ನಾನು ಐದು ವರ್ಷದ ಗೆಳೆಯರು. ಅವರು ಈ ಕಥೆ ಹೇಳಿದರು. ನಾನು ಈ ತಂಡದ ಜೊತೆ ಸೇರಿ ನಿರ್ಮಾಪಕರನ್ನು ಹುಡುಕಿದ್ವಿ ಸೆಟ್ ಆಗಲಿಲ್ಲ. ನಂತರ ಅಮ್ಮನಿಗೆ ನಿರ್ದೇಶಕರಿಂದ ಕಥೆ ಹೇಳಿಸಿದೆ. ಅಮ್ಮ ಕಥೆ ಕೇಳಿ ನಿರ್ಮಾಣಕ್ಕೆ ಮುಂದಾದರು. ಅಮ್ಮ , ಚಿಕ್ಕಮ್ಮ ಮತ್ತು ಅಜ್ಜಿ ಅವರ ಹೆಸರುಗಳನ್ನು ಇಟ್ಟುಕೊಂಡು ಕೆ.ಯು.ಬಿ ಪ್ರೊಡಕ್ಷನ್ ಬ್ಯಾನರ್ ಮೂಲಕ ನಿರ್ಮಾಣ ಮಾಡಲಾಗಿದೆ. ನಾನು ಇಂಜನಿಯರಿಂಗ್ ಹೋಲ್ಡರ್.‌ ಇಸ್ರೋದಲ್ಲಿ ಕೆಲ ಸಮಯ ಕೆಲಸ ಮಾಡಿ ನಂತರ ಚಿತ್ರರಂಗಕ್ಕೆ ಬಂದು ಚಿಕ್ಕಪುಟ್ಟ ಪಾತ್ರಗಳನ್ನು ಮಾಡಿ ಈಗ ಈ ಚಿತ್ರದ ಮೂಲಕ ನಟಿಯಾಗಿ ಅಭಿನಯಿಸುವುದರ ಜೊತೆಗೆ ನಿರ್ಮಾಪಕಿಯಾಗಿ ಜವಾಬ್ದಾರಿಯನ್ನ ಹೊತ್ತುಕೊಂಡು ಸಿನಿಮಾ ಮಾಡಿದ್ದೇನೆ. ಹಾಗೆಯೇ ಈ ಚಿತ್ರದ ಎಲ್ಲಾ ವಿಭಾಗಗಳಲ್ಲಿ ನನ್ನನ್ನು ನಾನು ತೊಡಗಿಸಿಕೊಂಡಿದ್ದೇನೆ. ಈಗ ನಮ್ಮ ಸಿನಿಮಾಗೆ ಸೆನ್ಸಾರ್ ನಿಂದ ಯು/ಎ ಸರ್ಟಿಫಿಕೇಟ್ ಸಿಕ್ಕಿದ್ದು, ನವೆಂಬರ್​​ನಲ್ಲಿ ಸಿನಿಮಾ ರಿಲೀಸ್ ಮಾಡುವ ಪ್ಲಾನ್ ಇದೆ ಎಂದು ತಿಳಿಸಿದರು.

ಹಾಗೆಯೇ ಚಿತ್ರದ ನಾಯಕ ಪಂಚ್ಚಿ ( ಪಂಚೇಂದ್ರಿಯ) ಮಾತನಾಡುತ್ತಾ ನಾನು ಮೂಲತಃ ಥಿಯೇಟರ್ ಬ್ಯಾಗರೌಂಡ್ ನಿಂದ ಬಂದವನು. ನಾಟಕಗಳಲ್ಲಿ ತೊಡಗಿಸಿಕೊಂಡು ತದನಂತರ ‘ರಂಗಬಿರಂಗಿ’ ಸಿನಿಮಾ ಮೂಲಕ ಇಂಡಸ್ಟ್ರಿಗೆ ಬಂದೆ. ಇದು ನಾಲ್ಕನೇ ಸಿನಿಮಾ. ಈ ಚಿತ್ರದಲ್ಲಿ ನಾನು ಎಂ.ಬಿ.ಎ ವಿದ್ಯಾರ್ಥಿ. ಒಂದು ಇವೆಂಟ್ ಮುಗಿಸಿಕೊಂಡು ಬರುವಾಗ ಒಬ್ಬ ಅಪರಿಚಿತ ವ್ಯಕ್ತಿಯಿಂದ ತಿರುವು ಸಿಗುತ್ತದೆ. ನನ್ನ ಪಾತ್ರ ಕೂಡ ಬಹಳ ವಿಭಿನ್ನವಾಗಿದೆ. ನಿಮ್ಮ ಪ್ರೋತ್ಸಾಹ , ಸಹಕಾರ ನನ್ನ ಮೇಲೆ ಇರಲಿ ಎಂದರು. ಇನ್ನು ಈ ಚಿತ್ರದಲ್ಲಿ ಮಾಂತೇಶ್ , ಸೀರುಂಡೆ ರಘು, ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ, ಛಾಯಾಗ್ರಾಹಕ ವೀರೇಶ್, ಸಂಗೀತ ನಿರ್ದೇಶಕ ಎಂ.ಎಸ್. ತ್ಯಾಗರಾಜ್ ವೇದಿಕೆಯಲ್ಲಿ ತಮ್ಮ ಅನುಭವ ಹಂಚಿಕೊಂಡರು. ಬಹಳಷ್ಟು ಕುತೂಹಲವನ್ನು ಮೂಡಿಸಿರುವ ಈ ಚಿತ್ರ ಸದ್ಯದಲ್ಲೇ ತೆರೆಯ ಮೇಲೆ ಬರಲಿದೆ ಎಂದು ತಿಳಿಸಿದರು.

ಇದನ್ನೂ ಓದಿ : ಮನೆ ಮುಂದೆ ಆಟೋ ಓಡಿಸಿದ ರಾಧಿಕಾ ಕುಮಾರಸ್ವಾಮಿ – ಥ್ರಿಲ್ಲಿಂಗ್​​ ರೈಡ್​ನ ಸಸ್ಪೆನ್ಸ್​​ ಏನ್​​ ಗೊತ್ತಾ?

Leave a Comment

DG Ad

RELATED LATEST NEWS

Top Headlines

ಧಾರವಾಡದಲ್ಲಿ ಜಿಮ್‌ಗೆ ನುಗ್ಗಿದ ಕೋತಿ – ಎದ್ನೋ ಬಿದ್ನೋ ಓಡಿದ ಬಾಡಿ ಬಿಲ್ಡರ್ಸ್.. ದೃಶ್ಯ ಸಿಸಿಟಿವಿಯಲ್ಲಿ ಸೆರೆ..!

ಧಾರವಾಡ : ಕೋತಿಯೊಂದು ಜಿಮ್‌ಗೆ  ನುಗ್ಗಿದ ಘಟನೆ ಧಾರವಾಡದ ಸೈದಾಪುರದ ಕಿಂಗ್‌ಡಮ್ ಜಿಮ್​​ನಲ್ಲಿ ನಡೆದಿದೆ. ಕೋತಿ ಜಿಮ್‌ಗೆ ಬಂದ ಪರಿಣಾಮ ಯುವಕರು ಹೌಹಾರಿ ಹೊರ ಬಂದಿದ್ದಾರೆ. ಮೊದಲ‌

Live Cricket

Add Your Heading Text Here