Download Our App

Follow us

Home » ಅಪರಾಧ » ದರ್ಶನ್‌ ಗ್ಯಾಂಗ್‌ನಿಂದ ಹತ್ಯೆ ಕೇಸ್ – ಚಿಕ್ಕಣ್ಣ ಬೆನ್ನಲ್ಲೇ ಮತ್ತೋರ್ವ​ ನಟನಿಗೆ ಸಂಕಷ್ಟ..!

ದರ್ಶನ್‌ ಗ್ಯಾಂಗ್‌ನಿಂದ ಹತ್ಯೆ ಕೇಸ್ – ಚಿಕ್ಕಣ್ಣ ಬೆನ್ನಲ್ಲೇ ಮತ್ತೋರ್ವ​ ನಟನಿಗೆ ಸಂಕಷ್ಟ..!

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸೇರಿದಂತೆ 17 ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಅಷ್ಟೇ ಅಲ್ಲದೆ ಪಬ್ ಒಂದರಲ್ಲಿ ನಟ ದರ್ಶನ್ ಅಂಡ್ ಗ್ಯಾಂಗ್ ಜೊತೆ ಪಾರ್ಟಿ ಮಾಡಿದ್ದಾರೆ ಎಂಬ ಕಾರಣಕ್ಕೆ ನಟ ಚಿಕ್ಕಣ್ಣಗೆ ಪೊಲೀಸರು ನೋಟಿಸ್ ನೀಡಿದ್ದರು.

ಇನ್ನು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅಂಡ್ ಗ್ಯಾಂಗ್ ಅನ್ನು ಸ್ಟೋನಿ ಬ್ರೂಕ್ ಪಬ್​ಗೆ ಕರೆದೊಯ್ದು ಸ್ಥಳ ಮಹಜರು ನಡೆಸಲಾಗಿತ್ತು. ಇದೇ ಪಬ್ ನಲ್ಲಿ ನಡೆದ ಪಾರ್ಟಿಯಲ್ಲಿ ಚಿಕ್ಕಣ್ಣ ಭಾಗಿಯಾಗಿದ್ದರು ಎಂದು ವಿಚಾರಣೆ ವೇಳೆ ತಿಳಿದುಬಂದಿದ್ದರಿಂದ ನಿನ್ನೆ ಚಿಕ್ಕಣ್ಣರನ್ನು ಸಹ ಪಬ್​ಗೆ ಕರೆದೊಯ್ದು ಸ್ಥಳ ಮಹಜರು ನಡೆಸಲಾಗಿದೆ.

ನಂತರ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಗೆ ಚಿಕ್ಕಣ್ಣನನ್ನು ಕರೆತಂದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಚಿಕ್ಕಣ್ಣ ವಿಚಾರಣೆ ವೇಳೆ ತನ್ನ ಜೊತೆ ಗರಡಿ ಚಿತ್ರದ ನಟ ಯಶಸ್ ಸೂರ್ಯ ಸಹ ಅಂದು ಸ್ಟೋನಿ ಬ್ರೂಕ್​​ ಪಬ್​ಗೆ ಬಂದಿದ್ದರು ಎಂಬ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಸದ್ಯ ಪೊಲೀಸರು ಯಶಸ್ ಸೂರ್ಯಗೆ ನೋಟಿಸ್ ನೀಡುವ ಸಾಧ್ಯತೆ ಇದೆ.

ಯಶಸ್​ ಸೂರ್ಯ ಅವರನ್ನು ಸ್ಟೋನಿಬ್ರೂಕ್​ ಪಬ್​ಗೆ ಕರೆದುಕೊಂಡು ಹೋಗಿ ಇಂಚಿಂಚೂ ಮಾಹಿತಿ ಕಲೆ ಹಾಕಲು ಸಿದ್ದತೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು ಪ್ರಕರಣದಲ್ಲಿ ಪೊಲೀಸರು ಚಿಕ್ಕಣ್ಣರನ್ನು ಸಾಕ್ಷಿಯನ್ನಾಗಿ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ : ರಾಯ್​ಬರೇಲಿ ಕ್ಷೇತ್ರ ಉಳಿಸಿಕೊಂಡ ರಾಹುಲ್ ಗಾಂಧಿ – ವಯನಾಡಿನಿಂದ ಪ್ರಿಯಾಂಕಾ ಸ್ಪರ್ಧೆ..!

Leave a Comment

DG Ad

RELATED LATEST NEWS

Top Headlines

ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ವೇನಲ್ಲಿ ಡಿವೈಡರ್​​ಗೆ ಡಿಕ್ಕಿ ಹೊಡೆದ ಕಾರು – ತಾಯಿ, ಮಗ ಸ್ಥಳದಲ್ಲೇ ಸಾವು..!

ಮಂಡ್ಯ : ಮೈಸೂರು-ಬೆಂಗಳೂರು ಎಕ್ಸ್​ಪ್ರೆಸ್​ ವೇ ನಲ್ಲಿ ಭೀಕರ ರಸ್ತೆ ಅಪಘಾತಕ್ಕೆ ತಾಯಿ ಮಗ ಬಲಿಯಾಗಿರುವ ಘಟನೆ ನಡೆದಿದೆ. ರುದ್ರಾಕ್ಷಿಪುರ ಗ್ರಾಮದ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಕಾರಿನಲ್ಲಿ

Live Cricket

Add Your Heading Text Here